ಪಾಪಿ ಅಪ್ಪ ಮಗನಿಗೆ ಕೊಟ್ಟ ಈ ಭಯಾನಕ ಶಿಕ್ಷೆ ನೋಡಿದರೆ ಎದೆ ಝಲ್ಲೆನ್ನದೇ ಇರಲಾರದು! ಫೋಟೋ ವೈರಲ್‌

punishment
Published on

ಕೈರೋ: ಮಕ್ಕಳು ತಪ್ಪ ಮಾಡಿದರೆ ಪಾಲಕರು ಅವರಿಗೆ ತಿದ್ದಿ ಬುದ್ಧಿ ಹೇಳುವುದು, ಏಟು ಹೊಡೆಯುವುದು ಎಲ್ಲವೂ ಸಾಮಾನ್ಯವೇ. ಅದೇ ರೀತಿ ಕೆಲವೊಮ್ಮೆ ಚಿಕ್ಕ ಪುಟ್ಟ ಶಿಕ್ಷೆಯನ್ನೂ ಕೊಡುವುದುಂಟು. ಆದರೆ ಸ್ವಂತ ಅಪ್ಪನೇ ಘನಘೋರವಾಗಿರುವ ಶಿಕ್ಷೆ ನೀಡಿದ್ದು, ಇದೀಗ ಇದೀ ವಿಶ್ವಾದ್ಯಂತ ಸುದ್ದಿ ಮಾಡಿದೆ.

ಇಂಥದ್ದೊಂದು ಭಯಾನಕ ಶಿಕ್ಷೆ ನೀಡಿರುವ ಘಟನೆ ನಡೆದಿರುವುದು ಈಜಿಪ್ಟ್‌ನ ಕಲುಬಿಯಾದಲ್ಲಿ. ಆದರೆ ಆ ಮಗನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಹಿನ್ನೆಲೆಯಲ್ಲಿ ಎಂಥ ಕಲ್ಲೆದೆಯವರನ್ನೂ ತಲ್ಲಣಗೊಳಿಸುವಂತಿದೆ.

ಏಳು ವರ್ಷದ ಮಗನಿಗೆ 7 ವರ್ಷದ ಮಗನ ಮಗನ ಕೈ, ಕಾಲುಗಳನ್ನು ಕಂಬಕ್ಕೆ ಕಟ್ಟಲಾಗಿದ್ದು, ದೇಹಕ್ಕೆ ಜೇನುತುಪ್ಪ ಸವರಿದ್ದಾನೆ ಪಾಪಿ ಅಪ್ಪ ಮೊಹಮ್ಮದ್ ಡಿ ಎಂಬಾತ. ಅಲ್ಲಿ ಜೇನುಗಳು ಇರುವ ಕಾರಣ, ತುಪ್ಪದ ವಾಸನೆಗೆ ಜೇನು ಹುಳುಗಳ ಮಗನ ಹತ್ತಿರ ಬಂದು ಮೈತುಂಬಾ ಕಚ್ಚಲಿ ಎನ್ನುವ ಕಾರಣಕ್ಕೆ!

ಇಂಥದ್ದೊಂದು ಕಠಿಣ ಶಿಕ್ಷೆ ನೀಡಲು ಕಾರಣ ಮಗ ಕಳ್ಳತನ ಮಾಡಿದ್ದಾನೆ ಎಂದು ಪಕ್ಕದ ಮನೆಯವರು ಆರೋಪಿಸಿದ್ದರು. ಈ ಭಯಾನಕ ಶಿಕ್ಷೆಯ ಫೋಟೋವನ್ನು ತಾಯಿ ಕ್ಲಿಕ್ಕಿಸಿದ್ದಾಳೆ. ನಂತರ ಆಕೆ ಮಕ್ಕಳ ರಕ್ಷಣಾ ಸಂಸ್ಥೆಗೆ ಕರೆ ಮಾಡಿದ್ದಾಳೆ. ಫೋಟೋ ಅನ್ನು ಸಾಕ್ಷಿಯಾಗಿ ಪಡೆದು ಪೊಲೀಸರು ಮುಂದಿನ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ತನ್ನ ಮೇಲೆ ಹಲ್ಲೆ ನಡೆಸಿದ ಗಂಡ ಮಗನಿಗೆ ಈ ರೀತಿ ಶಿಕ್ಷೆ ನೀಡಿರುವುದಾಗಿ ಬಾಲಕನ ತಾಯಿ ದೂರಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net