

ಗೋವಾ: ಈಗ ಇಡೀ ವಿಶ್ವವೇ ಕರೊನಾ ಎರಡನೆಯ ಅಲೆಯ ಭಯದಲ್ಲಿದೆ. ಕ್ಷಣಕ್ಷಣಕ್ಕೂ ಕರೊನಾ ಜನರನ್ನು ಬಲಿ ಪಡೆಯುವುದು ಹೆಚ್ಚುತ್ತಲೇ ಸಾಗಿದೆ. ಇದೇ ಕಾರಣಕ್ಕೆ ಹಿಂದೆಂದಿಗಿಂತಲೂ ಕಠಿಣ ನಿಯಮಾವಳಿಗಳನ್ನು ಈ ಬಾರಿ ಹಲವಾರು ಸರ್ಕಾರಗಳು ಮಾಡಿವೆ.
ಇಂಥ ಸಂದರ್ಭದಲ್ಲಿ ಹನಿಮೂನ್ಗೆ ತನ್ನ ಹೊಸ ಗೆಳೆಯನ ಜತೆ ಗೋವಾಕ್ಕೆ ಹೋಗಿರುವ ನಟಿ ಪೂಜಾ ಬೇಡಿ, ವಿಡಿಯೋ ಮಾಡಿ ಎಲ್ಲರಿಗೂ ಎನ್ಜಾಯ್ ಮಾಡಿ ಎಂದು ಹೇಳಿದ್ದಾರೆ. ಇದೀಗ ಕಮೆಂಟಿಗರನ್ನು ತೀವ್ರ ಆಕ್ರೋಶಕ್ಕೆ ಗುರಿ ಮಾಡಿದೆ.
50 ವರ್ಷದ ನಟಿ ಪೂಜಾ ಬೇಡಿ, ಮಾನೆಕ್ ಕಂಟ್ರಾಕ್ಟರ್ ಅವರೊಂದಿಗೆ ಎಂಗೇಜ್ ಆಗಿದ್ದಾರೆ. ಅವರ ಜತೆಗೆ ಗೋವಾಕ್ಕೆಂದು ಹಾಲಿಡೇ ಟೂರ್ಗೆ ಹೋಗಿದ್ದಾರೆ. ಇದಕ್ಕೂ ಮೊದಲು ತಾವು ಹನಿಮೂನ್ಗೆ ಹೋಗುವ ಖುಷಿಯಲ್ಲಿ ಇರುವುದಾಗಿ ಅವರು ಹೇಳಿಕೊಂಡಿದ್ದರು. ಕರೊನಾವನ್ನು ಲೆಕ್ಕಿಸದೇ ಗೋವಾಕ್ಕೆ ಟೂರ್ಗೆ ಹೋಗಿದ್ದರೂ ಅಲ್ಲದೇ ಅಲ್ಲಿ ಅರ್ಧಂಬರ್ಧ ಡ್ರೆಸ್ ಹಾಕಿಕೊಂಡಿರುವ ಹಲವಾರು ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಇದೇ ವೇಳೆ ವಿಡಿಯೋ ಒಂದನ್ನು ಮಾಡಿರುವ ಪೂಜಾ, ಅಲ್ಲಿನ ಖುಷಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನೀವ್ಯಾರು ಭಯಪಡಬೇಡಿ, ಎನ್ಜಾಯ್ ಮಾಡಿ ಎಂದೂ ಹೇಳಿದ್ದಾರೆ. ಮಾಸ್ಕ್ ಧರಿಸದೇ, ಕರೊನಾ ನಿಯಮ ಪಾಲನೆ ಮಾಡಿದೇ ಸಾರ್ವಜನಿಕ ಸ್ಥಳದಲ್ಲಿ ಕಾಣಿಸಿಕೊಂಡಿದ್ದೂ ಅಲ್ಲದೇ, ಅದರ ವಿಡಿಯೋ, ಫೋಟೋ ಹರಿಬಿಟ್ಟಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಅನೇಕ ಮಂದಿ ಚಿತ್ರನಟ-ನಟಿಯನ್ನು ಫಾಲೋ ಮಾಡುವುದು ಸಾಮಾನ್ಯ. ಇಂಥ ಸಂದರ್ಭದಲ್ಲಿ ಈ ರೀತಿ ಕೆಟ್ಟದಾಗಿ ಪ್ರದರ್ಶನ ಮಾಡುವುದು ಸರಿಯಲ್ಲ ಎಂದು ಅನೇಕ ಮಂದಿ ಕಮೆಂಟ್ ಹಾಕಿದ್ದಾರೆ.