VIDEO: ಮೈಸೂರಿನ ಬಾಯ್​ಫ್ರೆಂಡ್​ ಜತೆ ಪೊಲೀಸ್ ಠಾಣೆಗೆ ಹೋಗಿ ಗಳಗಳನೆ ಅತ್ತ ರಾಖಿ ಸಾವಂತ್​!

1287597
Published on

ಮುಂಬೈ: ತನಗಿಂತ ವಯಸ್ಸಿನಲ್ಲಿ ಚಿಕ್ಕವನಾಗಿರುವ ಮೈಸೂರಿನ ಆದಿಲ್​ ಖಾನ್​ನನ್ನು ತನ್ನ ಹೊಸ ಬಾಯ್​ಫ್ರೆಂಡ್ ಎಂದು ಪರಿಚಯ ಮಾಡಿಸಿ, ಭಾರಿ ಸುದ್ದಿಯಾಗಿರುವ ಹಾಟ್​ ನಟಿ ರಾಖಿ ಸಾವಂತ್​ ಇದೀಗ ಈತನ ಜತೆ ಪೊಲೀಸ್ ಠಾಣೆಯಲ್ಲಿ ಕಾಣಿಸಿಕೊಂಡಿದ್ದು, ಒಂದೇ ಸಮನೆ ಗಳಗಳ ಅತ್ತಿದ್ದಾರೆ.

ಮುಂಬೈನ ಓಶಿವಾರಾ ಪೊಲೀಸ್ ಠಾಣೆಗೆ ಆದಿಲ್ ಖಾನ್​ನನ್ನು ಕರೆದುಕೊಂಡು ಹೋಗಿರುವ ರಾಖಿ, ಬಿಟ್ಟೂಬಿಡದೇ ಅತ್ತಿದ್ದಾರೆ. ಜತೆಗೆ ಮಾಜಿ ಗಂಡನ ವಿರುದ್ಧ ದೂರು ದಾಖಲಿಸಿದ್ದಾರೆ. ಆದಿಲ್​ ಅದೆಷ್ಟೇ ಸಮಾಧಾನಪಡಿಸಿದರೂ ಆಕೆ ಸಮಾಧಾನ ಆಗುತ್ತಿಲ್ಲ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ಭಾರಿ ವೈರಲ್​ ಆಗಿದೆ.

ಅಷ್ಟಕ್ಕೂ ರಾಖಿಗೆ ಆಗಿದ್ದೇನು ಎಂದರೆ, ಈಕೆಯ ಮಾಜಿ ಪತಿ ರಿತೇಶ್ ತುಂಬಾ ಹಿಂಸೆ ನೀಡುತ್ತಿದ್ದಾರಂತೆ! ಅವರ ವಿರುದ್ಧ ರಾಖಿ ಠಾಣೆಯಲ್ಲಿ ದೂರು ದಾಖಲು ಮಾಡಿ, ನಂತರ ಮಾಧ್ಯಮದವರ ಎದುರು ಕೂಡ ಕಣ್ಣೀರಿಟ್ಟಿದ್ದಾರೆ. ನಾನು ಆದಿಲ್ ಖಾನ್ ಜತೆ ಸಂತೋಷವಾಗಿ ಇದ್ದೇನೆ. ಆದರೆ ಇದನ್ನು ರಿತೇಶ್ ಸಹಿಸುತ್ತಿಲ್ಲ. ಹೇಗಾದರೂ ಮಾಡಿ ನಮ್ಮಿಬ್ಬರ ಸಂಬಂಧ ಹಾಳು ಮಾಡಲು ಯೋಚಿಸಿದ್ದಾನೆ. ನಿನ್ನ ಜೀವನ ನಾಶ ಮಾಡ್ತೀನಿ ಅಂತ ನನಗೆ ಬೆದರಿಕೆ ಹಾಕಿದ್ದಾನೆ ಅಂತ ದೂರಿನಲ್ಲಿ ಹೇಳಿದ್ದಾರೆ.

