ಪತ್ನಿಯ ಜತೆ ಮೂರೇ ತಿಂಗಳು ಇದ್ದು ಪ್ರತ್ಯೇಕ ಆದವನನ್ನು ಮದುವೆಯಾಗಬಹುದೆ?

nandondukathe
ಸಾಂದರ್ಭಿಕ ಚಿತ್ರ
Published on
ನಾನು ಒಬ್ಬಳು ಮಹಿಳೆ. ನನ್ನನ್ನು ಮದುವೆ ಮಾಡಿಕೊಳ್ಳಲು ಒಬ್ಬರು ಮುಂದಾಗಿದ್ದಾರೆ. ಆದರೆ ಅವರಿಗೆ ಈಗಾಗಲೇ ಮದುವೆಯಾಗಿದೆ. ದಂಪತಿ ನಡುವೆ ಸರಿಬರದೇ ಮೂರು ತಿಂಗಳಿಗೇ ಬೇರೆ ಬೇರೆಯಾಗಿದ್ದಾರೆ. ಪತ್ನಿ ವಾಪಸ್‌ ಬರುವುದಿಲ್ಲ. ನಾನೇ ವಿಚ್ಛೇದನಕ್ಕೆ ಅರ್ಜಿ ಹಾಕಿದ್ರೆ ಲಕ್ಷಾಂತರ ರೂಪಾಯಿ ಕೇಳುತ್ತಾಳೆ. ಅದಕ್ಕೆ ಅದರ ಉಸಾಬರಿ ಬೇಡ. ಅವಳು ವಾಪಸ್‌ ಬರುವುದಿಲ್ಲ ಎಂದು ಗೊತ್ತು. ಆದ್ದರಿಂದ ನಾವು ಮದುವೆಯಾಗೋಣ ಎನ್ನುತ್ತಿದ್ದಾರೆ. ನನಗೆ ಹೆದರಿಕೆ. ಒಪ್ಪಿಕೊಂಡರೆ ಮುಂದೆ ತೊಂದರೆ ಅಗುತ್ತದೆಯೇ?

ಉತ್ತರ: ಮೊದಲ ವಿವಾಹದಿಂದ ವಿಚ್ಛೇದನ ಪಡೆಯದೇ ಮತ್ತೊಂದು ಮದುವೆ ಆಗುವುದು ಕಾನೂನುಬಾಹಿರ ಹಾಗೂ ಶಿಕ್ಷಾರ್ಹ ಅಪರಾಧ. ವಿಚ್ಛೇದನ ಪಡೆದ ನಂತರ ಮದುವೆಯಾಗಿ. ನಿಮ್ಮನ್ನು ಮದುವೆ ಆಗಲೇ ಬೇಕೆಂದಿದ್ದರೆ, ಮೊದಲ ಹೆಂಡತಿಯನ್ನು ಒಪ್ಪಿಸಿ ಅವಳಿಂದ ವಿಚ್ಛೇದನ ಪಡೆಯಲೇ ಬೇಕು. ಯಾವುದೇ ಕಾರಣಕ್ಕೂ ನೀವು ಆತುರ ಪಟ್ಟು ಅವರನ್ನು ಈಗಲೇ ಮದುವೆ ಆಗಬೇಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net