ನಟನ ಒಳ ಉಡುಪು ನೋಡಲು ಹೀಗೆಲ್ಲಾ ಮಾಡ್ತಾರಾ ರಶ್ಮಿಕಾ? ಛೇ ಎಂದ ಅಭಿಮಾನಿಗಳು

rashmika
Published on

ಮುಂಬೈ: ಸದ್ಯ ಬೇಡಿಕೆಯಲ್ಲಿರುವ ನಟಿಯರ ಪೈಕಿ ರಶ್ಮಿಕಾ ಮಂದಣ್ಣ ಕೂಡ ಒಬ್ಬರು. ಸದಾ ಒಂದಿಲ್ಲೊಂದು ಘಟನೆಯಿಂದ ಇತ್ತೀಚೆಗೆ ಇವರು ಸುದ್ದಿಯಾಗುತ್ತಲೇ ಇದ್ದಾರೆ. ಈಚೆಗಷ್ಟೇ ಸೈಮಾ ಅವಾರ್ಡ್ಸ್​ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಕೆಂಪು ಬಣ್ಣದ ಡ್ರೆಸ್‌ ತೊಟ್ಟಿದ್ದು ಕೂಡ ಸುದ್ದಿಯಾಗಿತ್ತು. ಏಕೆಂದರೆ ಇದು ದೀಪಿಕಾ ಪಡುಕೋಣೆ ಅವರ ಡ್ರೆಸ್‌ ರೀತಿಯಲ್ಲಿಯೇ ಕಾಪಿ ಮಾಡಲಾಗಿದೆ ಎಂದು ಚರ್ಚೆಗೆ ಗ್ರಾಸವಾಗಿತ್ತು.

ಇದೀಗ ಬಾಲಿವುಡ್‌ ನಟ ವಿಕ್ಕಿ ಕೌಶಲ್​ ಆವರು ತೊಟ್ಟ ಒಳ ಉಡುಪಿಗೆ ಸಂಬಂಧಿಸಿದಂತೆ ಭಾರಿ ಚರ್ಚೆಗೆ ಗ್ರಾಸವಾಗಿರುವ ರಶ್ಮಿಕಾ, ಕೆಲವು ಅಭಿಮಾನಿಗಳ ಅಸಹನೆಗೂ ಕಾರಣರಾಗಿದ್ದಾರೆ.

ಅಷ್ಟಕ್ಕೂ ರಶ್ಮಿಕಾ ಏಕೆ ವಿಕ್ಕಿ ಅವರ ಒಳ ಉಡುಪು ನೋಡಿದರು ಎಂದರೆ ಇದು ಜಾಹೀರಾತು. ಜಾಹೀರಾತಿನ ಮೂಲಕವೂ ಕೋಟಿಗಟ್ಟಲೆ ಸಂಪಾದಿಸುತ್ತಿರುವ ರಶ್ಮಿಕಾ ವಿಕ್ಕಿ ಅವರ ಜತೆಯಲ್ಲಿ ಪುರುಷರ ಒಳ ಉಡುಪಿನ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಜಾಹೀರಾತಿನಲ್ಲಿ ರಶ್ಮಿಕಾ ಯೋಗ ಟೀಚರ್‌. ವಿಕ್ಕಿ ಕೌಶಲ್​ ಅವರ ವಿದ್ಯಾರ್ಥಿ. ಯೋಗ ಮಾಡುವಾಗ ವಿಕ್ಕಿ ಎರಡೂ ಕೈ ಮೇಲೆ ಎತ್ತುತ್ತಾರೆ. ಆ ಸಂದರ್ಭದಲ್ಲಿ ಅವರ ಸೊಂಟದ ಭಾಗದಲ್ಲಿ ಅವರ ಒಳಉಡುಪಿನ ಪಟ್ಟಿ ಕಾಣಿಸುತ್ತದೆ. ರಶ್ಮಿಕಾ ಅದನ್ನು ಕಂಡು ಆಕರ್ಷಿತರಾಗುತ್ತಾರೆ. ಯೋಗ ಹೇಳಿಕೊಡುವುದನ್ನೇ ನಿಲ್ಲಿಸಿ, ಒಂದು ಕ್ಷಣ ಮೈಮರೆತು ಬಿಡುತ್ತಾರೆ!

