ವಿಶ್ವ ಪಾರಂಪರಿಕ ತಾಣ ವೀಕ್ಷಿಸಲು ಹೋದ ವಿಮಾನ ಪತನ: ಪೈಲಟ್‌ ಸೇರಿ ಏಳು ಮಂದಿಯ ಸಾವು

flight
Published on

ಲಿಮಾ: ವಿಶ್ವ ಪಾರಂಪರಿಕ ತಾಣ ಪೆರು ದೇಶದ ನಾಜ್ಕಾ ರೇಖೆಗಳನ್ನು ನೋಡಲು ಹೊರಟಿದ್ದ ವಿಮಾನವೊಂದು ಪತನವಾಗಿ ಏಳು ಜನ ಮೃತಪಟ್ಟ ಘಟನೆ ನಡೆದಿದೆ.

ಪ್ರವಾಸಿಗರನ್ನು ಹೊತ್ತ ಲಘು ವಿಮಾನ ಇದಾಗಿತ್ತು. ಏರೋ ಸ್ಯಾಂಟೋಸ್ ಎಂಬ ಟೂರ್ ಸಂಸ್ಥೆಯ ವಿಮಾನ ಇದಾಗಿದೆ. ಐವರು ಪ್ರವಾಸಿಗರು, ಓರ್ವ ಪೈಲಟ್ ಮತ್ತು ಸಹ ಪೈಲಟ್ ಸೇರಿ ಏಳು ಜನ ಮೃತಪಟ್ಟಿದ್ದಾರೆ. ಪ್ರವಾಸಿಗರ ಗುರುತು ಮತ್ತು ದೇಶ ಪತ್ತೆ ಹಚ್ಚಲಾಗುತ್ತಿದೆ.

1500 ರಿಂದ 2000 ವರ್ಷಗಳ ಹಿಂದೆ ಪೆರುವಿನ ಮರಭೂಮಿಯ ಮೇಲೆ ಕಲ್ಪನಾ ರೇಖೆಗಳನ್ನು ಬಿಡಿಸಲಾಗಿದೆ. ಈ ತಾಣವನ್ನು ಯುನೆಸ್ಕೋ ವಿಶ್ವ ಪಾರಂಪರಿಕ ತಾಣವೆಂದು ಗುರುತಿಸಿದೆ. ಇದನ್ನು ನೋಡುವುದಕ್ಕಾಗಿ ವಿಮಾನ ಹೊರಟಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net