

ಭೋಪಾಲ್: ಕರೊನಾ ಅಬ್ಬರ ಎಲ್ಲೆಡೆ ಹೆಚ್ಚಾಗಿದೆ. ಎರಡನೆಯ ಅಲೆ ಮೊದಲಿನ ಅಲೆಗಿಂತಲೂ ಅಧಿಕ ಪ್ರಮಾಣದಲ್ಲಿ ಸಾವು ನೋವನ್ನು ತಂದಿದೆ. ರೋಗಿಗಳು ಹೆಚ್ಚಾಗುತ್ತಿದ್ದಂತೆಯೇ ಆಸ್ಪತ್ರೆಯಲ್ಲಿ ಒಂದೆಡೆ ಹಾಸಿಗೆ ಸಮಸ್ಯೆ ಶುರುವಾದರೆ, ಇನ್ನೊಂದೆಡೆ ಆಕ್ಸಿಜನ್ ಇಲ್ಲದೇ ಆಸ್ಪತ್ರೆಯವರು ಪರದಾಡುವಂತಾಗಿದೆ.
ಇದೀಗ ಮಧ್ಯಪ್ರದೇಶ ರಾಜಧಾನಿ ಭೋಪಾಲ್ನಲ್ಲಿಯೂ ಈ ಸಮಸ್ಯೆ ಶುರುವಾಗಿದೆ. ಸೋಂಕಿತರು ಹೆಚ್ಚಾಗುತ್ತಿದ್ದು, ಆಕ್ಸಿಜನ್ ಇಲ್ಲದೇ ಆಸ್ಪತ್ರೆಯಲ್ಲಿ ಪರದಾಡುವಂತಾಗಿದೆ.
ಇದೇ ಕಾರಣಕ್ಕೆ ಇಲ್ಲಿ ಪ್ರವೇಶ ಪಡೆಯಬೇಕು ಎಂದು ಆಕ್ಸಿಜನ್ ಸಿಲಿಂಡರ್ ತರಬೇಕು, ಒಂದು ವೇಳೆ ಚಿಕಿತ್ಸೆ ನೀಡುವ ಮಧ್ಯೆ ಆಕ್ಸಿಜನ್ ಸಿಲಿಂಡರ್ ಖಾಲಿಯಾದರೆ ಆಗುವ ಅನಾಹುತಕ್ಕೆ ನಾವು ಜವಾಬ್ದಾರರಲ್ಲ ಎಂದು ಬಹುತೇಕ ಆಸ್ಪತ್ರೆಗಳಲ್ಲಿ ಹೇಳಲಾಗುತ್ತಿದೆ.
ಆಸ್ಪತ್ರೆಗೆ ಎಂಟ್ರಿ ಪಡೆಯುವ ಸಮಯದಲ್ಲಿ ಭರ್ತಿ ಮಾಡುವ ಅರ್ಜಿಯಲ್ಲಿ ಇರುವ ಇದನ್ನು ಸೋಂಕಿತರು ಭರ್ತಿ ಮಾಡಬೇಕಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಸ್ಪತ್ರೆಯಲ್ಲಿ ಆಕ್ಸಿಜನ್ ಮತ್ತು ರೆಮ್‍ಡೆಸಿವರ್ ಕೊರತೆ ಇದೆ. ಒಂದು ವೇಳೆ ಚಿಕಿತ್ಸೆ ಮಧ್ಯೆ ಆಕ್ಸಿಜನ್ ಪೂರೈಕೆ ನಿಂತರೆ ಅದಕ್ಕೆ ಆಸ್ಪತ್ರೆ ಜವಾಬ್ದಾರರಲ್ಲ ಎಂದು ಪತ್ರದಲ್ಲಿ ಬರೆಯಲಾಗಿದೆ.
ಪ್ರತಿದಿನ ಸುಮಾರು 18 ರೋಗಿಗಳಿಗೆ 20 ರಿಂದ 25 ಆಕ್ಸಿಜನ್ ಸಿಲಿಂಡರ್ ಅವಶ್ಯಕತೆ ಇದೆ. ಆದ್ರೆ ನಮಗೆ 10 ರಿಂದ 12 ಸಿಲಿಂಡರ್ ಗಳು ಮಾತ್ರ ಸಿಗುತ್ತಿವೆ. ಆದ್ದರಿಂದ ಇದು ಅನಿವಾರ್ಯ ಎಂದು ಆಸ್ಪತ್ರೆಗಳು ಹೇಳುತ್ತಿವೆ.