

ನವದೆಹಲಿ: ಖಾಸಗಿ ಆಸ್ಪತ್ರೆಗಳಲ್ಲಿ ಕರೊನಾ ಲಸಿಕೆಯ ಹೆಸರಿನಲ್ಲಿ ಲೂಟಿ ಮಾಡುತ್ತಿರುವ ಆರೋಪ ಕೇಳಿಬಂದ ಬೆನ್ನಲ್ಲೇ ಕೇಂದ್ರ ಸರ್ಕಾರ ಎಲ್ಲಾ ಲಸಿಕೆಗಳಿಗೆ ದರವನ್ನು ನಿಗದಿ ಮಾಡಿದೆ. ಈಗ ನಿಗದಿ ಮಾಡಿರುವ ದರಕ್ಕಿಂತ ಸರ್ವೀಸ್ ಚಾರ್ಜ್ ಎಂದು 150 ರೂಪಾಯಿಗಳಷ್ಟೇ ಹೆಚ್ಚಿಗೆ ಪಡೆಯಬೇಕು ಎಂದು ಆದೇಶಿಸಿದೆ.
ಈ ಮೊದಲು ಸರ್ಕಾರ ದರವನ್ನು ನಿಗದಿ ಮಾಡಿತ್ತು. ಇದೀಗ ಅದನ್ನು ಪರಿಷ್ಕರಣೆ ಮಾಡಿದೆ. ಈ ದರಕ್ಕಿಂತ ಹೆಚ್ಚಿಗೆ ದರವನ್ನು ಯಾವುದೇ ಕಾರಣಕ್ಕೂ ವಸೂಲಿ ಮಾಡುವಂತಿಲ್ಲ ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 7ರಂದು ದೇಶವನ್ನು ಉದ್ದೇಶಿಸಿ ಮಾತನಾಡಿ, ನೂತನ ಲಸಿಕಾ ನೀತಿ ಪ್ರಕಟಿಸಿದ್ದರು. ಇದೀಗ ಖಾಸಗಿ ಅಸ್ಪತ್ರೆಗಳಿಗೆ ಈ ದರಗಳನ್ನು ನೀಡಲಾಗಿದೆ.
ಯಾವ್ಯಾವುದಕ್ಕೆ ಎಷ್ಟೆಷ್ಟು ದರ? (ಪ್ರತಿ ಡೋಸ್‌ಗೆ)
ಕೋವಿಶೀಲ್ಡ್ - 780 ರೂ
ದೇಸಿ ನಿರ್ಮಿತ ಕೋವ್ಯಾಕ್ಸಿನ್ - 1,410 ರೂ
ರಷ್ಯಾ ನಿರ್ಮಿತ ಸ್ಪುಟ್ನಿಕ್ ವಿ - 1145 ರೂ.
ಇವುಗಳ ಜತೆಗೆ ಸರ್ವಿಸ್ ಚಾರ್ಜ್ ರೂಪದಲ್ಲಿ 150 ರೂಪಾಯಿ ಹೆಚ್ಚುವರಿ ದರ.