

ನವದೆಹಲಿ: ರೈತರ ಪ್ರತಿಭಟನೆಯ ಹೆಸರಿನಲ್ಲಿ ಗಣರಾಜ್ಯೋತ್ಸವದ ದಿನ ಹಿಂಸಾಚಾರಕ್ಕೆ ಇಳಿದವರ ಇನ್ನಷ್ಟು ಫೋಟೋಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.
ದೆಹಲಿಯ ಕೆಂಪುಕೋಟೆ ಬಳಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದಾಗಲೇ 200ಕ್ಕೂ ಅಧಿಕ ಮಂದಿಯ ಫೋಟೋ ಬಿಡುಗಡೆಯಾಗಿದ್ದು, ಇದೀಗ ಮತ್ತೆ 20 ಮಂದಿಯ ಫೋಟೋ ಬಿಡುಗಡೆಯಾಗಿದೆ.
ಘಟನೆ ನಡೆದಿರುವ ದಿನ ತೆಗೆಯಲಾಗಿರುವ ವಿವಿಧ ವಿಡಿಯೋಗಳನ್ನು ಹಾಗೂ ಸ್ಥಳೀಯವಾಗಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳ ಆಧಾರದ ಮೇಲೆ, ಫೋಟೋಗಳನ್ನು ಸ್ಕ್ಯಾನ್ ಮಾಡಿ ಫೋಟೋಗಳನ್ನು ಬಿಡುಗಡೆ ಮಾಡಲಾಗುತ್ತಿದೆ.
ಪ್ರತಿಭಟನೆ ಹೆಸರಿನಲ್ಲಿ ಹಿಂಸಾಚಾರ ಮಾಡಬಹುದಾದ ವಿವರಣೆ ಕುರಿತಂತೆ ಇರುವ ಟೂಲ್‌ಟಿಕ್ ಹಗರಣ ಒಂದೆಡೆ ಸುದ್ದಿಯಾಗುತ್ತಿದ್ದರೆ, ಇದೀಗ ಹಿಂಸಾಚಾರದಲ್ಲಿ ಭಾಗಿಯಾಗಿರುವ ದೊಡ್ಡದೊಡ್ಡ ಪಾತಕಿಗಳ ಫೋಟೋ ಬಿಡುಗಡೆಗೊಳ್ಳುತ್ತಲಿದೆ. ಇವರಲ್ಲಿ ಕೆಲವರು ಇದಾಗಲೇ ತಲೆ ಮರೆಸಿಕೊಂಡಿದ್ದಾರೆ. ಆದರೆ ಎಲ್ಲರನ್ನೂ ಪತ್ತೆ ಹಚ್ಚಿ ಹಿಡಿಯುವ ಕಾರ್ಯ ಮಾಡುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ. ಇದಾಗಲೇ ಕೆಲವು ವಿಧ್ವಂಸಕರು ಈಗ ಕಂಬಿಯ ಹಿಂದೆ ಇದ್ದಾರೆ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ಸ್ ಮಾಡಿ