VIDEO: ಓಲೆಕಾರ್ ಅಭಿಮಾನಿಗಳ ಹೈಡ್ರಾಮಾ: ಸಚಿವರನ್ನಾಗಿ ಮಾಡದಿದ್ರೆ ಸಾಯ್ತೇವೆಂದು ಟ್ಯಾಂಕ್​​ ಏರಿದರು!

olekar
Published on

ಹಾವೇರಿ: ಶಾಸಕ ಓಲೇಕಾರ್​ಗೆ ಸಚಿವಸ್ಥಾನ ಕೊಡಲೇಬೇಕು, ಇಲ್ಲವಾದರೆ ಸಾಯುತ್ತೇನೆ ಎಂದ ಅಭಿಮಾನಿಗಳಿಬ್ಬರು ವಾಟರ್ ಟ್ಯಾಂಕ್ ಮೇಲೆ ಏರಿ ಕೆಲ ಸಮಯ ಆತಂಕ ಸೃಷ್ಟಿಸಿದ ಘಟನೆ ಹಾವೇರಿಯಲ್ಲಿ ನಡೆದಿದೆ.

ಹಾವೇರಿ ನಗರದ ಮುನ್ಸಿಪಲ್ ಮೈದಾನದಲ್ಲಿ ಈ ಘಟನೆ ಸಂಭವಿಸಿದೆ. ಚಂದ್ರಶೇಖರ ಹಳ್ಳಿಕೇರಿ ಹಾಗೂ ಭೀಮನಗೌಡ ಪಾಟೀಲ್ ಎಂಬ ಅಭಿಮಾನಿಗಳು ಟ್ಯಾಂಕ್​ ಏರಿ ತುತ್ತ ತುದಿಯಲ್ಲಿ ಹೋಗಿದ್ದಾರೆ. ಇವರಿಬ್ಬರೂ ಹತ್ತಿಮತ್ತೂರು ಗ್ರಾಮದವರಾಗಿದ್ದಾರೆ.

ಪಕ್ಷದ ಬಾವುಟ ಮೈಗೆ ಸುತ್ತಿಕೊಂಡು ಟ್ಯಾಂಕ್ ಹತ್ತಿರುವ ಇಬ್ಬರೂ, ನೆಹರು ಓಲೇಕಾರ ಪರ ಘೋಷಣೆ ಕೂಗುತ್ತ ಟ್ಯಾಂಕ್​ ಏರಿದರು. ನಂತರ ಸಚಿವಸ್ಥಾನ ಸಿಗುವವರೆಗೂ ಕೆಳಗೆ ಇಳಿಯುವುದಿಲ್ಲ ಎಂದು ಪಟ್ಟು ಹಿಡಿದರು. ನಂತರ ಸ್ಥಳಕ್ಕೆ ಬಂದ ಪೊಲೀಸರಿಂದ ಪ್ರತಿಭಟನಾ ನಿರತ ಯುವಕರ ಮನವನ್ನು ಒಲಿಸುವಷ್ಟರಲ್ಲಿ ಸಾಕೋ ಸಾಕಾಯಿತು.

ನಿಮ್ಮ ಆಗ್ರಹ ಸರ್ಕಾರದ ಗಮನಕ್ಕೆ ತರುತ್ತೇವೆ. ದಯವಿಟ್ಟು ಕೆಳಗಿಳಿದು ಬನ್ನಿ ಎಂದು ಪಿ.ಎಸ್ ಐ ಹೊಸಮನಿ ಮನವಿ ಮಾಡಿದರು. ಆದರೆ ಯುವಕರು ಜಿಲ್ಲಾಧಿಕಾರಿಗಳು ಇಲ್ಲಿಗೆ ಬರಲಿ ಎಂದು ಆಗ್ರಹಿಸಿದರು. ನಂತರ ಸ್ಥಳಕ್ಕೆ ಆಂಬುಲೆನ್ಸ್​ ಹಾಗೂ ಅಗ್ನಿಶಾಮಕ ಸಿಬ್ಬಂದಿ ಕರೆಸಲಾಯಿತು.

ನಂತರ ತಹಶೀಲ್ದಾರ್​ ಸ್ಥಳಕ್ಕೆ ಆಗಮಿಸಿ ನಿಮ್ಮ ಮನವಿಯನ್ನು ಕೂಡಲೆ ಮುಖ್ಯಮಂತ್ರಿಗಳಿಗೆ ತಿಳಿಸುತ್ತೇವೆ. ಕೆಳಗೆ ಇಳಿದು ಬನ್ನಿ ಎಂದರು. ನಂತರ ಓಲೇಕಾರ್​ ಭಾವಚಿತ್ರ ಹಿಡಿದು ಇಬ್ಬರು ಯುವಕರು ಕೆಳಕ್ಕೆ ಬಂದರು.

ಇಲ್ಲಿದೆ ನೋಡಿ ವಿಡಿಯೋ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net