ಗಂಡ ಬದುಕಿರುವಾಗಲೇ ಸ್ವಯಾರ್ಜಿತ ಆಸ್ತಿ ಕೇಳಬಹುದೆ? ಪಿತ್ರಾರ್ಜಿತ ಆಸ್ತಿಯಲ್ಲಿ ಯಾರಿಗೆಲ್ಲಾ ಹಕ್ಕಿವೆ?

nyayadevate
Published on
ಗಂಡನ ಸ್ವಯಾರ್ಜಿತ ಆಸ್ತಿಯಲ್ಲಿ ಹೆಂಡತಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಆಸ್ತಿಯ ಹಕ್ಕು ಇರುತ್ತದೆಯೇ? ಗಂಡನ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಇರುತ್ತದೆಯೇ?

ಉತ್ತರ: ಯಾವುದೇ ಹಿಂದು ಪುರುಷನ ಸ್ವಯಾರ್ಜಿತ ಆಸ್ತಿಯಲ್ಲಿ ಆತ ಬದುಕಿರುವಾಗ ಆತನ ಹೆಂಡತಿ ಮತ್ತು ಮಕ್ಕಳಿಗೆ ಯಾವುದೇ ಹಕ್ಕೂ ಇರುವುದಿಲ್ಲ.

ಪಿತ್ರಾರ್ಜಿತ ಆಸ್ತಿಯಲ್ಲಿ ಆತನ ಮಕ್ಕಳು (ಗಂಡು ಮತ್ತು ಹೆಣ್ಣು ಮಕ್ಕಳು) ಇಬ್ಬರಿಗೂ, ತಂದೆ ಬದುಕಿರುವಾಗಲೇ, ಭಾಗ ಕೇಳುವ ಹಕ್ಕು ಇರುತ್ತದೆ. ಆದರೆ ಆ ಹಕ್ಕು ಪತ್ನಿಗೆ ಇರುವುದಿಲ್ಲ. ಪತಿಯ ಜೀವಿತಕಾಲದಲ್ಲಿ ಆತನ ಪತ್ನಿಗೆ, ತನ್ನ ಪತಿಯಿಂದ ಜೀವನಾಂಶ ಕೇಳುವ ಹಕ್ಕು ಮಾತ್ರ ಇರುತ್ತದೆ. ಪತಿ ತೀರಿಕೊಂಡರೆ ಆತನ ಸ್ವಯಾರ್ಜಿತ ಆಸ್ತಿಯಲ್ಲಿ ಆತನ ವಿಧವೆ ಪತ್ನಿ ಮತ್ತು ಮಕ್ಕಳಿಗೆ ಸಮಪಾಲು ಇರುತ್ತದೆ.

ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್​ ಕ್ಲಿಕ್ಕಿಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net