More

    ಮಾಜಿ ಸಚಿವ ಸಿಎಂ ಉದಾಸಿ ವಿಧಿವಶ, ಹುಟ್ಟೂರಲ್ಲಿ ನಾಳೆ ಅಂತ್ಯಕ್ರಿಯೆ

    ಬೆಂಗಳೂರು: ಮಾಜಿ ಸಚಿವ, ಹಾನಗಲ್ ವಿಧಾನಸಭಾ ಕ್ಷೇತ್ರದ ಶಾಸಕ, ಬಿಜೆಪಿಯ ಭೀಷ್ಮ ಸಿಎಂ ಉದಾಸಿ (84) ಅವರು ಮಂಗಳವಾರ ಮಧ್ಯಾಹ್ನ 2.54ಕ್ಕೆ ನಿಧನರಾದರು.

    ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಸಿಎಂ ಉದಾಸಿ ಅವರನ್ನು 15 ದಿನದ ಹಿಂದೆ ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ನಾರಾಯಣ ಹೆಲ್ತ್​ ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಇಂದು ಕೊನೆಯುಸಿರೆಳೆದಿದ್ದು, ನಾಳೆ (ಬುಧವಾರ) ಹುಟ್ಟೂರಿಗೆ (ಹಾನಗಲ್ಲ)  ಪಾರ್ಥಿವ ಶರೀರವನ್ನು ತರಲಾಗುವುದು. ಸಂಜೆ 5ಕ್ಕೆ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಸಿಎಂ ಉದಾಸಿ ಪುತ್ರ, ಸಂಸದ ಶಿವಕುಮಾರ್ ಉದಾಸಿ ಅವರು ತಿಳಿಸಿದ್ದಾರೆ.

    1983ರಲ್ಲಿ ಮೊದಲ ಭಾರಿ ವಿಧಾನಸಭೆ ಪ್ರವೇಶಿಸಿದ ಸಿಎಂ ಉದಾಸಿ, 1985ರಲ್ಲಿ ರಾಜ್ಯ ಸರ್ಕಾರದ ಲೆಕ್ಕಪತ್ರ ಸಮಿತಿ ಸದಸ್ಯರಾಗಿ ನೇಮಕವಾಗಿದ್ದರು. 1989ರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದರು. 1990ರಲ್ಲಿ ಅಖಂಡ ಧಾರವಾಡ ಜಿಲ್ಲೆಯ ಜನತಾದಳದ ಅಧ್ಯಕ್ಷರಾಗಿ ಆಯ್ಕೆಯಾದರು. 1994ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು, ಮುಖ್ಯಮಂತ್ರಿ ಜೆ.ಎಚ್​ ಪಟೇಲರ ಮಂತ್ರಿಮಂಡಲದಲ್ಲಿ ಲೋಕೋಪಯೋಗಿ ಸಚಿವರಾಗಿ ಕೆಲಸ ಮಾಡಿದ್ದರು. ಮತ್ತೆ 1999ರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದರು. 2006ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂಧ ಸ್ಪರ್ಧಿಸಿ ಗೆಲುವಿನ ನಗೆಬೀರಿದ್ದ ಉದಾಸಿ, ಕುಮಾರಸ್ವಾಮಿ ಮತ್ತು ಯಡಿಯೂರಪ್ಪನವರ ಸಮ್ಮಿಶ್ರ ಸರ್ಕಾರದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖೆಯ ಸಚಿವರಾಗಿದ್ದರು. 2008ರಲ್ಲಿ ಲೋಕೋಪಯೋಗಿ ಮತ್ತು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜನಪರ ಕೆಲಸ ಮಾಡಿದ್ದರು. 2013ರ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದರಾದರೂ 2014ರ ರಾಜ್ಯರಾಜಕೀಯ ಬೆಳವಣಿಗೆಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಗೆದಿದ್ದರು. ಅಷ್ಟೇ ಅಲ್ಲ 2000ರಲ್ಲಿ ಬರಗಾಲ ಕಾಡಿತ್ತು. ಆ ವೇಳೆ ರೈತರ ಪರವಾಗಿ ಸಿಎಂ ಉದಾಸಿ ಹೋರಾಡಿ 100 ಕೋಟಿ ರೂ.ಗಳ ಬೆಳೆವಿಮೆ ಕೊಡಿಸಿದ್ದರು.

    ಗಂಡನ ಕೊಂದು ಪ್ರಿಯಕರನ ಮನೆಯ ಹೋಮಕುಂಡದಲ್ಲಿ ಶವ ಸುಟ್ಟಿದ್ದ ಪತ್ನಿ: ಭಾಸ್ಕರ್​ ಶೆಟ್ಟಿ ಹಂತಕರಿಗೆ ಶಿಕ್ಷೆ ಪ್ರಕಟ

    ‘ಸ್ವಾರ್ಥಕ್ಕಾಗಿ ಕೆಟ್ಟ ಹೆಸ್ರು ತಂದ ಸಿಂಧೂರಿ ಜನ್ರ ಬಳಿ ಕ್ಷಮೆ ಕೇಳಲಿ.. ಐಎಎಸ್ ಅಧಿಕಾರಿಯನ್ನ ಕೂಡಲೇ ಬಂಧಿಸಿ…’

    ಬೆತ್ತಲೆ ಸ್ಥಿತಿಯಲ್ಲೇ ಕಂಬದಲ್ಲಿ ನೇತಾಡುತ್ತಿದ್ದ ಮಹಿಳೆ! ಬೆಳ್ಳಂಬೆಳಗ್ಗೆ ನಡೆದ ಈ ಕೃತ್ಯ ಕೇಳಿದ್ರೆ ಬೆಚ್ಚಿಬೀಳ್ತೀರಿ

    ಮೈಸೂರಿನಲ್ಲಿ ಇಂಜಿನಿಯರ್​ ಸಾವು! 2 ತಿಂಗಳ ಹಿಂದಷ್ಟೇ ಮದ್ವೆ ಆಗಿದ್ದವರ ಬಾಳಿಗೆ ಕೊಳ್ಳಿ ಇಟ್ಟಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts