ಹುಡುಗಿ ಫಿಕ್ಸ್‌ ಆದ್ರೂ ಮದ್ವೆಯಾಕೆ ಮಾಡ್ತಿಲ್ಲ? ಟವರ್‌ ಏರಿ ಕುಳಿತ ವಿಜಯನಗರದ ಕುವರ!

marriage
Published on

ವಿಜಯನಗರ: ಮದುವೆಗಾಗಿ ಕಾತರನಾಗಿರುವ ಯುವಕನೊಬ್ಬ ಬೇಗ ಮದುವೆ ಮಾಡಿ ಅಂತ ಟವರ್ ಕಂಬವೇರಿ ಕುಳಿತಿರುವ ಘಟನೆ ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿಯಲ್ಲಿ ನಡೆದಿದೆ.

ಚಿರಂಜೀವಿ (23) ಎಂಬ ಯುವಕ ಈ ಕೃತ್ಯ ಎಸಗಿದ್ದಾನೆ. ಈತನಿಗೆ ಹುಡುಗಿ ಫಿಕ್ಸ್‌ ಆಗಿದ್ದು, ಮದುವೆಗೆ ವಿಳಂಬ ಆಗುತ್ತಿದೆ. ಈ ಕಾರಣದಿಂದ ಸಿಟ್ಟಿಗೆದ್ದಿರುವ ಯುವಕ, ಹುಡುಗಿ ಫೀಕ್ಸ್ ಮಾಡಿದ ಮೇಲೆ ಮದುವೆ ಮಾಡೋದ್ಯಾಕೆ ತಡ ಎಂದು ಪ್ರತಿಭಟನೆ ರೂಪದಲ್ಲಿ ಟವರ್‌ ಏರಿದ್ದಾನೆ.

ಜಿರಂಜೀವಿಯ ಪಾಲಕರಿಗೆ ಇಬ್ಬರು ಗಂಡು ಮಕ್ಕಳು, ಈತ ಚಿಕ್ಕವನು. ದೊಡ್ಡ ಹುಡುಗನಿಗೆ ಮದುವೆಯಿನ್ನೂ ಆಗಲಿಲ್ಲ. ಆದ್ದರಿಂದ ಮೊದಲು ಅವನಿಗೆ ಮಾಡಿ ನಂತರ ಈತನಿಗೆ ಮಾಡುವ ಸಲುವಾಗಿ ಮದುವೆ ವಿಳಂಬ ಮಾಡುತ್ತಿದ್ದಾರೆ. ಇದರಿಂದ ಚಿರಂಜೀವಿ ರೊಚ್ಚಿಗೆದಿದ್ದಾನೆ. ಮದುವೆಗೆಂದು ಹುಡುಗಿ ಫಿಕ್ಸ್‌ ಮಾಡಿ ಮಾತುಕತೆ ನಡೆದಿದ್ದರೂ ಅಣ್ಣನಿಗಾಗಿ ಕಾಯುತ್ತಿರುವುದು ಸರಿಯಲ್ಲ ಎನ್ನುವುದು ಈತನ ಹೇಳಿಕೆ.

ನನಗೆ ಮದುವೆ ಬೇಕು ಅಂತ ಈ ಹಿಂದೆಯೂ ಸಾಕಷ್ಟು ಹಠ ಮಾಡಿದ್ದನಂತೆ ಈತ. ಆದರೆ ಮನೆಯವರು ಕೇಳದ ಕಾರಣ ಹೀಗೆ ಮಾಡಿದ್ದಾನೆ. ಕೊನೆಗೆ ವಿಷಯವನ್ನು ಪೊಲೀಸರಿಗೆ ಮುಟ್ಟಿಸಲಾಗಿದೆ. ಕೊನೆಗೂ ಹರಸಾಹಸ ಮಾಡಿ, ಮನವೊಲಿಸಿ ಟವರ್ ನಿಂದ ಕೆಳಗಿಳಿಸುವಲ್ಲಿ ಪೊಲೀಸರು ಮತ್ತು ಸ್ಥಳೀಯರು ಯಶಸ್ವಿಯಾಗಿದ್ದಾರೆ. ಟವರ್‌ನಿಂದ ಜಿಗಿದರೆ ರಕ್ಷಣೆ ಮಾಡಲು ಪೊಲೀಸರು ಮುಂಜಾಗ್ರತ ಕ್ರಮವಾಗಿ ಬಲೆಯನ್ನು ಒಡ್ಡಿ ನಿಂತಿದ್ದರು.

ನಾನು ಇಳಿದ ಮೇಲೆ ನನಗ್ಯಾರು ಹೊಡಿಬಾರದು ಅಂತ ಷರತ್ತು ಹಾಕಿ ಅಂತೂ ಕೆಳಕ್ಕೆ ಇಳಿದಿದ್ದಾನೆ ಚಿರಂಜೀವಿ.

ಇಲ್ಲಿದೆ ನೋಡಿ ವಿಡಿಯೋ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net