VIDEO: ಇನ್ಮುಂದೆ ನೀವು ಕೇಸ್‌ ಹಾಕಲ್ಲ ಅಂದ್ರೆ ಮಾತ್ರ ಕೆಳಗಿಳೀತೇನೆ... ಟವರ್‌ ಏರಿ ಪೊಲೀಸರಿಗೆ ಸವಾಲ್‌ ಹಾಕಿದ ಕುಡುಕ!

tower
Published on

ವಿಜಯನಗರ (ಮಧ್ಯಪ್ರದೇಶ): ಕುಡುಕನೊಬ್ಬ ಮೊಬೈಲ್‌ ಟವರ್‌ ಏರಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿ ಪೊಲೀಸರನ್ನು ಪೇಚಿಗೆ ಸಿಲುಕಿಸಿರುವ ಘಟನೆ ಮಧ್ಯಪ್ರದೇಶದ ವಿಜಯನಗರದಲ್ಲಿ ನಡೆದಿದೆ.


ಮದ್ಯದ ಅಮಲಿನಲ್ಲಿ ಮೊಬೈಲ್‌ ಟವರ್‌ ಏರಿರುವ ವ್ಯಕ್ತಿ ಪೊಲೀಸರಿಗೇ ಸವಾಲು ಹಾಕಿದ್ದಾನೆ. ಈತ ಪದೇ ಪದೇ ಚಿಕ್ಕಪುಟ್ಟ ಅಪರಾಧ ಪ್ರಕರಣಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತಿದ್ದ. ಆದ್ದರಿಂದ ಈತನ ವಿರುದ್ಧ ಪೊಲೀಸರು ಕ್ರಿಮಿನಲ್‌ ಕೇಸ್‌ ದಾಖಲಿಸುತ್ತಲೇ ಇದ್ದಾರೆ. ಇದರಿಂದ ತನಗೆ ಅನ್ಯಾಯ ಆಗಿದೆ, ಆದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಈ ವ್ಯಕ್ತಿ ಹೇಳಿದ್ದಾನೆ!

ಕುಡಿದ ಅಮಲಿನಲ್ಲಿ ಏಕಾಏಕಿ ಮೊಬೈಲ್‌ ಟವರ್ ಏರಿದ್ದ. ಸ್ಥಳದಲ್ಲಿ ಜನ ಜಮಾಯಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಬಂದು ಆತನನ್ನು ಕೆಳಗಿಳಿಸಲು ಸಾಕಷ್ಟು ಪ್ರಯತ್ನ ಮಾಡಿದರೂ ಯುವಕ ಕೆಳಗಿಳಿಯಲಿಲ್ಲ.

ಕೊನೆಗೆ ಪೊಲೀಸರು ಪದೇ ಪದೇ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸುತ್ತಿದ್ದು, ಇದರಿಂದ ಸಾಮಾಜಿಕವಾಗಿ ಮಾನಹಾನಿಯಾಗುತ್ತಿದೆ. ಇನ್ಮುಂದೆ ಹೀಗೆ ಕೇಸು ಹಾಕಲ್ಲ ಎಂದರೆ ಮಾತ್ರ ಕೆಳಕ್ಕೆ ಇಳಿಯುತ್ತೇನೆ ಎಂದಿದ್ದಾನೆ. ಈ ಬಗ್ಗೆ ಉನ್ನತ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನ ಆಗಲಿಲ್ಲ. ಇದರಿಂದ ನನಗೆ ಸಮಾಜದಲ್ಲಿ ಗೌರವೇ ಇಲ್ಲದಾಗಿದೆ ಎಂದಿದ್ದಾನೆ ಈ ವ್ಯಕ್ತಿ.

ಆ ಕ್ಷಣಕ್ಕೆ ಆತನನ್ನು ಕೆಳಕ್ಕೆ ಇಳಿಸುವುದು ಪೊಲೀಸರಿಗೆ ಮೊದಲ ಆದ್ಯತೆಯಾಗಿತ್ತು. ಆದ್ದರಿಂದ ಆತನ ಹರಸಾಹಸ ಪಟ್ಟು ಆತನ ಮನವೊಲಿಸಿದ ಪೊಲೀಸರು ಕೆಲ ಭರವಸೆಗಳನ್ನು ನೀಡಿದ್ದಾರೆ. ಬಳಿಕ ಆತ ಟವರ್​​​ನಿಂದ ಇಳಿದು ಬಂದಿದ್ದಾನೆ. ಇದರ ವಿಡಿಯೋ ವೈರಲ್‌ ಆಗಿದೆ.

ಇಲ್ಲಿದೆ ನೋಡಿ ವಿಡಿಯೋ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net