ಮುತ್ತಪ್ಪ ರೈ ಮಗನಿಗೆ ಡ್ರಗ್ಸ್​ ನಂಟು? ನಸುಕಿನಲ್ಲಿಯೇ ಸಿಸಿಬಿ ಶಾಕ್​- ಮನೆ ಮೇಲೆ ದಾಳಿ

muttappa rai1
Published on

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರ ಮನೆಯ ಮೇಲೆ ಬೆಳ್ಳಂಬೆಳಗ್ಗೆ ದಾಳಿ ಮಾಡಿ ಸಿಬಿಐ ಶಾಕ್​ ನೀಡಿದ್ದರೆ, ಇಂದು ಸಿಸಿಬಿ ಪೊಲೀಸರು ನಸುಕಿನಲ್ಲಿಯೇ ಮುತ್ತಪ್ಪ ರೈ ಅವರ ಮಗನ ಮನೆಯ ಮೇಲೆ ದಾಳಿ ನಡೆಸಿದ್ದಾರೆ.

ಈಚೆಗಷ್ಟೇ ಮೃತಪಟ್ಟಿರುವ ಮುತ್ತಪ್ಪ ರೈ ಅವರ ಮಗ ಡ್ರಗ್ಸ್ ಜಾಲದ ನಂಟು ಹೊಂದಿದ್ದಾರೆ ಎನ್ನುವ ಗುಮಾನಿಯ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ರಿಕ್ಕಿ ಮಂಗಳೂರು ಹಾಗೂ ಮುಂಬೈ ಡ್ರಗ್ ಪೆಡ್ಲರ್​​ಗಳ ಜತೆ ಸಂಪರ್ಕ ಹೊಂದಿದ ಶಂಕೆ ಇದೆ.

ರಿಕ್ಕಿ ವಿರುದ್ಧ ಸಂಪೂರ್ಣ ಮಾಹಿತಿ ಕಲೆ ಹಾಕಿರುವ ಸಿಸಿಬಿ ಪೊಲೀಸರು, ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದು ಅವರಿಗೆ ಸೇರಿರುವ ಎರಡು ಮನೆಗಳು ಸೇರಿದಂತೆ ಕೆಲವು ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ಬಿಡದಿ ಮತ್ತು ಬೆಂಗಳೂರಿನ ವೈಯಾಲಿಕಾವಲ್ ಮನೆ ಸೇರಿದಂತೆ ವಿವಿಧ ಕಡೆಗಳಲ್ಲಿ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಎಸಿಬಿ ವೇಣುಗೋಪಾಲ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಶೋಧನಾ ಕಾರ್ಯ ಮುಂದುವರೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net