

ಎಂಗೇಜ್ಮೆಂಟ್ ಆದವನ ಜತೆ ಈಗಲೂ ಸಂಬಂಧ ಇದೆ ಎಂದು ಹೇಳಿ, ಕುಡಿದು ಬಂದು ಕೈ ಮಾಡುತ್ತಾರೆ/ ಹಿಂಸೆ ತಾಳದೇ ಸದ್ಯ ತವರಿನಲ್ಲಿ ಇದ್ದೇನೆ. ನನ್ನ ವಸ್ತುಗಳೆಲ್ಲ ಗಂಡನ ಹತ್ತಿರವೇ ಇದೆ. ನನಗೂ ಸಾಕಾಗಿದೆ. ಡಿವೋರ್ಸ್ ಪಡೆಯಬೇಕೆಂದುಕೊಂಡಿದ್ದೇನೆ. ಡಿವೋರ್ಸ್ ಸಿಗುತ್ತದೆಯೆ? ನನ್ನ ವಸ್ತುಗಳೆಲ್ಲ ವಾಪಸ್ ಬರುತ್ತದೆಯೇ?
ಉತ್ತರ: ಅನವಶ್ಯಕವಾಗಿ ಹೆಂಡತಿಯ ಮೇಲೆ ಸಂಶಯ ಪಡುವುದು, ಕುಡಿದು ಬಂದು ಹೊಡೆಯುವುದು, ಪತ್ನಿಯ ವಸ್ತುಗಳನ್ನೆಲ್ಲ ತನ್ನ ಸುಪರ್ದಿಯಲ್ಲಿ ಇಟ್ಟುಕೊಂಡು ಸತಾಯಿಸುವುದು ಇವೆಲ್ಲ ಕ್ರೂರತೆಯ ಅಂಶಗಳೇ. ಮದುವೆಗೆ ಹಿಂದೆ ನಿಮ್ಮ ಜೀವನದಲ್ಲಿ ಆಗಿರುವ ಘಟನೆಗಳನ್ನು ಹಿಡಿದು ಮದುವೆ ಆದ ಮೇಲೆ ಪತಿ ನಿಮ್ಮನ್ನು ಸತಾಯಿಸುವುದೂ ಕ್ರೂರವೇ.
ಇವೆಲ್ಲದರ ಆಧಾರದ ಮೇಲೆ ನೀವು ವಿಚ್ಛೇದನದ ಪ್ರಕರಣವನ್ನು ದಾಖಲಿಸಬಹುದು. ಹಾಗೆಯೇ ನೀವು ನಿಮ್ಮ ಪತಿಯ ವಿರುದಟಛಿ ಕೌಟುಂಬಿಕ ಹಿಂಸೆಯಿಂದ ಮಹಿಳೆಯರನ್ನು ರಕ್ಷಣೆ ಮಾಡುವ ಕಾಯ್ದೆಯ ಕೆಳಗೆ ಪ್ರಕರಣ ದಾಖಲಿಸಿ.
ಆ ಪ್ರಕರಣದಲ್ಲಿ ನಿಮ್ಮ ವಸ್ತುಗಳನ್ನೆಲ್ಲ ಪತಿಯಿಂದ ಕೊಡಿಸಬೇಕೆಂದು ಮಧ್ಯಂತರ ಅರ್ಜಿ ಹಾಕಿ. ನ್ಯಾಯಾಲಯದಿಂದ ಅನುಕೂಲ ಆಗಬಹುದು.
ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)