More

    VIDEO: ‘ಅಂದು ಅಪಹಾಸ್ಯ ಮಾಡಿದರು, ಖಿನ್ನತೆಗೆ ಜಾರಿದೆ… ನೋವನ್ನೇ ಚಾಲೆಂಜ್‌ ಆಗಿ ಸ್ವೀಕರಿಸಿ ಮಿಸ್‌ ಯೂನಿವರ್ಸ್‌ ಆದೆ!’

    ಚಂಡೀಗಢ: ಇಸ್ರೇಲ್‌ನಲ್ಲಿ ನಡೆದ 70ನೇ ವಿಶ್ವ ಭುವನ ಸುಂದರಿ ಸ್ಪರ್ಧೆಯಲ್ಲಿ ಭಾರತದ ಹರ್ನಾಜ್ ಸಂಧು ಅವರು ಭುವನ ಸುಂದರಿಯಾಗಿ ಹೊರಹೊಮ್ಮಿದ್ದಾರೆ. ಭಾರತಕ್ಕೆ ಎರಡು ದಶಕಗಳ ಬಳಿಕ ಭುವನ ಸುಂದರಿಯ ಪಟ್ಟವನ್ನು ಕೊಟ್ಟ ಹರ್ನಾಜ್ ಸಂಧು ಅವರು ಸಾಗಿ ಬಂದ ಹಾದಿ ಬಹಳ ಕಠಿಣವಾದದ್ದು.

    ಇಸ್ರೇಲ್‌ನ ದಕ್ಷಿಣ ನಗರವಾದ ಇಲಾಟ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಅಂತಿಮ ಸುತ್ತಿನಲ್ಲಿ ಜಯ ಸಾಧಿಸುವ ಜತೆಗೆ, ಮಿಸ್‌ ಯೂನಿವರ್ಸ್‌ ಕಿರೀಟವನ್ನು ತನ್ನದಾಗಿಸಿಕೊಂಡಿರುವ ಚಂಡೀಗಢದ ಹರ್ನಾಜ್‌, ಬಾಲ್ಯದಲ್ಲಿಯೇ ಖಿನ್ನತೆಗೆ ಒಳಗಾಗಿದ್ದರು. ಇದಕ್ಕೆ ಕಾರಣ, ಈಕೆ ತೀರಾ ತೆಳ್ಳಗಿದ್ದುದು.

    ಉಳಿದ ಮಕ್ಕಳಿಗಿಂತಲೂ ತುಂಬಾ ತೆಳ್ಳಗಿದ್ದ ಹರ್ನಾಜ್‌ಳನ್ನು ಶಾಲೆಯಲ್ಲಿ ಮಕ್ಕಳು ಛೇಡಿಸುತ್ತಿದ್ದಂತೆ. ಅಪೌಷ್ಠಿಕತೆಯಿಂದ ಬಳಲುತ್ತಿರುವವರಂತೆ ಕಾಣಿಸುತ್ತಿದ್ದಿ ಎಂದು ಹಲವರು ಹಂಗಿಸುತ್ತಿದ್ದಂತೆ. ಇದೇ ಕಾರಣದಿಂದ ತಾವು ಖಿನ್ನತೆಗೆ ಜಾರಿದುದ್ದಾಗಿ ಹರ್ನಾಜ್‌ ಹೇಳಿದ್ದಾರೆ. ಶಾಲೆಗೆ ಹೋಗುವುದು, ಜನರ ಜತೆ ಬೆರೆಯುವುದು ಎಂದರೆ ತೀರಾ ಮುಜುಗುರವಾಗುತ್ತಿತ್ತು. ನನ್ನನ್ನು ನೋಡಿದವರೆಲ್ಲಾ ಒಂದು ರೀತಿಯ ಮುಖದ ಭಾವನೆ ವ್ಯಕ್ತಪಡಿಸುತ್ತಿದ್ದರು. ಅದಕ್ಕಾಗಿ ನಾನು ಖಿನ್ನತೆಗೆ ಜಾರಿದ್ದೆ ಎಂದಿದ್ದಾರೆ ಹರ್ನಾಜ್‌. 

    ಆದರೆ ಬರುಬರುತ್ತಾ ತೆಳ್ಳಗಿನ ಶರೀರವನ್ನೇ ಜೀವನದ ಸಾಧನೆಗಾಗಿ ಏಕೆ ರೆಡಿ ಮಾಡಬಾರದು ಎಂದುಕೊಂಡ ಹರ್ನಾಜ್‌, ಅದೇ ನಿಟ್ಟಿನಲ್ಲಿ ಮುಂದುವರೆದರು. ಮಾಡೆಲ್‌ಗಳಿಗೆ ಎಷ್ಟು ತೆಳ್ಳಗಿನ ಶರೀರ ಬೇಕೋ ಅಷ್ಟರ ಮಟ್ಟಿಗೆ ತಮ್ಮ ಶರೀರವನ್ನು ರೆಡಿ ಮಾಡುವುದಾಗಿ ಪಣತೊಟ್ಟ ಅವರು, ಅದೇ ನಿಟ್ಟಿನಲ್ಲಿ ಸಾಗಿದರು. ಇದಕ್ಕೆ ಇವರ ಕುಟುಂಬ ಸಾಕಷ್ಟು ಸಹಕಾರ ನೀಡಿತು. ಕುದುರೆ ಸವಾರಿ, ಈಜನ್ನು ಕಲಿತರು. ಶರೀರವನ್ನು ಸ್ವಲ್ಪ ದಷ್ಟಪುಷ್ಠ ಮಾಡುವತ್ತ ಗಮನ ಕೊಟ್ಟರು. 

