ಭಾರತ ವಿರೋಧಿ ಮೀಟಿಂಗ್​ ಮಧ್ಯೆ ಶ್ರೀರಾಮ, ಹನುಮಾನ್​- ಪಾಕ್​ ಗಣ್ಯರು ಸುಸ್ತೋ ಸುಸ್ತು!

pak meeting
Published on

ನವದೆಹಲಿ: ಭಾರತದ ವಿರುದ್ಧವಾಗಿ ಕೆಲವೊಂದು ಮಾಹಿತಿ ನೀಡಲು ಪಾಕಿಸ್ತಾನ ನಡೆಸಿದ್ದ ಆನ್​ಲೈನ್​ ನೇರಪ್ರಸಾರ ಮೀಟಿಂಗ್​ ಮಧ್ಯೆ ಶ್ರೀರಾಮಚಂದ್ರ, ಹನುಮಾನ ಬಂದುಬಿಟ್ಟರೆ ಹೇಗಿರತ್ತೆ? ಪಾಕಿಸ್ತಾನದ ಗಣ್ಯರ ಸ್ಥಿತಿ ಹೇಗಾಗಿರಬೇಡ?

ಪಾಕಿಸ್ತಾನಿಗಳು ಸುಸ್ತಾಗಿ ಮುಜುಗರ ಪಡುವಂಥ ಘಟನೆ ನಿನ್ನೆ ನಡೆದೇಬಿಟ್ಟಿದೆ. ಇದರ ವಿಡಿಯೋ ಇದೀಗ ವೈರಲ್​ ಆಗಿದ್ದು, ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಅದರ ವಿಡಿಯೋ ಇಲ್ಲಿದೆ ನೋಡಿ...

ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತದ ವಿರುದ್ಧ ಝೂಮ್​ ಆ್ಯಪ್​ನಲ್ಲಿ ಆನ್​ಲೈನ್​ ಮೀಟಿಂಗ್​ ನಡೆದಿತ್ತು. 'ಭಾರತದಿಂದ ಕಾಶ್ಮೀರ ಆಕ್ರಮಣಕ್ಕೆ 72 ವರ್ಷಗಳು' ಎಂಬ ಬಗ್ಗೆ ಚರ್ಚೆ ನಡೆದಿತ್ತು. ಮೂಲೆಮೂಲೆಗಳ ಪರಿಣತರು ಭಾರತದ ವಿರುದ್ಧ ತಮ್ಮ ತಮ್ಮ ನಿರ್ಣಯ ಮಂಡಿಸಲು ಕಂಪ್ಯೂಟರ್​ ಮುಂದೆ ಕಾದು ಕುಳಿತಿದ್ದರು.

ಅಷ್ಟೇ... ಮೀಟಿಂಗ್​ ಶುರುವಾಗುತ್ತಿದ್ದಂತೆಯೇ ಶ್ರೀರಾಮಚಂದ್ರ ಮತ್ತು ಹನುಮಾನ್‌ನ ಹಾಡುಗಳು ಮೊಳಗಿಬಿಟ್ಟವು. ಅಯ್ಯಯ್ಯೋ ಇದೇನಪ್ಪಾ ಎಂದು ಗಣ್ಯರೆಲ್ಲರೂ ಕಕ್ಕಾಬಿಕ್ಕಿಯಾದರು. ಮತ್ತೆ ಮೀಟಿಂಗ್​ ಶುರು ಮಾಡಿದರು. ಮೀಟಿಂಗ್​ ಶುರುವಾಗುತ್ತಿದ್ದಂತೆಯೇ ಮತ್ತೆ ಹಾಡು ಮೊಳಗಿತು. ಸಭೆಯಲ್ಲಿ ಇದ್ದವರು ತಲೆತಲೆ ಚಚ್ಚಿಕೊಳ್ಳುವಂತಾಯಿತು.

ಅಷ್ಟಕ್ಕೂ ಆಗಿದ್ದೇನೆಂದರೆ, ಈ ಮೀಟಿಂಗ್​ ಇರುವುದನ್ನು ತಿಳಿದ ಕೆಲವು ಭಾರತೀಯ ಹ್ಯಾಕರ್ಸ್​ಗಳು ಕಿಲಾಡಿ ಮಾಡಿದ್ದಾರೆ. ಭಾರತ ವಿರೋಧಿ ಸಭೆ ನಡೆಯುವುದನ್ನು ಗಮನಿಸಿದ್ದ ಇವರು, ಆನ್‌ಲೈನ್ ಮೀಟಿಂಗ್‌ಅನ್ನು ಹ್ಯಾಕ್ ಮಾಡಿಬಿಟ್ಟಿದ್ದಾರೆ.

ಅತ್ತ ಮೀಟಿಂಗ್​ ಶುರುವಾಗುತ್ತಿದ್ದಂತೆಯೇ ಶ್ರೀರಾಮ ಮತ್ತು ಹನುಮಾನ್ ಹಾಡುಗಳನ್ನು ಬಿತ್ತರಿಸಿದ್ದಾರೆ.ಸಭೆಯನ್ನು ಮೊದಲು ಸುಮಾರು 17 ನಿಮಿಷಗಳವರೆಗೆ ಹ್ಯಾಕ್ ಮಾಡಲಾಗಿದೆ. ಆಗ ಹನುಮಾನ್ ದೇವರ ಭಕ್ತಿಗೀತೆಗಳನ್ನು ಪ್ರಸಾರ ಮಾಡಲಾಯಿತು. ನಂತರ ಸಭೆ ನಡೆಯುತ್ತಿದ್ದ ಮಧ್ಯೆಯೇ ಅಂದರೆ 47 ನಿಮಿಷ ಆದ ಮೇಲೆ ಮತ್ತೆ ಹ್ಯಾಕ್​ ಮಾಡಿ 'ಏಕ್ ಹಿ ನಾರಾ, ಏಕ್ ಹಿ ನಾಮ್, ಜೈ ಶ್ರೀರಾಮ್, ಜೈ ಶ್ರೀರಾಮ್' ಎಂಬ ಹಾಡು ಪ್ರಸಾರ ಮಾಡಿದರು.

ಈ ಹಾಡು ಕೇಳಿಬರುತ್ತಿದ್ದಂತೆಯೇ ಭಾಷಣಕಾರರಲ್ಲಿ ಒಬ್ಬರು, 'ನಾವು ಈ ರೀತಿ ಆಗುವುದನ್ನು ನಿರೀಕ್ಷಿಸಿದ್ದೆವು' ಎಂದು ಹೇಳಿದ್ದಾರೆ. ಇದು ವಿಡಿಯೋದಲ್ಲಿ ಕೇಳಿಬಂದಿದೆ. ಅದಕ್ಕೆ ಉತ್ತರವಾಗಿ ಹ್ಯಾಕರ್​ಗಳು 'ನಾವು ಭಾರತೀಯರು. ಒದ್ದು ಹೊರಹಾಕುತ್ತೇವೆ' ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net