ಅಜ್ಜಿಯ ತನ್ನ ಆಸ್ತಿಯನ್ನು ಹೆಣ್ಣು ಮಕ್ಕಳಿಗೆ ಮಾತ್ರ ವಿಲ್‌ ಮಾಡಬಹುದೇ?

nyayadevate
Published on
ನಮ್ಮ ಅಜ್ಜಿಗೆ ಮೂರು ಜನ ಗಂಡು ಮಕ್ಕಳು ಮೂರು ಜನ ಹೆಣ್ಣು ಮಕ್ಕಳು. ನಮ್ಮ ಅಜ್ಜಿಗೆ ಪಿತ್ರಾರ್ಜಿತವಾಗಿ ಬಂದ 10 ಎಕರೆ ಜಮೀನು ಇದೆ. ಅದರಲ್ಲಿ ಮೂರು ಎಕರೆ ಜಮೀನನ್ನು ನಮ್ಮ ಅಜ್ಜಿ ಹೆಣ್ಣು ಮಕ್ಕಳಿಗೆ ವಿಲ್‌ ಮಾಡಿದ್ದಾರೆ. ಈಗ ನಮ್ಮ ಅಜ್ಜಿ ಮರಣ ಹೊಂದಿದ್ದು, ಆ ಮೂರು ಎಕರೆ ಜಮೀನು ಹೆಣ್ಣು ಮಕ್ಕಳ ಹೆಸರಿಗೆ ವರ್ಗಾವಣೆ ಆಗಿದೆ. ಅದಕ್ಕೆ ನಮಗೆ ನ್ಯಾಯ ಬೇಕಾದರೆ ಏನು ಮಾಡಬೇಕು ತಿಳಿಸಿ.

ಉತ್ತರ: ನಿಮ್ಮ ಅಜ್ಜಿಗೆ ಅವರ ತವರಿನ ಕಡೆಯಿಂದ ಬಂದ ಆಸ್ತಿ ಅವರ ಪ್ರತ್ಯೇಕ ಆಸ್ತಿ ಆಗುತ್ತದೆ. ಅದನ್ನು ಅವರು ಯಾರಿಗೆ ಬೇಕಾದರೂ ಕೊಡಬಹುದು. ಅವರು ವಿಲ್‌ ಮಾಡಿರುವ ಮೂರು ಎಕರೆ ಜಮೀನು ಹೆಣ್ಣು ಮಕ್ಕಳಿಗೇ ಸೇರುತ್ತದೆ. ನೀವು ಅದನ್ನು ಪ್ರಶ್ನೆ ಮಾಡುವಂತಿಲ್ಲ. ಇನ್ನು ಉಳಿದ ಏಳು ಎಕರೆ ಜಮೀನು ಮತ್ತೆ ನಿಮ್ಮ ಅಜ್ಜಿಯ ಎಲ್ಲಾ ಗಂಡು ಮತ್ತು ಹಣ್ಣು ಮಕ್ಕಳಿಗೆ ಸಮಭಾಗವಾಗಿ ಭಾಗವಾಗುತ್ತದೆ.

ನೀವು ಕೋರ್ಟಿಗೆ ಹೋದರೆ, ಈಗ ಹೆಣ್ಣು ಮಕ್ಕಳಿಗೆ ಹೋಗಿರುವುದಕ್ಕಿಂತ ಹೆಚ್ಚಾಗಿ ಅವರಿಗೆ ಭಾಗ ಬರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net