

ಮುಂಬೈ: ಅಡುಗೆ ಮಾಡುವುದು ಕೂಡ ಒಂದು ಅತ್ಯದ್ಭುತ ಕಲೆ. ಇದೇ ಕಾರಣಕ್ಕೆ ಉನ್ನತ ಹುದ್ದೆಯಲ್ಲಿ ಇರುವವರೂ, ಗಣ್ಯ ವ್ಯಕ್ತಿಗಳು, ನಟ-ನಟಿಯರು ಎಷ್ಟೇ ಬಿಜಿ ಷೆಡ್ಯೂಲ್ ಇದ್ದರೂ ಅಡುಗೆ ಪ್ರಿಯರಾಗಿದ್ದರೆ ಸ್ವಲ್ಪ ಸಮಯವನ್ನಾದರೂ ಇದಕ್ಕಾಗಿ ವಿನಿಯೋಗ ಮಾಡುತ್ತಾರೆ.
ಇನ್ನು, ನಟ-ನಟಿಯರ ವಿಷಯಕ್ಕೆ ಮಾತ್ರ ಬರುವುದಾದರೆ ತಮ್ಮ ಅಭಿಮಾನಿಗಳನ್ನು ಓಲೈಸಿಕೊಳ್ಳಲು, ತಮ್ಮ ಟಿಆರ್ಪಿ ಹೆಚ್ಚಿಸಿಕೊಳ್ಳಲು ಹೊಸ ಹೊಸ ವಿಧಾನಗಳನ್ನು ಕಂಡುಕೊಳ್ಳುವಲ್ಲಿ ಇವರದ್ದು ಎತ್ತಿದ ಕೈ. ತಮ್ಮ ಜನಪ್ರಿಯತೆ ತುಸು ಕಮ್ಮಿಯಾಗುತ್ತಿದೆ ಎಂದುಕೊಂಡರಂತೂ ಸಾಮಾಜಿಕ ಜಾಲತಾಣದಲ್ಲಿ ಹೊಸ ಹೊಸ ಅವತಾರಗಳಲ್ಲಿ ಅವರು ಕಾಣಿಸಿಕೊಳ್ಳುತ್ತಾರೆ.
ಇದೀಗ ಬಾಲಿವುಡ್ ನಟ ಸಲ್ಮಾನ್ ಖಾನ್ ಸರದಿ. ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಅಭಿಮಾನಿಗಳಿಗಾಗಿ ಈರುಳ್ಳಿ ಉಪ್ಪಿನಕಾಯಿಯನ್ನು ಮಾಡಿ ತೋರಿಸಿದ್ದಾರೆ. ಇವರ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಕಪ್ಪು ಟೀಶರ್ಟ್ ಹಾಗೂ ಕೆಂಪು ಪ್ಯಾಂಟ್ ಧರಿಸಿರುವ ಸಲ್ಮಾನ್, ಫ್ರೆಂಚ್ ಗಡ್ಡ ಬಿಟ್ಟುಕೊಂಡು ಬಾಣಸಿಗನಾಗಿ ಕಾಣಿಸಿಕೊಂಡಿದ್ದಾರೆ.
ಹಸಿ ಈರುಳ್ಳಿಯ ಉಪ್ಪಿನಕಾಯಿಯನ್ನು ಹೇಗೆ ಮಾಡಿದ್ದಾರೆ ಎಂದು ನೀವೇ ನೋಡಿ, ಇಷ್ಟವಾದ್ರೆ ಟ್ರೈ ಮಾಡಿ...