More

    ನೋಟು ಮುಟ್ಟುವಿರಾ? ಹುಷಾರ್​! ಹುಷಾರ್​! ಆರ್​ಬಿಐನಿಂದ ಬಂದಿದೆ ಆತಂಕದ ವರದಿ

    ನವದೆಹಲಿ: ಕ್ಷಣ ಕ್ಷಣಕ್ಕೂ ಕರೊನಾ ವಿಶ್ವಾದ್ಯಂತ ಆತಂಕ ಸೃಷ್ಟಿಸುತ್ತಲೇ ಸಾಗಿದೆ. ಇದನ್ನು ಸಂಪೂರ್ಣ ನಿರ್ಮೂಲನ ಮಾಡಲು ಔಷಧಗಳು ಇನ್ನೂ ಸಂಪೂರ್ಣ ಯಶಸ್ವಿಯಾಗದಿದ್ದರೂ, ಇದರ ಹರಡುವಿಕೆ ಕುರಿತಂತೆ ಮಾತ್ರ ಆಗಾಗ್ಗೆ ಶಾಕಿಂಗ್​ ಸುದ್ದಿಗಳು ಬರುತ್ತಲೇ ಇವೆ.

    ಇದೀಗ ಖುದ್ದಿ ರಿಸರ್ವ್​ ಬ್ಯಾಂಕ್​ ಆಫ್​ ಇಂಡಿಯಾದಿಂದಲೇ ಆತಂಕಕಾರಿ ವರದಿಯೊಂದು ಬಂದಿದೆ. ಅದೇನೆಂದರೆ, ಕರೆನ್ಸಿ ನೋಟುಗಳ ಮುಖಾಂತರವೂ ಸೋಂಕು ಹರಡುತ್ತಿದೆ ಎನ್ನುವ ವರದಿ ಇದು. ಈ ಕುರಿತು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟವು (ಸಿಎಐಟಿ) ಮಾಹಿತಿ ನೀಡಿದ್ದು, ಕರೆನ್ಸಿ ನೋಟುಗಳ ಮೂಲಕ ಕರೊನಾ ಹರಡಬಹುದಾದ ಸಾಧ್ಯತೆ ಇದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸುಳಿವು ನೀಡಿದೆ ಎಂದು ಹೇಳಿದೆ.

    ಕರೆನ್ಸಿ ನೋಟುಗಳ ಮೂಲಕವು ಕರೊನಾ ಸೇರಿದಂತೆ ಇತರ ಸೋಂಕು, ಬ್ಯಾಕ್ಟೀರಿಯಾ ಹರಡಬಹುದಾದ ಸಾಧ್ಯತೆ ಇದೆ. ನೋಟುಗಳು ಕರೊನಾ ವೈರಸ್ ಹರಡುವ ಸಂಭಾವ್ಯ ವಾಹಕಗಳಾಗಿವೆ ಎಂದು ರಿಸರ್ವ್ ಬ್ಯಾಂಕ್ ಆಫ್​ ಇಂಡಿಯಾ ಹೇಳಿರುವುದಾಗಿ ಸಿಎಐಟಿ ವರದಿ ಮಾಡಿದೆ.

    ಇದನ್ನೂ ಓದಿ: ಡಿಕೆಶಿ ಮನೆ ಮೇಲೆ ಸಿಬಿಐ ದಾಳಿಗೆ ಕಾರಣವೇನು? ₹50 ಲಕ್ಷ ಸೀಜ್​, ಕೆಪಿಸಿಸಿ ಅಧ್ಯಕ್ಷ ಅರೆಸ್ಟ್​?

    ಸಿಎಐಟಿ ವತಿಯಿಂದ2020ರ ಮಾರ್ಚ್​ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದು ಕರೆನ್ಸಿ ನೋಟುಗಳು ಬ್ಯಾಕ್ಟೀರಿಯಾ ಮತ್ತು ವೈರಸ್​ಗಳ ವಾಹಕಗಳಾಗಿರುವ ಸಾಧ್ಯತೆ ಇದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಕೇಳಲಾಗಿತ್ತು.

