

ಉತ್ತರ: ನಿಮ್ಮ ಅಜ್ಜಿಗೆ ಅವರ ತಂದೆಯಿಂದ ಬಂದ ಆಸ್ತಿ , ಆಕೆಯ ಪ್ರತ್ಯೇಕ , ಸಂಪೂರ್ಣ ಹಕ್ಕಿರುವ ಆಸ್ತಿ ಆಗಿರುತ್ತದೆ. ಆಕೆ ಆ ಆಸ್ತಿಯನ್ನು ಯಾವುದೇ ರೀತಿಯಲ್ಲಿ ಬೇಕಾದರೂ ಉಪಯೋಗಿಸಬಹುದು. ಹೇಗೆ ಬೇಕಾದರೂ ಪರಭಾರೆ ಮಾಡಬಹುದು. ಇಂತಹ ತನ್ನದೇ ಆದ ಆಸ್ತಿಯನ್ನು, ನಿಮ್ಮ ಅಜ್ಜಿ ಸಕ್ರಮವಾಗಿ ತನ್ನ ಸ್ವಂತ ಇಚ್ಛೆಯಿಂದ ,ನಿಮಗೆ ವಿಲ್ ಮಾಡಿದ್ದರೆ ನೀವು ಹೆದರಬೇಕಾಗಿಲ್ಲ. ಅಜ್ಜಿಯ ಬೇರೆ ಮಕ್ಕಳಿಗೆ ಹಕ್ಕು ಬರುವುದಿಲ್ಲ. ವಿಲ್ ಮೋಸದಿಂದ ಮಾಡಿಸಿಕೊಂಡಿದ್ದರೆ ಮಾತ್ರ ಹೆದರಬೇಕು.