‘ರಿತೇಶ್ ನನಗೆ ತುಂಬಾ ತೊಂದರೆ ನೀಡುತ್ತಿದ್ದಾನೆ. ಅವನು ನನ್ನ ಇನ್ಸ್‌ಸ್ಟಾಗ್ರಾಮ್, ಫೇಸ್‌ಬುಕ್ ಮತ್ತು ನನ್ನ ಜಿಮೇಲ್ ಖಾತೆಯನ್ನು ಹ್ಯಾಕ್ ಮಾಡಿದ್ದಾನೆ. ನಾವು ಒಟ್ಟಿಗೆ ಇದ್ದಾಗ ಅವನು ನನ್ನ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ವಹಿಸುತ್ತಿದ್ದನು ಮತ್ತು ನಾವು ಬೇರ್ಪಟ್ಟ ನಂತರ ಅವನ ಮೇಲೆ ಭರವಸೆಯಿಂದಾಗಿ ಪಾಸ್‌ವರ್ಡ್‌ಗಳನ್ನು ಬದಲಾಯಿಸಲಿಲ್ಲ. ಅದನ್ನು ಆತ ಮಿಸ್​ಯೂಸ್​ ಮಾಡಿಕೊಳ್ಳುತ್ತಿದ್ದಾನೆ. ಅವನು ನನ್ನ ಎಲ್ಲಾ ಖಾತೆಗಳಲ್ಲಿ ಅವನ ಸಂಖ್ಯೆ ಮತ್ತು ಹೆಸರನ್ನು ನಮೂದಿಸಿದ್ದಾನೆ ಎಂದು ಗೋಳೋ ಎಂದಿದ್ದಾರೆ ರಾಖಿ.

ಆತ ನನ್ನ ಫೋನ್ ಕಾಲ್ ರಿಸೀವ್ ಮಾಡುತ್ತಿಲ್ಲ. ನನ್ನ ಖಾತೆಯಲ್ಲಿ ಕೆಲವು ಟಿ.ವಿ. ಚಾನೆಲ್​ಗಳ ಬಗ್ಗೆ ಅಸಹ್ಯವಾದ ವಿಷಯವನ್ನು ಬರೆಯುತ್ತಿದ್ದಾನೆ. ನಾನು ಅದನ್ನು ಬರೆಯುತ್ತಿದ್ದೇನೆ ಎಂದು ಜನರೆಲ್ಲ ಭಾವಿಸುತ್ತಾರೆ. ಅವರು ನನ್ನನ್ನು ಚಾನಲ್‌ನಿಂದ ನಿಷೇಧಿಸಬೇಕು ಮತ್ತು ಸಲ್ಮಾನ್ ಖಾನ್ ಭಾಯ್ ಅವರೊಂದಿಗಿನ ನನ್ನ ಸಂಬಂಧವನ್ನು ಹಾಳುಮಾಡಬೇಕೆಂಬುದು ರಿತೇಶ್ ಉದ್ದೇಶ. ಇನ್ಸ್​ಟಾಗ್ರಾಮ್​ನಲ್ಲಿ ಸೆಲೆಬ್ರಿಟಿಗಳು ಪೋಸ್ಟ್​ ಮಾಡಿದರೆ ಅದಕ್ಕೂ ದುಡ್ಡು ಸಿಗುತ್ತದೆ, ಅದನ್ನೆಲ್ಲಾ ತಾನೇ ತೆಗೆದುಕೊಳ್ಳುತ್ತಿದ್ದಾನೆ, ಜತೆಗೆ ನನ್ನ ವರ್ಚಸ್ಸನ್ನು ಹಾಳು ಮಾಡುತ್ತಿದ್ದಾನೆ' ಎಂದು ರಾಖಿ ಕಣ್ಣೀರಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net