

ಪ್ರಶ್ನೆ: ನನ್ನ ಮಗಳಿಗೆ 1995ರಲ್ಲಿ ಹರಷಿನ ಕುಂಕುಮಕ್ಕೆಂದು ನನ್ನ ಕೆಲವು ಆಸ್ತಿಗಳನ್ನು ದಾನ ಪತ್ರದ ಮೂಲಕ ಮಾಡಿಕೊಟ್ಟಿದ್ದೇನೆ. ಈಗ ಅವಳು ನನಗೆ ಪಿತ್ರಾರ್ಜಿತ ಆಸ್ತಿಯಲ್ಲೂ ಭಾಗ ಬೇಕೆಂದು ಕೇಳುತ್ತಿದ್ದಾಳೆ. ಇದರಿಂದ ನನ್ನ ಗಂಡುಮಕ್ಕಳಿಗೆ ಅನ್ಯಾಯವಾಗುತ್ತದೆ. ದಾನ ಪತ್ರದಲ್ಲಿ ಮಾಡಿಕೊಟ್ಟ ಆಸ್ತಿಗಳನ್ನು ವಾಪಸ್ ಕೊಡು ಎಂದರೂ ಕೇಳುತ್ತಿಲ್ಲ. ಹೀಗಿರುವಾಗ ಪಿತ್ರಾರ್ಜಿತ ಆಸ್ತಿಯಲ್ಲಿ ಭಾಗ ಕೇಳಲು ಅವಳಿಗೆ ಕಾನೂನಿನಲ್ಲಿ ಹಕ್ಕು ಇದೆಯೇ?
ಉತ್ತರ: ನಿಮ್ಮ ಸ್ವಯಾರ್ಜಿತ ಅಥವಾ ಪ್ರತ್ಯೇಕ ಆಸ್ತಿಯನ್ನು ನಿಮ್ಮ ಮಗಳಿಗೆ ನೀವು 1995ರಲ್ಲಿ ನಿಮ್ಮ ಸ್ವ ಇಚ್ಚೆಯಿಂದ ದಾನ ಮಾಡಿದ್ದರೆ ಈಗ ಅದನ್ನು ಮತ್ತೆ ನೀವು ವಾಪಸ್ ಪಡೆಯುವಂತಿಲ್ಲ. ಇತ್ತೀಚಿನ ಸರ್ವೋಚ್ಚ ನ್ಯಾಯಾಲಯದ ತೀರ್ಪಿನಂತೆ ನಿಮ್ಮ ಮಗಳಿಗೂ, ನಿಮ್ಮ ಗಂಡು ಮಕ್ಕಳ ಜೊತೆ ಸರಿ ಸಮಾನವಾಗಿ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಇರುತ್ತದೆ.
ನೀವು ನಿಮ್ಮ ತಂದೆಯಿಂದ ಮಾತ್ರ ಪಡೆದಿರುವ ಆಸ್ತಿ ಆದರೆ ಆಗ ಅದು ನಿಮ್ಮ ಪ್ರತ್ಯೇಕ ಆಸ್ತಿ ಆಗುತ್ತದೆ. ಆದರಲ್ಲಿ ನೀವು ಅವಳಿಗೆ ಭಾಗ ಕೊಡಬೇಕಿಲ್ಲ. ಆದರೆ ಆಸ್ತಿಯು ನಿಮ್ಮ ಅಜ್ಜನಿಂದ ನಿಮ್ಮ ತಂದೆಗೆ ಬಂದಿದ್ದು, ನಿಮ್ಮ ತಂದೆಯಿಂದ ನಿಮಗೆ ಬಂದಿದ್ದರೆ ಅದರಲ್ಲಿ ಆಕೆ ಭಾಗ ಕೇಳಬಹುದು. ನೀವು ಹೆದರಬೇಡಿ. ನಿಮ್ಮ ಮಗಳು ಕೇಸು ಹಾಕಿದರೆ ಪ್ರಕರಣವನ್ನು ಮಧ್ಯಸ್ಥಿಕೆಗೆ ಕಳಿಸಲು ಕೇಳಿಕೊಳ್ಳಿ. ಅಲ್ಲಿ ಮಾತುಕತೆಯ ಮೂಲಕ ರಾಜೀ ಸೂತ್ರಕ್ಕೆ ಬರುವ ಸಾಧ್ಯತೆಯೂ ಇರಬಹುದು.
ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು susheelasarathi@yahoo.co.in ಅಥವಾ lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)