More

    ಜಿಲ್ಲೆಯಾದ್ಯಂತ ೬೩ ವಿಶೇಷ ಮತಗಟ್ಟೆಗಳ ಸ್ಥಾಪನೆ

    ಬಾಗಲಕೋಟೆ: ಮತದಾರರನ್ನು ಮತಗಟ್ಟೆಗಳಿಗೆ ಸೆಳೆಯುವ ನಿಟ್ಟಿನಲ್ಲಿ ಪ್ರತಿ ಮತಕ್ಷೇತ್ರಕ್ಕೆ ೫ ಸಖಿ ಮತಗಟ್ಟೆ, ತಲಾ ಒಂದು ವಿಶೇಷ ಚೇತನರ, ಯುವಜನ ನಿರ್ವಹಣೆಯ, ಥೀಮ್ ಹಾಗೂ ಸಾಂಪ್ರದಾಯಿಕ ಮತಗಟ್ಟೆ ಸೇರಿದಂತೆ ಜಿಲ್ಲೆಯ ೭ ಮತಕ್ಷೇತ್ರಗಳಲ್ಲಿ ಒಟ್ಟು ೬೩ ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.


    ಮುಧೋಳ ಮತಕ್ಷೇತ್ರ :
    ಬೆಳಗಲಿ (ಮಸಂ.೪), ಮುಧೋಳ (ಮಸಂ.೧೦೨), ಚನ್ನಾಳ (ಮಸಂ.೧೨೪), ಕಸಬಾಜಂಬಗಿ (ಮಸಂ.೧೫೮) ಹಾಗೂ ಲೋಕಾಪೂರ (ಮಸಂ.೨೦೬)ರಲ್ಲಿ ಮಹಿಳಾ ಸಖಿ ಮತಗಟ್ಟೆ ಸ್ಥಾಪಿಸಿದರೆ, ಲೋಕಾಪೂರದ ಉರ್ದು ಬಾಲಕರ ಶಾಲೆ (ಮಸಂ.೧೯೮) ಯುವ ಮತಗಟ್ಟೆ, ಅಳಗುಂಡಿ ಬಿ.ಕೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (ಮಸಂ.೧೬೪) ರಲ್ಲಿ ವಿಶೇಷ ಚೇತನರ, ಬರಗಿ ಗ್ರಾ.ಪಂ ಕಾರ್ಯಾಲಯ (ಮಸಂ.೧೪೯) ರಲ್ಲಿ ಥೀಮ್ ಆಧಾರಿತ ಹಾಗೂ ಮುಧೋಳ ಎಸ್.ಆರ್.ಕಂಠಿ ಕಾಲೇಜ (ಮಸಂ.೮೫) ರಲ್ಲಿ ಸಾಂಪ್ರಾಯಿಕ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

    ತೇರದಾಳ ಮತಕ್ಷೇತ್ರ :
    ಬನಹಟ್ಟಿಯ (ಮಸಂ.೧೪೦), ಮಹಾಲಿಂಗಪುರ (ಮಸಂ.೧೯೨), ತೇರದಾಳ (ಮಸಂ.೨೧), ನಾವಲಗಿಯ (ಮಸಂ.೬೬) ಹಾಗೂ ಚಿಮ್ಮಡ (ಮಸಂ.೧೭೭) ರಲ್ಲಿ ಮಹಿಳಾ ಸಖಿ ಮತಗಟ್ಟೆ ಸ್ಥಾಪಿಸಲಾಗಿದೆ. ತೇರದಾಳ ದೇವರಾಜ ನಗರದ (ಮಸಂ.೫) ರಲ್ಲಿ ಯುವ ಮತಗಟ್ಟೆ, ಬನಹಟ್ಟಿ (ಮಸಂ.೧೨೮) ರಲ್ಲಿ ವಿಕಲಚೇತನರ, ರಾಂಪೂರದ ಸರಕಾರಿ ಪ್ರಾಥಮಿಕ ಶಾಲೆ (ಮಸಂ.೧೦೯) ರಲ್ಲಿ ಥೀಮ್ ಆಧಾರಿತ ಹಾಗೂ ರಾಂಪೂರ (ಮಸಂ.೧೧೧) ರಲ್ಲಿ ಸಾಂಪ್ರದಾಯಿಕ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

    ಜಮಖಂಡಿ ಮತಕ್ಷೇತ್ರ :
    ಜಮಖಂಡಿ ನಗರದ ಸರಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆ (ಮಸಂ.೧೪೭), ಸರಕಾರಿ ಬನಶಂಕರಿ ಕನ್ನಡ ಹೆಣ್ಣು ಮಕ್ಕಳ ಶಾಲೆ (ಮಸಂ.೧೭೧), ಕಣ್ಣೊಳ್ಳಿ ಗ್ರಾಮದ (ಮಸಂ.೩೮), ಕೊಣ್ಣೂರ ಗ್ರಾಮದ (ಮಸಂ.೨೨೧) ಹಾಗೂ ಬಿದರಿ ಗ್ರಾಮದ (ಮಸಂ.೧೧೬) ರಲ್ಲಿ ಮಹಿಳಾ ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಜಮಖಂಡಿ ನಗರದ ಸರಕಾರಿ ಮಾದರಿ ಪ್ರಾಥಮಿಕ ಶಾಲೆ (ಮಸಂ.೧೫೭)ರಲ್ಲಿ ಯುವ ಮತಗಟ್ಟೆ ಮತ್ತು ಶಿವಾಜಿ ವೃತ್ತದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (ಮಸಂ.೧೩೩)ರಲ್ಲಿ ವಿಕಲಚೇತನರ, ಜಮಖಂಡಿ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜ (ಮಸಂ.೧೪೩) ರಲ್ಲಿ ಥೀಮ್ ಆಧಾರಿತ ಹಾಗೂ ಸರಕಾರಿ ಪಿ.ಬಿ.ಜ್ಯೂನಿಯರ್ ಕಾಲೇಜ (ಮಸಂ.೧೪೫) ರಲ್ಲಿ ಸಾಂಪ್ರದಾಯಿಕ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

    ಬೀಳಗಿ ಮತಕ್ಷೇತ್ರ :
    ಸಿದ್ದಾಪೂರ ಗ್ರಾಮದ (ಮಸಂ.೫೪), ಕೊರ್ತಿ ಗ್ರಾಮದ (ಮಸಂ.೨೧), ಕಂದಗಲ್ಲ ಗ್ರಾಮದ (ಮಸಂ.೯೪) ನಾಗರಾಳ ಗ್ರಾಮದ (ಮಸಂ.೫೫) ಮತ್ತು ಬೀಳಗಿ ನಗರದ ಸರಕಾರಿ ಮಾದರಿ ಪ್ರಾಥಮಿಕ ಶಾಲೆ (ಮಸಂ.೭೬) ರಲ್ಲಿ ಮಹಿಳಾ ಸಖಿ ಮತಗಟ್ಟೆಗಳನ್ನು ಸ್ಥಾಪಿಸಿದರೆ, ಮುತ್ತಲದಿನ್ನಿ ಆರ್.ಸಿ ಗ್ರಾಮದ (ಮಸಂ.೬೫) ರಲ್ಲಿ ಯುವ ಮತಗಟ್ಟೆ, ಬಾಡಗಂಡಿ ಗ್ರಾಮದ (ಮಸಂ.೭೩) ರಲ್ಲಿ ವಿಕಲಚೇತನರ, ಸುನಗ ಗ್ರಾಮದ (ಮಸಂ.೧೦೩) ರಲ್ಲಿ ಥೀಮ್ ಆಧಾರಿತ ಹಾಗೂ ಅನಗವಾಡಿ ಗ್ರಾಮದ (ಮಸಂ.೧೩೯) ರಲ್ಲಿ ಸಾಂಪ್ರದಾಯಿಕ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

    ಬಾದಾಮಿ ಮತಕ್ಷೇತ್ರ :
    ಬಾದಾಮಿ ಆಶ್ರಮ ಶಾಲೆ (ಮಸಂ.೧೬೩), ಗುಳೇದಗುಡ್ಡ ಸರಕಾರಿ ಮಹಿಳಾ ಪದವಿ ಪೂರ್ವ ಕಾಲೇಜ (ಮಸಂ.೨೩), ಬಾದಾಮಿ ಕನ್ನಡ ಬಾಲಕರ ಶಾಲೆ (ಮಸಂ.೧೫೦), ಖಾನಾಪೂರ ಗ್ರಾಮದ (ಮಸಂ.೧೦೪) ಮತ್ತು ಆಡಗಲ್ಲ ಗ್ರಾಮದ (ಮಸಂ.೧೧೯) ರಲ್ಲಿ ಸಖಿ ಮತಗಟ್ಟೆ, ಗುಳೇದಗುಡ್ಡ ಬಂಢಾರಿ ಕಾಲೇಜ (ಮಸಂ.೪೪) ರಲ್ಲಿ ಯುವ ಮತಗಟ್ಟೆ, ಯರಗೊಪ್ಪ ಎಸ್.ಬಿ ಗ್ರಾಮದ (ಮಸಂ.೨೨೦) ರಲ್ಲಿ ವಿಕಲಚೇತನರ, ಬಾದಾಮಿ ಸರಕಾರಿ ಕನ್ನಡ ಎಚ್‌ಪಿಎಸ್ ಶಾಲೆ (ಮಸಂ.೧೭೧) ರಲ್ಲಿ ಥೀಮ್ ಆಧಾರಿತ ಹಾಗೂ ಹಂಸನೂರ ಗ್ರಾಮದ ಗ್ರಾ.ಪಂ ಕಾರ್ಯಾಲಯ (ಮಸಂ.೮೪) ರಲ್ಲಿ ಸಾಂಪ್ರದಾಯಿಕ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

