ಕುಪ್ಪೂರು ಸಂಸ್ಥಾನಕ್ಕೆ ಉತ್ತರಾಧಿಕಾರಿಯಾಗಿ ಬಾಲಕ ತೇಜಸ್: ಕಣ್ಣೀರಲ್ಲಿ ಅಪ್ಪ-ಅಮ್ಮ

swamiji
ಉತ್ತರಾಧಿಕಾರಿ ತೇಜಸ್‌ ಹಾಗೂ ಲಿಂಗೈಕ್ಯರಾದ ಡಾ.ಯತೀಶ್ವರ ಸ್ವಾಮೀಜಿ
Published on

ತುಮಕೂರು: ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕು ಕುಪ್ಪೂರು ಗದ್ದುಗೆ ಸಂಸ್ಥಾನ ಮಠದ ಪೀಠಾಧ್ಯ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ(48) ನಿನ್ನೆ ಶನಿವಾರ ಲಿಂಗೈಕ್ಯರಾದರು. ಜ್ವರದಿಂದ ಬಳಲುತ್ತಿದ್ದ ಸ್ವಾಮೀಜಿ ಅವರಿಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.

ಅವರ ಸ್ಥಾನಕ್ಕೆ ಇದೀಗ ಕುಪ್ಪೂರು ಸಂಸ್ಥಾನಕ್ಕೆ ಉತ್ತರಾಧಿಕಾರಿಯಾಗಿ ಎಸ್‌ಎಸ್‌ಎಲ್‌ಸಿ ಓದುತ್ತಿರುವ ಬಾಲಕ ತೇಜಸ್‌ನನ್ನು ನೇಮಕ ಮಾಡಲಾಗಿದೆ. ಡಾ.ಯತೀಶ್ವರ ಸ್ವಾಮೀಜಿ ಅವರ ಸಹೋದರ ಸಂಬಂಧಿ ಈ ಬಾಲಕ. ಯತೀಶ್ವರ ಸ್ವಾಮೀಜಿ ಅವರ ಅಂತಿಮ ವಿಧಿವಿಧಾನಗಳು ನೇರವೇರಿಸುವ ಮುನ್ನ ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಲಾಗಿದ್ದು, 15 ವರ್ಷದ ತೇಜಸ್‌ನನ್ನು ನೇಮಕ ಮಾಡಲಾಗಿದೆ.

ಮಗನನ್ನು ಸನ್ಯಾಸ್ಯತ್ವಕ್ಕೆ ಕಳಿಸುತ್ತಿದ್ದಂತೆಯೇ ಇತ್ತ ತಂದೆ ತಾಯಿಗಳ ದುಃಖ ಮುಗಿಲುಮುಟ್ಟಿದೆ. ಮಗನನ್ನು ತಬ್ಬಿಕೊಂಡು ತಾಯಿ ಕಾಂತಾಮಣಿ ತಂದೆ ಮಹೇಶ್ ಮತ್ತು ಕುಟುಂಬಸ್ಥರು ದುಃಖಿಸುತ್ತಿರುವ ದೃಶ್ಯ ನೋಡಗರನ್ನು ಅರೆಕ್ಷಣ ಕಣ್ಣೀರಲ್ಲಿ ತೇಲಿಸಿತು. ಮಗನನ್ನು ಬಿಟ್ಟು ಇರುವುದನ್ನು ನೆನೆಸಿಕೊಂಡ ತಾಯಿ ಕಣ್ಣೀರಿಡುತ್ತಲೇ ಮಗನನ್ನು ಬೀಳ್ಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net