ವಿಮಾನಕ್ಕೆ ಹೊರಟಿರುವಿರಾ? ಒಂದಕ್ಕಿಂತ ಹೆಚ್ಚಿಗೆ ಹ್ಯಾಂಡ್‌ ಬ್ಯಾಗ್‌ ಒಯ್ಯುವಂತಿಲ್ಲ- ಇಲ್ಲಿದೆ ನೋಡಿ ಹೊಸ ರೂಲ್ಸ್‌

handbag
Published on

ನವದೆಹಲಿ: ವಿಮಾನಗಳಲ್ಲಿ ಪ್ರಯಾಣಿಸುವವರಿಗಾಗಿ ಹೊಸ ನಿಯಮವನ್ನು ಇದೀಗ ಜಾರಿಗೊಳಿಸಲಾಗಿದೆ. ಅದೇನೆಂದರೆ ಯಾರೇ ಆಗಲೇ ಒಂದೇ ಒಂದು ಹ್ಯಾಂಡ್ ಬ್ಯಾಗ್ ಮಾತ್ರ ತೆಗೆದುಕೊಂಡು ಹೋಗಬಹುದು. ಅದಕ್ಕಿಂತ ಹೆಚ್ಚು ಹ್ಯಾಂಡ್‌ ಬ್ಯಾಗ್‌ ಕೊಂಡೊಯ್ಯುವಂತಿಲ್ಲ ಎಂದು ನಾಗರಿಕ ವಿಮಾನಯಾನ ಸುರಕ್ಷತಾ ಬ್ಯೂರೋ (ಬಿಸಿಎಎಸ್) ಹೇಳಿದೆ.

ಈ ಬಗ್ಗೆ ಟಿಕೆಟ್‌ ಕೌಂಟರ್‌ ಮತ್ತು ಏರ್‌ಪೋರ್ಟ್‌ಗಳಲ್ಲಿ ಮಾಹಿತಿ ನೀಡಬೇಕು. ಯಾವುದೇ ಪ್ರಯಾಣಿಕರೂ ಒಂದಕ್ಕಿಂತ ಹೆಚ್ಚು ಹ್ಯಾಂಡ್‌ಬ್ಯಾಗ್‌ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಬೇಕು ಎಂದು ಬಿಸಿಎಎಸ್‌ ಹೇಳಿದೆ.

ಇದಕ್ಕೆ ಕಾರಣ ನೀಡಿರುವ ಬಿಸಿಎಎಸ್‌, ಹೆಚ್ಚೆಚ್ಚು ಹ್ಯಾಂಡ್‌ಬ್ಯಾಗ್ ಕೊಂಡೊಯ್ದರೆ ಅದರ ತಪಾಸಣೆ ಇತ್ಯಾದಿಗಾಗಿ ಬ್ಯಾಗ್ ಪರಿಶೀಲನೆಗೆ ಹೆಚ್ಚು ಸಮಯ ವ್ಯರ್ಥವಾಗುತ್ತದೆ. ಕೋವಿಡ್‌ನ ಈ ಸಮಯದಲ್ಲಿ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಆರೋಗ್ಯ ಪ್ರೋಟೋಕಾಲ್‍ಗಳನ್ನು ಖಚಿತಪಡಿಸಿಕೊಳ್ಳಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net