ಕರೊನಾ ಬಂಡವಾಳವಾಗಿಸಿಕೊಂಡು ಹಣದಾಸೆಗೆ ಬಿದ್ದ ನರ್ಸಿಂಗ್‌ ಹೋಂಗಳಿಗೆ ಸಚಿವರಿಂದ ಈ ಎಚ್ಚರಿಕೆ ...

nursing home
Published on

ಬೆಂಗಳೂರು: ರಾಜ್ಯದಲ್ಲಿ 20-30 ಹಾಸಿಗೆಗಳ ಸಾಮರ್ಥ್ಯದ ನರ್ಸಿಂಗ್ ಹೋಮ್ ಗಳು ಹಣದಾಸೆಗಾಗಿ ಕರೊನಾ ಸೋಂಕಿತರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡುವಂತಿಲ್ಲ ಈ ಕುರಿತು ಕಾನೂನು ಜಾರಿಯಾಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಎಚ್ಚರಿಸಿದ್ದಾರೆ.

ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಬುಧವಾರ ಮಾತನಾಡಿದ ಅವರು, ಕರೊನಾ ಸೋಂಕಿತರಿಗೆ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಹಾಗೂ ಜೀವ ರಕ್ಷಣೆ ಉದ್ದೇಶದಿಂದ ಈ ನಿರ್ಬಂಧ ವಿಧಿಸಲಾಗುತ್ತಿದೆ ಎಂದು ಹೇಳಿದರು.

ದೊಡ್ಡ ಆಸ್ಪತ್ರೆಗಳು ತಮ್ಮದೇ ಆದ ಆಮ್ಲಜನಕ ಘಟಕಗಳನ್ನು ಹೊಂದಿರುತ್ತವೆ. ಸಣ್ಣ ಆಸ್ಪತ್ರೆಗಳಿಗೆ ಇದು‌ ಸಾಧ್ಯವಾಗದು. ಅಲ್ಲದೆ ಪ್ರತಿದಿನ 3 ಸಿಲಿಂಡರ್ ಬೇಕಾಗಲಿದ್ದು, ಸಕಾಲಕ್ಕೆ ಲಭಿಸದಿದ್ದರೆ‌ ಕಷ್ಟ. ಈ ಹಿನ್ನೆಲೆಯಲ್ಲಿ ಕರೊನಾ ಸೋಂಕಿತರು ಹೊರತುಪಡಿಸಿ ಉಳಿದ ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡುವುದು ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗುವುದು ಎಂದರು.

ಬೀದರ್ ಬಿಮ್ಸ್ ವಿಶೇಷ ಪ್ರಕರಣ. ಅಲ್ಲಿ ಈಗಾಗಲೇ ಅಧಿಕ ಸಂಖ್ಯೆಯ ಸೋಂಕಿತರು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಲಿದ್ದು, 1-2 ದಿನಗಳಲ್ಲಿ ಸ್ವತಃ ಭೇಟಿ ನೀಡುವೆ ಎಂದು ಸುಧಾಕರ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net