VIDEO: ಪ್ಯಾರಾಚೂಟ್‌ನಲ್ಲಿ ಎತ್ತರಕ್ಕೆ ಹಾರುತ್ತಿದ್ದಂತೆಯೇ ತುಂಡಾಯ್ತು ಹಗ್ಗ- ಸಮುದ್ರಕ್ಕೆ ಬಿದ್ದ ದಂಪತಿ: ಭಯಾನಕ ವಿಡಿಯೋ ವೈರಲ್‌

parasailing1
Published on

ದಿಯು: ದಂಪತಿಯೊಬ್ಬರು ಪ್ಯಾರಾಸೇಲಿಂಗ್ ಮಾಡುತ್ತಿದ್ದ ವೇಳೆ ಪ್ಯಾರಾಚೂಟ್‌ನ ಹಗ್ಗ ತುಂಡಾದ ಕಾರಣ ದಂಪತಿ ಸಮುದ್ರಕ್ಕೆ ಬಿದ್ದಿರುವ ಭಯಾನಕ ಘಟನೆ ದಿಯುನಲ್ಲಿ ನಡೆದಿದೆ. ಪವರ್‌ ಬೋಟ್‌ಗೆ ಕಟ್ಟಲ್ಪಟ್ಟಿದ್ದ ಹಗ್ಗ ತುಂಡಾದ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದೆ. ಇದರ ವಿಡಿಯೋ ಇದೀಗ ವೈರಲ್‌ ಆಗಿದೆ.

ಗುಜರಾತ್‌ ಮೂಲದ ಅಜಿತ್ ಕಥಾಡ್ ಮತ್ತು ಸರಳಾ ಕಥಾಡ್ ದಂಪತಿ ಪ್ಯಾರಾಸೇಲಿಂಗ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅವರು ಬಹಳ ಎತ್ತರಕ್ಕೆ ಹಾರಿದ್ದರು. ಪವರ್‌ ಬೋಟ್‌ಗೆ ಕಟ್ಟಲಾಗಿದ್ದ ಹಗ್ಗ ತುಂಡಾಗಿದೆ. ಈ ಹಿನ್ನೆಯಲ್ಲಿ ದಂಪತಿ ಸಮುದ್ರಕ್ಕೆ ಬಿದ್ದಿದ್ದಾರೆ.

ಹಗ್ಗ ತುಂಡಾದ ಕೂಡಲೇ ದಂಪತಿ ಚೀರಿಕೊಂಡಿದ್ದಾರೆ. ಆ ಕೂಡಲೇ ನಾಗೋವಾ ಬೀಚ್‌ನಲ್ಲಿ ಪ್ಯಾರಾಸೇಲಿಂಗ್ ಸೇವೆ ನಡೆಸುತ್ತಿರುವ ಖಾಸಗಿ ಸಂಸ್ಥೆ ಪಾಮ್ಸ್ ಅಡ್ವೆಂಚರ್ ಮತ್ತು ಮೋಟಾರ್‌ಸ್ಪೋರ್ಟ್ಸ್‌ನ ಬೀಚ್‌ನಲ್ಲಿದ್ದ ಜೀವರಕ್ಷಕ ಸಿಬ್ಬಂದಿ ಅವರನ್ನು ರಕ್ಷಣೆ ಮಾಡಿದ್ದಾರೆ. ಅದೃಷ್ಟವಶಾತ್‌ ದಂಪತಿ ಲೈಫ್‌ ಜಾಕೆಟ್‌ ಧರಿಸಿದ್ದರು. ಆದ್ದರಿಂದ ಅವರಿಗೆ ಯಾವುದೇ ಹಾನಿಯಾಗಿಲ್ಲ ಎಂದು ವರದಿ ಹೇಳಿವೆ.

ಈ ಭಯಾನಕ ಘಟನೆಯನ್ನು ವಿವರಿಸಿದ ಅವರ ಸಹೋದರ ರಾಕೇಶ್‌, ‘ನನ್ನ ಅಣ್ಣ ಮತ್ತು ಅತ್ತಿಗೆ ತುಂಬಾ ಖುಷಿಯಿಂದ ಪ್ಯಾರಾಸೇಲಿಂಗ್ ಮಾಡುತ್ತಿದ್ದರು. ನಾನು ಕೆಳಗಿನಿಂದ ನೋಡುತ್ತಿದ್ದೆ. ಆದರೆ ಏಕಾಏಕಿ ಹಗ್ಗ ಮುರಿಯಿತು. ನನಗೆ ಏನು ಮಾಡಬೇಕೆಂದು ದಿಕ್ಕೇ ತೋಚಲಿಲ್ಲ. ಕೂಡಲೇ ಅವರು ಅತಿ ಎತ್ತರದಿಂದ ಸಮದ್ರಕ್ಕೆ ಬಿದ್ದರು. ನನ್ನ ಉಸಿರೇ ನಿಂತತಾಯಿತು. ಆದರೆ ನಾನು ಅಸಹಾಯಕನಾಗಿದ್ದೆ’ ಎಂದಿದ್ದಾರೆ.

ಇಲ್ಲಿದೆ ನೋಡಿ ಭಯಾನಕ ವಿಡಿಯೋ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net