    ಹಣಕಾಸು ಸಚಿವಾಲಯ ಈ ಪತ್ರವನ್ನು ಭಾರತೀಯ ರಿಸರ್ವ್ ಬ್ಯಾಂಕ್​ಗೆ ರವಾನಿಸಿದ್ದು ಆರ್.ಬಿ.ಐ.ನಿಂದ ಸಿಎಐಟಿಗೆ ಉತ್ತರ ನೀಡಲಾಗಿದೆ.
    ಇದನ್ನು ತಪ್ಪಿಸುವ ಉದ್ದೇಶದಿಂದ ಡಿಜಿಟಲ್ ಪಾವತಿಯನ್ನು ಹೆಚ್ಚು ಬಳಕೆ ಮಾಡಬೇಕೆಂದು ಸುಳಿವು ನೀಡಿದೆ ಎಂದು ಸಿಎಐಟಿ ರಾಷ್ಟ್ರೀಯ ಅಧ್ಯಕ್ಷ ಬಿ.ಸಿ. ಭಾರ್ತಿಯಾ ಮತ್ತು ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ ವಾಲ್ ಹೇಳಿದ್ದಾರೆ.

    ಡಿಜಿಟಲ್ ವಹಿವಾಟಿಗೆ ವಿಧಿಸುವ ಬ್ಯಾಂಕ್ ಶುಲ್ಕಗಳನ್ನು ಮನ್ನಾ ಮಾಡಬೇಕು. ಬ್ಯಾಂಕ್ ಶುಲ್ಕಗಳಿಗೆ ಬದಲಾಗಿ ಸರ್ಕಾರ ನೇರವಾಗಿ ಬ್ಯಾಂಕುಗಳಿಗೆ ಸಹಾಯ ಧನ ನೀಡಬೇಕು. ಇಂತಹ ಸಬ್ಸಿಡಿಗಳಿಂದ ಸರ್ಕಾರದ ಮೇಲೆ ಆರ್ಥಿಕ ಹೊರೆ ಆಗುವುದಿಲ್ಲ. ಇದು ಬ್ಯಾಂಕ್ ನೋಟುಗಳ ಮುದ್ರಣಕ್ಕೆ ಆಗುವ ವೆಚ್ಚವನ್ನು ಕಡಿಮೆ ಮಾಡುತ್ತದೆ ಎಂದು ಆರ್ ಬಿಐ ಮಾಹಿತಿ ನೀಡಿದೆ ಎಂದು ಹೇಳಲಾಗಿದೆ.

    ಡಿಕೆಶಿ ಮನೆ ಮೇಲೆ ಸಿಬಿಐ ದಾಳಿಗೆ ಕಾರಣವೇನು? ₹50 ಲಕ್ಷ ಸೀಜ್​, ಕೆಪಿಸಿಸಿ ಅಧ್ಯಕ್ಷ ಅರೆಸ್ಟ್​?

    ಕನಸಿನ ವಧುವಿಗೆ ವಕೀಲ ಹಾಕಿದ್ದಾನೊಂದು ಕಂಡೀಷನ್:​ ಸಿಗಲು ಸಾಧ್ಯನಾ? ಏನಂತೀರಿ ನೀವು?

    ಡಿಕೆಶಿಗೆ ಡಬಲ್​ ಶಾಕ್​! ಆದಾಯ ಮೀರಿ ಆಸ್ತಿ ಗಳಿಕೆ ಆರೋಪ- ದಾಖಲಾಯ್ತು ಎಫ್​ಐಆರ್​

    ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ: ದುಷ್ಟತನದ ಪರಮಾವಧಿ ಎಂದ ಸಿದ್ದುಗೆ ಕಮೆಂಟಿಗರಿಂದ ಗುದ್ದೋ ಗುದ್ದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts