More

  ತಪ್ಪದೆ ಎಲ್ಲರೂ ಮತದಾನ ಮಾಡಿ

  ಸಿದ್ದಾಪುರ: ರಾಷ್ಟ್ರ ನಿರ್ಮಾಣಕ್ಕೆ ಪ್ರತಿಯೊಬ್ಬರು ಮತದಾನ ಮಾಡಬೇಕು ಎಂದು ತಾಪಂ ಇಒ ಹಾಗೂ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷೆ ಲಕ್ಷ್ಮೀದೇವಿ ಹೇಳಿದರು. ಲೋಕಸಭಾ ಚುನಾವಣೆ ಅಂಗವಾಗಿ ಮತದಾನ ಜಾಗೃತಿಗಾಗಿ ಕಾರಟಗಿಯಲ್ಲಿ ಶನಿವಾರ ಸಂಜೆ ತಾಲೂಕು ಸ್ವೀಪ್ ಸಮಿತಿಯಿಂದ ಆಯೋಜಿಸಿದ್ದ ಬೈಕ್ ರ‌್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.

  ಪ್ರತಿಯೊಬ್ಬರೂ ಚುನಾವಣೆ ಹಬ್ಬದಲ್ಲಿ ಖುಷಿಯಿಂದ ಪಾಲ್ಗೊಳ್ಳಬೇಕು. ಮತ ಚಲಾಯಿಸಲು ಯಾರೂ ಕೂಡ ನಿರ್ಲಕ್ಷ್ಯ ತೋರಬಾರದು. ಮತದಾನ ಪ್ರಕ್ರಿಯೆಯಿಂದ ಯಾರೂ ದೂರ ಉಳಿಯಬಾರದು ಎಂದರು. ಪುರಸಭೆ ಮುಖ್ಯಾಧಿಕಾರಿ ಸುರೇಶ್ ಎಸ್. ಮಾತನಾಡಿ, ಮತದಾನ ಸರ್ವರಿಗೂ ಸಂವಿಧಾನಬದ್ಧವಾಗಿ ಬಂದಿರುವ ಹಕ್ಕಾಗಿದೆ. ಹೀಗಾಗಿ ಪ್ರತಿಯೊಬ್ಬರು ಮತದಾನದಲ್ಲಿ ಭಾಗಿಯಾಗಬೇಕು ಎಂದರು.

  ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಿಂದ ಆರಂಭಗೊಂಡ ಬೈಕ್ ರ‌್ಯಾಲಿ ನವಲಿ ಮುಖ್ಯ ರಸ್ತೆಯ ಮೂಲಕ ಹಳೇ ಬಸ್ ನಿಲ್ದಾಣ, ದಲಾಲಿ ಬಜಾರ್ , ರಾಯಚೂರು ಕೊಪ್ಪಳ ಮುಖ್ಯ ರಸ್ತೆಗಳಲ್ಲಿ ಸಂಚರಿಸಿತು. ಬಸ್ ನಿಲ್ದಾಣದಲ್ಲಿ ಮತದಾನ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
  ತಾಪಂ ಎಡಿ ವೈ.ವನಜಾ, ಗ್ರಾಪಂ ಪಿಡಿಒಗಳಾದ ರಾಮು ನಾಯಕ, ಪ್ರಕಾಶ ಹಿರೇಮಠ, ಸಾಯಿನಾಥ, ವೆಂಕಟೇಶ ನಾಯಕ, ಭಾಗ್ಯೇಶ್ವರಿ, ಕನಕಪ್ಪ, ಸೈಯದ್ ಜಿಲಾನ್ ಪಾಷಾ, ಶಿವರಾಜ್, ಮೆಹಬೂಬ್, ಸೇರಿ ಪುರಸಭೆ, ತಾಪಂ ಸಿಬ್ಬಂದಿ ಇದ್ದರು.

  See also  ಇನ್ನೂ ನಿಂತಿಲ್ಲ ಮಂಗನ ಕಾಯಿಲೆ ಆತಂಕ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts