ಶಾಸಕನ ಹುಟ್ಟುಹಬ್ಬಕ್ಕೆ ಯುವತಿಯರ ಅಶ್ಲೀಲ ನೃತ್ಯ: ಮಧ್ಯರಾತ್ರಿ ಗಲಾಟೆಯಾದರೂ ಪೊಲೀಸರು ಗಪ್​ಚುಪ್!

dance
Published on

ಹೈದರಾಬಾದ್: ವೈಎಸ್​ಆರ್ ಕಾಂಗ್ರೆಸ್ ಪಕ್ಷದ ವತಿಯಿಂದ ಆಚರಿಸಲಾಗಿದ್ದ ಶಾಸಕ ಮದ್ದಿಸೆಟ್ಟಿ ವೇಣುಗೋಪಾಲ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಹಲವು ಯುವತಿಯರು ಅಶ್ಲೀಲ ನೃತ್ಯ ಮಾಡಿರುವ ಘಟನೆ ನಡೆದಿದೆ. ಇದರ ಪಕ್ಕದಲ್ಲಿಯೇ ಪೊಲೀಸ್ ಠಾಣೆ ಇದ್ದರೂ ಪೊಲೀಸರು ಮಾತ್ರ ಗಪ್​ಚುಪ್​ ಆಗಿದ್ದು, ಇಡೀ ಪ್ರಕರಣ ಭಾರಿ ವಿವಾದ ಸೃಷ್ಟಿಸಿದೆ.

ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿನ ದಾರ್ಶಿ ಕ್ಷೇತ್ರದ ಶಾಸಕ ಮದ್ದಿಸೆಟ್ಟಿ ವೇಣುಗೋಪಾಲ ಅವರ ಹುಟ್ಟುಹಬ್ಬ ಇತ್ತು. ಸಂಜೆಯ ವೇಳೆಯಿಂದಲೇ ಈ ನೃತ್ಯ ಕಾರ್ಯಕ್ರಮ ನಡೆಯುತ್ತಿತ್ತು. ಮಧ್ಯರಾತ್ರಿ ಶಾಸಕ ಮದ್ದಿಸೆಟ್ಟಿ ವೇಣುಗೋಪಾಲ ಕೇಕ್​ ಕಟ್​ ಮಾಡಿದ ಬಳಿಕ ನೃತ್ಯ ಕಾರ್ಯಕ್ರಮ ಇನ್ನಷ್ಟು ಜೋರಾಗಿತ್ತು. ಸ್ಥಳದಲ್ಲಿ ಜೋರು ಜೋರಾದ ಗಲಾಟೆ ನಡೆಯುತ್ತಿದ್ದರೂ ಪಕ್ಕದಲ್ಲಿಯೇ ಇದ್ದ ಪೊಲೀಸರು ಕಣ್ಮುಚ್ಚಿ ಕುಳಿತುಕೊಂಡಿದ್ದರು.

ಸ್ಥಳೀಯ ಕ್ಲಾಕ್ ಟವರ್ ಜಂಕ್ಷನ್​ನಲ್ಲಿ ರಸ್ತೆ ಮಧ್ಯದಲ್ಲಿದೇ ಕಾರ್ಯಕ್ರಮಕ್ಕಾಗಿ ಪೆಂಡಾಲ್ ಹಾಕಿ ವೇದಿಕೆ ನಿರ್ಮಾಣ ಮಾಡಲಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮ ಎಂದು ಹೇಳಲಾಗಿತ್ತು. ಇದರ ನೆಪದಲ್ಲಿ ಕೆಲ ಯುವ ವೈಎಸ್​ಆರ್​ಸಿಪಿ ಕಾರ್ಯಕರ್ತರು ಯುವತಿಯರೊಂದಿಗೆ ಅಶ್ಲೀಲ ನೃತ್ಯ ಮಾಡಿರುವ ಘಟನೆ ನಡೆದಿದೆ.

ಕಾರ್ಯಕ್ರಮಕ್ಕೆ ಆಗಮಿಸಿದ್ದ ವೈಎಸ್​ಆರ್​ ಕಾಂಗ್ರೆಸ್​ ಪಕ್ಷದ ಮುಖಂಡರೂ ಬಂದಿದ್ದರು. ಅವರೂ ಕೂಡ ಈ ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅಶ್ಲೀಲ ನೃತ್ಯ ನಡೆಯುತ್ತಿದ್ದರೂ ಅವರು ತಡೆಯಲಿಲ್ಲ. ಇದರ ವಿಡಿಯೋ ಹಾಗೂ ಫೋಟೋ ವೈರಲ್​ ಆಗಿದ್ದು, ಪ್ರತಿಪಕ್ಷಗಳಿಂದ ಭಾರಿ ಟೀಕೆ ಕೇಳಿಬಂದಿದೆ, (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net