ಶಾಸಕ ಉದಾಸಿ ಅಂತಿಮ ದರ್ಶನದ ವೇಳೆ ಜೇಬುಗಳ್ಳನ ಕರಾಮತ್ತು! ಮೊಬೈಲ್‌ ಕದ್ದು ಸಿಕ್ಕಿಬಿದ್ದ

udasi
Published on

ಹಾವೇರಿ: ಮಂಗಳವಾರ (ಜೂನ್‌ 8) ನಿಧನರಾದ ಶಾಸಕ ಸಿ.ಎಂ. ಉದಾಸಿಯವರ ಪಾರ್ಥೀವ ಶರೀರ ಹುಟ್ಟೂರು ಹಾನಗಲ್‌ಗೆ ಆಗಮಿಸಿದ್ದು, ಪಟ್ಟಣದ ಗೌಳಿಗಲ್ಲಿ ಇರುವ ಸ್ವಗೃಹಕ್ಕೆ ಕರೆತರಲಾಗಿದೆ.

ಪಾರ್ಥೀವ ಶರೀರ ಕಂಡು ಸಂಬಂಧಿಕರು ಹಾಗೂ ಗ್ರಾಮಸ್ಥರು ದುಃಖದಲ್ಲಿ ಮುಳುಗಿರುವ ನಡುವೆಯೇ, ಇದೇ ಸಮಯವನ್ನು ಬಂಡವಾಳ ಮಾಡಿಕೊಂಡ ಖದೀಮನೊಬ್ಬ ಮೊಬೈಲ್‌ ಕಳ್ಳತನಕ್ಕೆ ಮುಂದಾಗಿದ್ದಾನೆ.

ಮನೆಯಲ್ಲಿಯೇ ಒಂದೆಡೆ ಪೂಜಾ ವಿಧಿ ವಿಧಾನಗಳು ನಡೆಯುತ್ತಿದ್ದರೆ ಅಲ್ಲಿಗೆ ಆಗಮಿಸಿದ್ದ ಕಳ್ಳನೊಬ್ಬ ಮೊಬೈಲ್‌ ಕದಿಯಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಅಲ್ಲಿಗೆ ಬಂದಿದ್ದ ವ್ಯಕ್ತಿಯೊಬ್ಬರ ಜೇಬು ಕಟ್ ಮಾಡಿ ಮೊಬೈಲ್ ಎಗರಿಸಲು ಮುಂದಾಗಿದ್ದ ಈ ಖದೀಮ. ಜೇಬಿಗೆ ಕೈಹಾಕುವಾಗಲೇ ಸಿಕ್ಕಿಬಿದ್ದಿದ್ದು ಅಂತಿಮ ದರ್ಶನಕ್ಕೆ ಬಂದ ಜನರು ಆತನನ್ನು ಥಳಿಸಿದ್ದಾರೆ. ಕೂಡಲೇ ಆತನನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net