More

    ಸಿಎಂ ಸ್ಥಾನಕ್ಕೆ ನಾನಲ್ದೇ ಬೇರೆ ಮುಖ ಕಾಣಿಸ್ತದಾ ಎಂದಿದ್ದ ಪ್ರಿಯಾಂಕಾ ಯೂಟರ್ನ್‌! ಅದು ಹಾಗಲ್ಲ… ಹೀಗೆ… ಎಂದು ಸ್ಪಷ್ಟನೆ…

    ನವದೆಹಲಿ: ಇನ್ನೇನು ಉತ್ತರ ಪ್ರದೇಶದ ಚುನಾವಣೆ ಸಮೀಪದಲ್ಲಿಯೇ ಇದೆ. ಈ ಸಂದರ್ಭದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದು, ವಾಗ್ದಾಳಿ, ಆರೋಪ- ಪ್ರತ್ಯಾರೋಪಗಳ ಸುರಿಮಳೆಯಾಗುತ್ತಿದೆ. ಇದೇ ವೇಳೆ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಕಾಂಗ್ರೆಸ್‌ನಿಂದ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ನೀಡಿದ್ದ ಉತ್ತರವೊಂದು ಭಾರಿ ಸುದ್ದಿಯಾಗಿದ್ದು ಮಾತ್ರವಲ್ಲದೇ, ಖುದ್ದು ಕಾಂಗ್ರೆಸ್‌ನಲ್ಲಿಯೂ ಸಂಚಲನ ಸೃಷ್ಟಿಸಿತ್ತು.

    ಅದೇನೆಂದರೆ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ್ದ ಅವರು, ಉತ್ತರ ಪ್ರದೇಶ ಕಾಂಗ್ರೆಸ್ ಪಕ್ಷದಲ್ಲಿ ನೀವು ಬೇರೆ ಯಾವುದಾದರೂ ಮುಖವನ್ನು ಕಾಣುತ್ತೀರಾ? ನೀವು ನನ್ನ ಮುಖವನ್ನು ಮಾತ್ರ ನೋಡಬಹುದು? ಇದು ತಾನೇ ನಿಮಗೆ ಕಾಣಿಸುವುದು? ಎಂದು ಕೇಳಿದ್ದರು. ಈ ಮೂಲಕ ಮುಖ್ಯಮಂತ್ರಿ ಅಭ್ಯರ್ಥಿ ತಾವೇ ಎಂಬ ಅರ್ಥದಲ್ಲಿ ಮಾತನಾಡಿದ್ದರು.

    ಉತ್ತರ ಪ್ರದೇಶದ ಯುವ ಸಮುದಾಯದ ಮಂದಿಗೆ ಉದ್ಯೋಗ ನೀಡುವ ಕುರಿತಾದ ಪ್ರಣಾಳಿಕೆ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಅವರು ಈ ಮಾತನ್ನು ಹೇಳಿದ್ದರು. ‘ ಬಿಜೆಪಿ ಯೋಗಿ ಆದಿತ್ಯನಾಥ್ ಹಾಗೂ ಸಮಾಜವಾದಿ ಪಕ್ಷ ಅಖಿಲೇಶ್ ಯಾದವ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಮುಂದಿಟ್ಟಿದೆ. ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಯಾರು?’ ಎಂದು ಕೇಳಿದ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದ್ದರು.

    ಇದು ಸಾಕಷ್ಟು ಕೋಲಾಹಲಕ್ಕೆ ಕಾರಣವಾಗಿದ್ದರಿಂದ ತಮ್ಮ ತಪ್ಪಿನ ಅರಿವಾಗಿ ಪ್ರಿಯಾಂಕಾ ಅವರು, ಇದೀಗ ಆ ಹೇಳಿಕೆಯನ್ನು ಹಿಂದಕ್ಕೆ ಪಡೆದಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು, ‘ನಾನು ಆಗ ನೀಡಿರೋ ಈ ಹೇಳಿಕೆಯು ಉತ್ಪ್ರೇಕ್ಷೆಯದ್ದಾಗಿತ್ತು. ಮಾಧ್ಯಮದವರು ಪದೇ ಪದೇ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಯಾರು ಎಂದು ಪ್ರಶ್ನೆ ಕೇಳಿದ್ದಕ್ಕೆ ನಾನು ಹಾಗೆ ಉತ್ತರಿಸಿದ್ದೆ ಅಷ್ಟೇ’ ಎಂದು ಸ್ಪಷ್ಟನೆ ನೀಡಿದ್ದಾರೆ.

    VIDEO: ಇನ್ಮುಂದೆ ನೀವು ಕೇಸ್‌ ಹಾಕಲ್ಲ ಅಂದ್ರೆ ಮಾತ್ರ ಕೆಳಗಿಳೀತೇನೆ… ಟವರ್‌ ಏರಿ ಪೊಲೀಸರಿಗೆ ಸವಾಲ್‌ ಹಾಕಿದ ಕುಡುಕ!

    ಸೆಲ್ಫಿ ಹುಚ್ಚಿಗೆ ಬೈಕ್‌ ಸ್ಟಂಟ್‌- ಸಾವು ಬದುಕಿನ ನಡುವೆ ವಿದ್ಯಾರ್ಥಿ: ಸಿಸಿಟಿವಿಯಲ್ಲಿ ದಾಖಲಾಯ್ತು ಭಯಾನಕ ದೃಶ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts