ಭಾರಿ ಮಳೆಗೆ ಹಳಿ ತಪ್ಪಿದ ರೈಲು: ಒಂಬತ್ತು ಬೋಗಿಗಳು ನದಿಗೆ- ನಸುಕಿನಲ್ಲಿ ಭಯಾನಕ ಘಟನೆ

rail
Published on

ಭುವನೇಶ್ವರ: ಸರಕು ಸಾಗಣೆ ರೈಲೊಂದು ಹಳಿ ತಪ್ಪಿದ ಪರಿಣಾಮ ಒಂಬತ್ತು ಬೋಗಿಗಳು ನದಿಗೆ ಬಿದ್ದಿರುವ ಭಯಾನಕ ಘಟನೆ ಒಡಿಶಾ ಸಮೀಪ ನಡೆದಿದೆ.

ಆಯಂಗುಲ್-ಟಾಲ್ಚೆರ್ ರೈಲ್ವೆ ಮಾರ್ಗದಲ್ಲಿ ಈ ಘಟನೆ ಸಂಭವಿಸಿದೆ. ಇಂದು ಬೆಳಗಿನ ಜಾವ ಈ ಅನಾಹುತ ನಡೆದಿದೆ. ಫಿರೋಜ್ ಪುರ್‌ನಿಂದ ಖುದ್ರಾಗೆ ತೆರಳುತ್ತಿದ್ದ ಸರಕು ಸಾಗಣೆ ರೈಲು ಇದಾಗಿದೆ. ನಂದಿರಾ ಸೇತುವೆ ಬಳಿ ಹಳಿ ತಪ್ಪಿದ್ದರಿಂದ ಈ ಅಪಘಾತ ಸಂಭವಿಸಿದೆ.

ಗೋಧಿಯನ್ನು ಹೊತ್ತೊಯ್ಯುತ್ತಿದ್ದ ರೈಲು ಹಳಿ ತಪ್ಪಿದೆ. ಇನ್ನು ಎಂಜಿನ್​ ಟ್ರ್ಯಾಕ್​ ಮೇಲೆ ಇರುವುದರಿಂದ ರೈಲು ಚಾಲಕ ಮತ್ತು ಇತರೆ ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ. ಒಂಬತ್ತು ಬೋಗಿಗಳು ನದಿಗೆ ಬಿದ್ದಿದ್ದು, ಘಟನೆಯಲ್ಲಿ ರೈಲಿನ ಚಾಲಕ, ಇತರ ಸಿಬ್ಬಂದಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ರೈಲು ಹಳಿತಪ್ಪಿದ ಘಟನೆ ನಡೆದ ನಂತರ ಈ ಮಾರ್ಗದಲ್ಲಿ ಸಂಚರಿಸುವ 12 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಭಾರೀ ಮಳೆ ಸುರಿಯುತ್ತಿದ್ದು, ಈ ಕಾರಣದಿಂದ ಅಪಘಾತ ಸಂಭವಿಸಿದೆ, ಕಳೆದ ಎರಡು ದಿನಗಳಿಂದ ಟಾಲ್ಚೆರ್ ಪ್ರದೇಶದಲ್ಲಿ ದಾಖಲೆಯ 394 ಮಿಲಿ ಮೀಟರ್ ಮಳೆಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net