ಇದೊಂದು ಆದರೆ, ಇದೇ ಬ್ರ್ಯಾಂಡ್‌ ನಿಕ್ಕರ್‌ ಜಾಹೀರಾತಿನಲ್ಲಿ ಯೋಗ ಕ್ಲಾಸ್​ ಮಾಡುವಲ್ಲಿ ವಿಕ್ಕಿ ಬರುತ್ತಾರೆ. ಅವನ ನಿಕ್ಕರ್‌ ನೋಡುವ ಸಲುವಾಗಿ ರಶ್ಮಿಕಾ ಯೋಗ ಮ್ಯಾಟ್​​ ಅನ್ನು ಎತ್ತರದ ಜಾಗದಲ್ಲಿ ಇಟ್ಟಿರುತ್ತಾರೆ. ಅದನ್ನು ತೆಗೆದುಕೊಳ್ಳಲು ವಿಕ್ಕಿ ಕೈ ಎತ್ತಿದಾಗ ಒಳಉಡುಪಿನ ಪಟ್ಟಿ ಕಂಡಾಗ ರಶ್ಮಿಕಾ ಅದನ್ನು ನೋಡಿ ಖುಷಿಪಡುತ್ತಾರೆ.

ಇದೊಂದು ರೀತಿಯಲ್ಲಿ ಅಸಹ್ಯ ಹುಟ್ಟಿಸುತ್ತದೆ ಎಂದು ಖುದ್ದು ರಶ್ಮಿಕಾ ಅಭಿಮಾನಿಗಳೇ ಬೇಸರ ವ್ಯಕ್ತಪಡಿಸಿದ್ದಾರೆ. ಯಾವುದಾದರೂ ಮಹಿಳೆ ಹೀಗೆ ಪುರುಷರ ಒಳಉಡುಪು ನೋಡಿ ಮಹಿಳೆ ಆಕರ್ಷಿತಳಾಗುತ್ತಾಳಾ ಎಂದು ಪ್ರಶ್ನಿಸಿದರೆ, ಹೆಣ್ಣುಮಕ್ಕಳ ಮನಸ್ಥಿತಿಯನ್ನು ಇಷ್ಟು ಕೀಳಾಗಿ ಬಿಂಬಿಸಲಾಗಿದ್ದು, ಅದಕ್ಕೆ ಈ ನಟಿಗೆ ಬುದ್ಧಿ ಇರಲಿಲ್ಲವಾ ಎಂದಿದ್ದಾರೆ ಕೆಲವರು. ಒಂದು ವೇಳೆ ಈ ಜಾಹೀರಾತಿನಲ್ಲಿ ಹುಡುಗಿ ಜಾಗದಲ್ಲಿ ಹುಡುಗ ಇದ್ದು, ಆಕೆಯ ಒಳಉಡುಪು ಕಂಡು ಹುಡುಗನೇ ಈ ರೀತಿ ವರ್ತಿಸಿದ್ದರೆ ಅದು ವಿವಾದಕ್ಕೆ ಕಾರಣ ಆಗುತ್ತಿರಲಿಲ್ಲವೆ ಎಂಬ ಪ್ರಶ್ನೆಗಳೂ ಸುಳಿದಾಡುತ್ತಿವೆ.

ಅದೇ ಇನ್ನೊಂದೆಡೆ ದುಡ್ಡು ಕೊಟ್ಟರೆ ಒಳ ಉಡುಪು ನೋಡುವುದು ಮಾತ್ರವಲ್ಲದೇ ಏನು ಮಾಡಲು ಇಂಥವರು ಹೇಸುವುದಿಲ್ಲ ಎಂದು ಅನೇಕ ಮಂದಿ ಕಮೆಂಟ್‌ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net