

ಮುಂಬೈ: ಗೆಳೆಯ ನಿನಗಾಗಿ ಕಾಯುತ್ತಿರುವೆ, ವಾಪಸ್ ಬಾ... ನೀನು ನನ್ನೊಂದಿಗೆ ಇಲ್ಲ ಎಂದು ಅರೆ ಕ್ಷಣವೂ ಯೋಚಿಸಲಾಗುತ್ತಿಲ್ಲ, ಎಲ್ಲವೂ ನೀನೇ ಆಗಿದ್ದೆ, ಎಲ್ಲಿಗೆ ಹೋದೆ.... ಬೇಗ ಬಾ... ಚಂದ್ರನಲ್ಲಿ ನೀನಿದ್ದಿಯಾ ಎಂದು ಗೊತ್ತು... ಅಲ್ಲಿ ಟೆಲಿಸ್ಕೋಪ್‌ನಿಂದ ನೋಡಿಯೇ ನನ್ನನ್ನು ಕಾಪಾಡುವೆ ಅಲ್ವಾ...?
ಕಳೆದ ವರ್ಷ ಇದೇ ದಿನ ಎಂದರೆ ಜೂನ್ 14ರಂದು ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರನ್ನು ನೆನೆದುಕೊಂಡು ಅವರ ಸ್ನೇಹಿತೆ ನಟಿ ರಿಯಾ ಚಕ್ರವರ್ತಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ದುಃಖವನ್ನು ತೋಡಿಕೊಂಡಿದ್ದಾರೆ.
‘ನೀನಿಲ್ಲದೇ ವರ್ಷವಾಯಿತು. ಸಮಯ ಕಳೆದಂತೆ ಬದುಕು ಸರಿ ಆಗುತ್ತದೆ, ಎಲ್ಲವೂ ಸರಿಯಾಗಿ ಹೋಗುತ್ತದೆ ಎಂದೇ ಎಲ್ಲರೂ ಎನ್ನುತ್ತಾರೆ. ಆದರೆ ನನಗೆ ಮಾತ್ರ ಸಮಯ ಮತ್ತು ಎಲ್ಲವೂ ನೀನೇ ಆಗಿದ್ದೆ. ಪ್ರತಿಕ್ಷಣವೂ ನಿನಗಾಗಿ ವೇಟ್ ಮಾಡುತ್ತಿದ್ದೇನೆ. ನೀನು ಬಂದು ನನ್ನನ್ನು ಪಿಕ್ ಮಾಡುತ್ತೀಯಾ ಅಂತ ನಿರೀಕ್ಷೆಯಲ್ಲಿರುತ್ತೇನೆ. ಪ್ರತಿ ದಿನ ನಿನಗಾಗಿ ಹುಡುಕಾಟ ನಡೆಸಿ, ಕೊನೆಗೆ ಸೋತು ಕುಸಿಯುತ್ತೇನೆ. ನೀನೇ ನನ್ನ ಗಾರ್ಡಿಯನ್, ಚಂದ್ರನಲ್ಲಿದ್ದರೂ ನನ್ನನ್ನು ರಕ್ಷಿಸುವೆ ಎಂದು ಗೊತ್ತು ಎಂದು ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.
ಸುಶಾಂತ್ ಜತೆಗಿನ ಫೋಟೋ ಶೇರ್ ಮಾಡಿಕೊಂಡು ಈ ಸಾಲುಗಳನ್ನು ಬರೆದುಕೊಂಡಿದ್ದಾರೆ.
ಮುಂಬೈನ ಬಾಂದ್ರಾ ನಿವಾಸದಲ್ಲಿ ಸುಶಾಂತ್ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣ ಡ್ರಗ್ಸ್ ತಿರುವು ಪಡೆದುಕೊಂಡಿತ್ತು. ನಂತರ ಇದೇ ಪ್ರಕರಣದಲ್ಲಿ ರಿಯಾ ಚಕ್ರವರ್ತಿ, ಶೌವಿಕ್ ಚಕ್ರವರ್ತಿ ಜೈಲಿಗೂ ಹೋಗಿ ಬಂದಿದ್ದಾರೆ.