ತವರಿನಿಂದ ಮಹಿಳೆಗೆ ಬಂದಿರುವ ಆಸ್ತಿಯಲ್ಲಿ ಯಾವ ಮಕ್ಕಳಿಗೂ ಪಾಲು ಸಿಗಲ್ಲ

nyayadevate
Published on
 ಪ್ರಶ್ನೆ : ತಾಯಿಗೆ ತವರು ಮನೆಯಿಂದ ಬಂದ ಆಸ್ತಿಯಲ್ಲಿ ಕೇವಲ ಹೆಣ್ಣು ಮಕ್ಕಳಿಗೆ ಮಾತ್ರ ಪಾಲು ಇದೆಯೋ ಅಥವಾ ಗಂಡು ಮಕ್ಕಳಿಗೂ ಪಾಲು ಇದೆಯೋ ತಿಳಿಸಿ.

ಉತ್ತರ: ತಾಯಿಗೆ ತವರಿನಿಂದ ಬಂದ ಆಸ್ತಿ ಆಕೆಯ ಪ್ರತ್ಯೇಕ ಆಸ್ತಿ ಆಗಿರುತ್ತದೆ. ಆಕೆ ಬದುಕಿರುವವರೆಗೆ ಅದರಲ್ಲಿ ಯಾವ ಮಕ್ಕಳಿಗೂ ಪಾಲು ಇರುವುದಿಲ್ಲ. ಆಕೆ ತನ್ನ ಜೀವಿತ ಕಾಲದಲ್ಲಿ ಈ ಆಸ್ತಿಯನ್ನು ಬೇರೆಯವರಿಗೆ ದಾನ, ಕ್ರಯ ,ವಿಲ್‌ ಇತ್ಯಾದಿ ರೂಪದಲ್ಲಿ ಪರಭಾರೆ ಮಾಡದಿದ್ದರೆ, ಆಗ, ತಾಯಿ ತೀರಿಕೊಂಡ ನಂತರ ಆಕೆಯ ಆಸ್ತಿ, ಆಕೆಯ ಪತಿಗೆ ಮತ್ತು ಎಲ್ಲ ಮಕ್ಕಳಿಗೂ ಸಮಪಾಲಾಗಿ ಬರುತ್ತದೆ. ಗಂಡು ಮಕ್ಕಳು ಅಥವಾ ಹೆಣ್ಣು ಮಕ್ಕಳು ಎನ್ನುವ ವ್ಯತ್ಯಾಸವಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net