More

    ಚುನಾವಣಾಧಿಕಾರಿಯಾಗಿ ತೃತೀಯ ಲಿಂಗಿ: ಇತಿಹಾಸ ಸೃಷ್ಟಿಸಿದ ಬಿಹಾರ

    ಬಿಹಾರ: ತೃತೀಯ ಲಿಂಗಿಯರು ಇಂದು ಅನೇಕ ಕ್ಷೇತ್ರಗಳಲ್ಲಿ ಮುಂದೆ ಬರುತ್ತಿದ್ದಾರೆ. ಇದಾಗಲೇ ಕೆಲವು ಇಲಾಖೆಗಳಲ್ಲಿ ಉತ್ತಮ ಸ್ಥಾನಗಳನ್ನೂ ಪಡೆದುಕೊಂಡಿದ್ದಾರೆ.

    ಇದೀಗ ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಗೆ ಅಧಿಕಾರಿಯಾಗಿ ತೃತೀಯ ಲಿಂಗಿಯೊಬ್ಬರು ನೇಮಕಗೊಂಡಿದ್ದಾರೆ. ಬಿಹಾರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಇವರು ನೇಮಕಗೊಂಡಿದ್ದಾರೆ.

    ಅ.28 ರಂದು ನಡೆಯಲಿರುವ ಚುನಾವಣೆಗೆ 32 ವರ್ಷದ ಮೋನಿಕಾ ದಾಸ್​ ಚುನಾವಣೆಗೆ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ತೃತೀಯ ಲಿಂಗಿ ಅಧಿಕಾರಿಯೊಬ್ಬರನ್ನು ನೇಮಕ ಮಾಡಿರುವ ಇತಿಹಾಸವನ್ನು ಇದೀಗ ಬಿಹಾರ ಹೊಂದಿದೆ.

    ಇದನ್ನೂ ಓದಿ: ನೋಟು ಮುಟ್ಟುವಿರಾ? ಹುಷಾರ್​! ಹುಷಾರ್​! ಆರ್​ಬಿಐನಿಂದ ಬಂದಿದೆ ಆತಂಕದ ವರದಿ

    ಮೋನಿಕಾ ದಾಸ್ ಪಾಟ್ನಾ ವಿವಿಯಲ್ಲಿ ಚಿನ್ನದ ಪದಕ ವಿಜೇತೆ. 2015 ರಿಂದ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಕೆಲಸ ಮಾಡಿದ ಮೊದಲ ತೃತೀಯ ಲಿಂಗಿ ಎಂಬ ಹೆಗ್ಗಳಿಕೆಯೂ ಇವರದ್ದು. ಅವರಿಗೆ ಚುನಾವಣೆಗೆ ಸಂಬಂಧಿಸಿದ ಎಲ್ಲಾ ತರಬೇತಿಗಳನ್ನು ನೀಡಲಾಗುವುದು ಎಂದು ಬಿಹಾರದ ಚುನಾವಣಾ ಆಯುಕ್ತ ಎಚ್.ಆರ್. ಶ್ರೀನಿವಾಸ ತಿಳಿಸಿದ್ದಾರೆ.

    ಬಿಹಾರದಲ್ಲಿ ಲಿಂಗಪರಿವರ್ತನೆಗೊಂಡ 2,344 ಮಂದಿ ಮತದಾನಕ್ಕೆ ಅರ್ಹರಾಗಿದ್ದಾರೆ. ರಾಷ್ಟ್ರೀಯ ತೃತೀಯಲಿಂಗಿಗಳ ಪರಿಷತ್ ಮೋನಿಕಾ ದಾಸ್ ಅವರ ನೇಕಮದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಇದು ತಮ್ಮ ಸಮುದಾಯಕ್ಕೆ ಹೆಮ್ಮೆಯ ಸಂಗತಿ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.

    2016 ರಲ್ಲಿ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ರಿಯಾ ಸರ್ಕಾರ್ ಎಂಬ ಲಿಂಗಪರಿವರ್ತನೆಗೊಂಡ ಮಹಿಳೆಯನ್ನು ಪೊಲೀಂಗ್ ಅಧಿಕಾರಿಯಾಗಿ ನೇಮಕ ಮಾಡಲಾಗಿತ್ತು.

    ಡಿಕೆಶಿ ಮನೆ ಮೇಲೆ ಸಿಬಿಐ ದಾಳಿಗೆ ಕಾರಣವೇನು? ₹50 ಲಕ್ಷ ಸೀಜ್​, ಕೆಪಿಸಿಸಿ ಅಧ್ಯಕ್ಷ ಅರೆಸ್ಟ್​?

    ನೋಟು ಮುಟ್ಟುವಿರಾ? ಹುಷಾರ್​! ಹುಷಾರ್​! ಆರ್​ಬಿಐನಿಂದ ಬಂದಿದೆ ಆತಂಕದ ವರದಿ

    ಕನಸಿನ ವಧುವಿಗೆ ವಕೀಲ ಹಾಕಿದ್ದಾನೊಂದು ಕಂಡೀಷನ್:​ ಸಿಗಲು ಸಾಧ್ಯನಾ? ಏನಂತೀರಿ ನೀವು?

    ಕನಸಿನ ವಧುವಿಗೆ ವಕೀಲ ಹಾಕಿದ್ದಾನೊಂದು ಕಂಡೀಷನ್:​ ಸಿಗಲು ಸಾಧ್ಯನಾ? ಏನಂತೀರಿ ನೀವು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts