ಗದ್ದೆ ಉಳುಮೆ ಮಾಡಿದ್ರು ರಶ್ಮಿಕಾ ಮಂದಣ್ಣ- ವಿಡಿಯೋ ವೈರಲ್​

rashhmika
Published on

ಬೆಂಗಳೂರು: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದ್ದಾರೆ. ಅದಕ್ಕೆ ಕಾರಣ, ಅವರು ಗದ್ದೆಯಲ್ಲಿ ಮಣ್ಣನ್ನು ಹದಗೊಳಿಸುತ್ತಿದ್ದಾರೆ!

ಉಳುಮೆ ಮಾಡುವ ಮುನ್ನ ಯಂತ್ರದ ನೆರವಿನಿಂದ ಗದ್ದೆಯಲ್ಲಿ ಉಳುಮೆ ಮಾಡುವ ಫೋಟೋ ಅನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಶೇರ್​ ಮಾಡಿಕೊಂಡಿರುವ ಈ ನಟಿ, ಇದೀಗ ಅಭಿಮಾನಿಗಳ ಭರಪೂರ ಶ್ಲಾಘನೆಗೆ ಒಳಗಾಗಿದ್ದಾರೆ.

ಆದರೆ ವಾಸ್ತವದಲ್ಲಿ ಅವರೇನೂ ನಿಜವಾಗಿ ಹೊಲ ಉಳುಮೆ ಮಾಡುತ್ತಿಲ್ಲ, ಹಾಗೆಂದು ಫೋಟೋಗೂ ಪೋಸ್​ ಕೊಡ್ತಿಲ್ಲ. ಅಷ್ಟಕ್ಕೂ ಇನ್​ಸ್ಟಾಗ್ರಾಂನ ಈ ವಿಡಿಯೋದ ನಿಜವಾದ ರಹಸ್ಯ ಏನು ಎಂದರೆ, ಇದು ಸಿನಿಮಾ ಒಂದರ ಶೂಟಿಂಗ್​!

ಹೌದು. ಕನ್ನಡ ಸೇರಿದಂತೆ ತೆಲುಗು ಹಾಗೂ ತಮಿಳು ಭಾಷೆಯ ಚಿತ್ರಗಳಲ್ಲಿ ಸದ್ಯ ಶೂಟಿಂಗ್​ನಲ್ಲಿರುವ ರಶ್ಮಿಕಾ ತಮಿಳಿನ ಸುಲ್ತಾನ್ ಎಂಬ ಚಿತ್ರಕ್ಕಾಗಿ ಈ ಉಳುಮೆ ಮಾಡಿದ್ದಾರೆ. ಇದರಲ್ಲಿ ಇವರ ಪಾತ್ರ ರೈತ ಮಹಿಳೆಯದ್ದು, ಆದ್ದರಿಂದ ರೈತ ಮಹಿಳೆಯಂತೆ ವೇಷ ಹಾಕಿಕೊಂಡು ಉಳುಮೆ ಮಾಡಿದ್ದು, ಅದರ ವಿಡಿಯೋ ಅನ್ನು ಶೇರ್​ ಮಾಡಿಕೊಂಡಿದ್ದಾರೆ.

ವಿಡಿಯೋ ನೋಡಿದವರ ಪೈಕಿ ಹಲವರು ನಿಜವಾಗಿಯೂ ರಶ್ಮಿಕಾ ಯಾವುದೋ ಹಳ್ಳಿಗೆ ಹೋಗಿ ಉಳುಮೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದುಕೊಂಡಿದ್ದರೆ, ಇನ್ನು ಕೆಲವರು ಇದು ಫೋಟೋಗಾಗಿ ನೀಡಿರುವ ಪೋಸ್​ ಎಂದಿದ್ದಾರೆ. ಆದರೆ ವಾಸ್ತವಾಂಶವನ್ನು ರಶ್ಮಿಕಾ ಅಲ್ಲಿಯೇ ಬರೆದುಕೊಂಡಿದ್ದಾರೆ. ಇದು ಚಿತ್ರದ ಶೂಟಿಂಗ್​ ಎಂದಿರುವ ಅವರು ಚಿತ್ರೀಕರಣದ ವೇಳೆ ತಮಗಾದ ಸಂತಸ ಹೇಳಿಕೊಂಡಿದ್ದಾರೆ.

ನೀವೂ ನೋಡಿ ಈ ವಿಡಿಯೋ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net