    ಇದೀಗ ಅವರ ಶ್ರಮ ಫಲಕೊಟ್ಟಿದೆ. ಅಪಹಾಸ್ಯ ಮಾಡಿದವರೇ ಇಂದು ಬೆರಗುಗಣ್ಣಿನಿಂದ ನೋಡುವಂತೆ ಮಾಡುವಷ್ಟರ ಮಟ್ಟಿಗೆ ಬೆಳೆದು ನಿಂತು ಇಪ್ಪತ್ತು ವರ್ಷಗಳ ಬಳಿಕ ಭಾರತಕ್ಕೆ ಮಿಸ್‌ ಯೂನಿವರ್ಸ್‌ ಪಟ್ಟ ಕೊಟ್ಟಿದ್ದಾರೆ ಹರ್ನಾಜ್‌.  ಮಾಡೆಲಿಂಗ್‌ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಗುರಿಸಾಧಿಸಿದ್ದಾರೆ ಈಕೆ.

    ಹರ್ನಾಜ್‌ ತಮ್ಮ ಆರಂಭಿಕ ಶಿಕ್ಷಣವನ್ನು ಚಂಡೀಗಢದ ಶಿವಾಲಿಕ್ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆಸಿದರು. ಅಲ್ಲಿಯೇ ಪದವಿ, ಸ್ನಾತಕೋತ್ತರ ಪದವಿಯನ್ನೂ ಪೂರೈಸಿದರು. 21 ನೇ ವಯಸ್ಸಿನಲ್ಲಿ, ಅನೇಕ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುತ್ತಲೇ ಅಧ್ಯಯನ ಮುಂದುವರೆಸಿದರು. 2017 ರಲ್ಲಿ ಟೈಮ್ಸ್ ಫ್ರೆಶ್ ಫೇಸ್ ಮಿಸ್ ಚಂಡೀಗಢ, 2018 ರಲ್ಲಿ ಮಿಸ್ ಮ್ಯಾಕ್ಸ್ ಎಮರ್ಜಿಂಗ್ ಸ್ಟಾರ್, 2019 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಪಂಜಾಬ್ ಕಿರೀಟ ಮುಡಿಗೇರಿಸಿಕೊಂಡರು. ನಂತರ ಇದೀಗ ಮಿಸ್‌ ಯೂನಿವರ್ಸ್‌ ಆಗಿ ಹೊರಹೊಮ್ಮಿದ್ದಾರೆ.

    2000ನೇ ಸಾಲಿನಲ್ಲಿ ಲಾರಾ ದತ್ತ ಭುವನ ಸುಂದರಿಯಾದ ಬಳಿಕ ಭಾರತದ ಪಾಲಿಗೆ ಈ ಕಿರೀಟ ನನಸಾಗಿಯೇ ಉಳಿದಿತ್ತು. ಲಾರಾ ಅವರಿಗೂ ಮುನ್ನ 1994ರಲ್ಲಿ ಸುಷ್ಮಿತಾ ಸೇನ್‌ ಅವರು ಭುವನ ಸುಂದರಿಯ ಪಟ್ಟ ಏರಿದ್ದರು.

    ‘ನೀವು ಹೇಗೆ ವ್ಯವಹರಿಸಬೇಕು ಎಂಬುದನ್ನು ವೀಕ್ಷಿಸುವ ಯುವತಿಯರಿಗೆ ನೀವು ಏನು ಸಲಹೆ ನೀಡುತ್ತೀರಿ. ಅವರು ಇಂದು ಎದುರಿಸುತ್ತಿರುವ ಒತ್ತಡಗಳು ಏನು?, ಎಂದು ಅಂತಿಮ ಸುತ್ತಿನಲ್ಲಿ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಹರ್ನಾಜ್‌, ’ಇಂದಿನ ಯುವಜನರು ಎದುರಿಸುತ್ತಿರುವ ದೊಡ್ಡ ಸವಾಲೆಂದರೆ ಅದು ತಮ್ಮನ್ನು ತಾವು ನಂಬುವುದು. ನಿಮ್ಮನ್ನು ನೀವು ಅನನ್ಯರು ಎಂದು ತಿಳಿದುಕೊಳ್ಳುವುದು ನಿಮ್ಮನ್ನು ಸುಂದರವಾಗಿಸುತ್ತದೆ. ನಿಮ್ಮನ್ನು ಇತರರೊಂದಿಗೆ ಹೋಲಿಸುವುದನ್ನು ನಿಲ್ಲಿಸಿ ಮತ್ತು ಪ್ರಪಂಚದಾದ್ಯಂತ ನಡೆಯುತ್ತಿರುವ ಹೆಚ್ಚು ಮುಖ್ಯವಾದ ವಿಷಯಗಳ ಬಗ್ಗೆ ಮಾತನಾಡಿ’ ಎಂದು ಉತ್ತರಿಸಿದ್ದರು. ಈ ಉತ್ತರ ಅವರನ್ನು ಭುವನ ಸುಂದರಿ ಪಟ್ಟಕ್ಕೇರಿಸಿದೆ.

     
     
     
     
     
    View this post on Instagram
     
     
     
     
     
     
     
     
     
     
     

    A post shared by Miss Universe (@missuniverse)

    ಭುವನ ಸುಂದರಿ ಸ್ಪರ್ಧೆಯ ಅಂತಿಮ ಸುತ್ತಿನ ನೋಟ ಇಲ್ಲಿದೆ:

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts