ಅಸ್ವಸ್ಥಗೊಂಡ ಯೋಧರ ತರಲು ಹೋದ ಸೇನಾ ಹೆಲಿಕಾಪ್ಟರ್​ ಪತನ: ಪೈಲಟ್​ ಸಾವು, ಸಹ ಪೈಲಟ್​ ಸ್ಥಿತಿ ಚಿಂತಾಜನಕ

helicaptor
Published on

ಶ್ರೀನಗರ: ಜಮ್ಮು -ಕಾಶ್ಮೀರದ ಗಡಿಯಲ್ಲಿ ಕರ್ತವ್ಯ ನಿರತರಾಗಿದ್ದ ಗಡಿ ಭದ್ರತಾ ಪಡೆ ಸಿಬ್ಬಂದಿ ಅಸ್ವಸ್ಥಗೊಂಡಿದ್ದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ಸಾಗಿಸಲು ಅವರನ್ನು ಕರೆತರುವ ಹಿನ್ನೆಲೆಯಲ್ಲಿ ಹೊರಟಿದ್ದ ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಪತನಗೊಂಡಿದೆ. ಈ ಘಟನೆಯಲ್ಲಿ ಪೈಲಟ್​ ಮೃತಪಟ್ಟಿದ್ದು, ಸಹ ಪೈಲಟ್​ ಸ್ಥಿತಿ ಚಿಂತಾಜನಕವಾಗಿದೆ.

ಉತ್ತರ ಕಾಶ್ಮೀರದ ಗುರೆಜ್​ ವಲಯದಲ್ಲಿರುವ ಗಡಿ ನಿಯಂತ್ರಣಾ ರೇಖೆ ಬಳಿ ಈ ದುರ್ಘಟನೆ ಸಸಂಭವಿಸಿದೆ. ಭಾರತ-ಪಾಕಿಸ್ತಾನ ಗಡಿಯ ಬಳಿ ಇದು ಸಂಭವಿಸಿದೆ. ಹೆಲಿಕಾಪ್ಟರ್​ ಪತನಕ್ಕೆ ಕಾರಣ ತಿಳಿದಿಲ್ಲ. ಇದರಲ್ಲಿ ಪೈಲಟ್​ ಮತ್ತು ಸಹ ಪೈಲಟ್​ ಇದ್ದರು.

ಪತನಕ್ಕೆ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಆ ಪ್ರದೇಶ ಸಂಪೂರ್ಣ ಹಿಮಾಚ್ಛಾದಿತವಾಗಿತ್ತು. ಹೀಗಾಗಿ ಪತನಕ್ಕೆ ಕೆಟ್ಟ ವಾತಾವರಣವೇ ಕಾರಣವಾಗಿರಬಹುದು ಎಂದೂ ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net