    ಬಾಗಲಕೋಟೆ ಮತಕ್ಷೇತ್ರ :
    ನವನಗರ ಸರಕಾರಿ ಮಾದರಿ ಕನ್ನಡ ಬಾಲಕರ ಶಾಲೆ ನಂ.೭ (ಮಸಂ.೧೬೬), ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (ಮಸಂ.೧೭೯), ಸೆಕ್ಟರ ನಂ.೧೫ ಸರಕಾರಿ ಕನ್ನಡ ಬಾಲಕರ ಶಾಲೆ (ಮಸಂ.೧೪೪), ಬೆವಿನಮಟ್ಟಿ ಗ್ರಾಮದ (ಮಸಂ.೧೯೭) ಮತ್ತು ಬೋಡನಾಯಕನದಿನ್ನಿ ಗ್ರಾಮದ (ಮಸಂ.೪೦) ರಲ್ಲಿ ಸಖಿ ಮತಗಟ್ಟೆ, ವಿದ್ಯಾಗಿರಿ ಸೆಂಟ ಅನ್ನಿಸ್ ಕಾನವೆಂಟ್ ಹೈ ಸ್ಕೂಲ್ (ಮಸಂ.೮೯) ರಲ್ಲಿ ಯುವ ಮತಗಟ್ಟೆ, ಬಾಗಲಕೋಟೆ ಮೋಟಗಿ ಬಸವೇಶ್ವರ ಪೂರ್ವ ಪ್ರಾಥಮಿಕ ಶಾಲೆ (ಮಸಂ.೧೧೯) ರಲ್ಲಿ ವಿಕಲಚೇತನರ, ವಿದ್ಯಾಗಿರಿ ಸರಕಾರಿ ಕನ್ನಡ ಬಾಲಕರ ಶಾಲೆ(ಬಿಟಿಡಿಎ) (ಮಸಂ.೮೦)ರಲ್ಲಿ ಥೀಮ್ ಆಧಾರಿತ, ಮುಚಖಂಡಿ ಎಲ್.ಟಿ ದುರ್ಗಾದೇವಿ ನಗರ (ಮಸಂ.೧೯೧) ರಲ್ಲಿ ಸಾಂಪ್ರದಾಯಿಕ ಮತಗಟ್ಟೆ ಸ್ಥಾಪಿಸಲಾಗಿದೆ.

    ಹುನಗುಂದ ಮತಕ್ಷೇತ್ರ :
    ಹುನಗುಂದ ವಿ.ಎಂ ಪ್ರೌಢಶಾಲೆ (ಮಸಂ.೮೪), ಇಳಕಲ್ಲ ಸಿಎಂಸಿ (ಮಸಂ.೧೫೭), ಇಳಕಲ್ಲ ಸಜ್ಜನ ಪ್ರೌಢಶಾಲೆ (ಮಸಂ.೧೫೯), ಧನ್ನೂರ ಕರ್ನಾಟಕ ಪಬ್ಲಿಕ್ ಸ್ಕೂಲ್ (ಮಸಂ.೧೨), ಸುಳಿಭಾವಿ ರಾಮಯ್ಯಸ್ವಾಮಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ (ಮಸಂ.೧೦೩)ರಲ್ಲಿ ಸಖಿ ಮತಗಟ್ಟೆ, ಇಳಕಲ್ಲ ಮಾರ್ಖಂಡಯ್ಯ ನೇಕಾರ ಸಹಕಾರ ಸಂಘ (ಮಸಂ.೧೭೬) ರಲ್ಲಿ ಯುವ ಮತಗಟ್ಟೆ, ತಳ್ಳಿಕೇರಿ ಗ್ರಾಮದ (ಮಸಂ.೧೩೧) ರಲ್ಲಿ ವಿಕಲಚೇತನರ, ಕರಡಿ ಗ್ರಾಮದ (ಮಸಂ.೪೫) ರಲ್ಲಿ ಥೀಮ್ ಆಧಾರಿತ ಹಾಗೂ ಸಂಗಮದಲ್ಲಿ ಸಂಗಮೇಶ್ವರ ಹೈಯರ್ ಸೆಕೆಂಡರಿ ಶಾಲೆ (ಮಸಂ.೮) ರಲ್ಲಿ ಸಾಂಪ್ರದಾಯಿಕ ಆಧಾರಿತ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಸಿಇಓ ಶಶಿಧರ ಕುರೇರ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts