More

    ಸಿಡಿ ಕೇಸ್‌ ನಂತರ ತೆರೆಮರೆಗೆ ಸರಿದಿದ್ದ ಜಾರಕಿಹೊಳಿ ಮಾಡಿದರು ಟ್ವೀಟ್‌- ಸಂತಸದಲ್ಲಿ ತೇಲಾಡಿದ ಅಭಿಮಾನಿಗಳು

    ಬೆಂಗಳೂರು: ಕರೊನಾದ ಎರಡನೆಯ ಅಲೆ ಹೆಜ್ಜೆಹೆಜ್ಜೆಗೂ ಆತಂಕ ಸೃಷ್ಟಿಸಲು ಶುರು ಮಾಡಿ ಸುದ್ದಿಯಾಗುತ್ತಿದ್ದ ಬೆನ್ನಲ್ಲೇ ರಮೇಶ್‌ ಜಾರಕಿಹೊಳಿ ಅವರ ಸಿಡಿ ಕೇಸ್‌ ವಿಷಯ ತಣ್ಣಗಾಯಿತು.
    ಸಿಡಿಯಲ್ಲಿರುವ ಯುವತಿ ನ್ಯಾಯಾಧೀಶರ ಎದುರು ಬಂದು ಈ ವಿವಾದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡುತ್ತಿದ್ದಂತೆಯೇ. ಇತ್ತ ಜಾರಕೀಹೊಳಿಯವರು ಕಣ್ಮರೆಯಾಗಿದ್ದರು. ನಂತರ ಅವರು ಬೆಳಗಾವಿಯಲ್ಲಿ ನೆಲೆಸಿರುವುದು ತಿಳಿದುಬಂದಿತ್ತು.

    ಈ ನಡುವೆಯೇ, ತಮಗೆ ಕರೊನಾ ಸೋಂಕು ತಗುಲಿದೆ ಎಂದು ಹೇಳಿಕೆ ನೀಡಿದ್ದರು. ನಂತರ ಐಸಿಯುನಲ್ಲಿಯೂ ಚಿಕಿತ್ಸೆ ಪಡೆದು ನಂತರ ಹೋಮ್‍ಕ್ವಾರಂಟೈನ್‍ನಲ್ಲಿ ಇರುವುದಾಗಿ ಹೇಳಿದ್ದರು. ನಂತರ ಅವರು ಎಲ್ಲಿಯೂ ಕಾಣಿಸಿಕೊಳ್ಳದೇ ಇರುವುದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತ್ತು.

    ಇದೀಗ ಜಾರಕಿಹೊಳಿಯವರು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಪುನಃ ಮೊದಲಿನಂತೆ ಕಾರ್ಯ ಆರಂಭಿಸಿರುವ ಅವರು ಜಾಲತಾಣದಲ್ಲಿ ಸಕ್ರಿಯರಾಗುವ ಮೂಲಕ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದ್ದಾರೆ. ಫೆ.18ರಿಂದ ನಿಷ್ಕ್ರಿಯವಾಗಿದ್ದ ಟ್ವಿಟರ್ ಖಾತೆ ಇಂದು ಪುನಃ ಸಕ್ರಿಯವಾಗಿದೆ. ಶ್ರೀರಾಮನವಮಿ ಅಂಗವಾಗಿ ರಮೇಶ್ ಜಾರಕಿಹೊಳಿ ಅವರ ಟ್ವಿಟರ್ ಖಾತೆಯಲ್ಲಿ ಶುಭಾಶಯ ತಿಳಿಸಿದ್ದಾರೆ. ಶ್ರೀ ರಾಮನ ಆಶೀರ್ವಾದ ನಿಮ್ಮ ಕುಟುಂಬದ ಮೇಲಿರಲಿ, ನಿಮ್ಮ ಕನಸು ನೆರವೇರಲು ಆ ಭಗವಂತ ಸಹಕರಿಸಲಿ, ಜೈ ಶ್ರೀ ರಾಮ್. ರಾಮ ನವಮಿ ಹಬ್ಬದ ಶುಭಾಶಯಗಳು ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

    ಇದು ಕೇವಲ ಶುಭಾಶಯವಾಗಿದ್ದರೂ, ಎರಡು ತಿಂಗಳಿನಿಂದ ಅವರನ್ನು ಜಾಲತಾಣದಲ್ಲಿಯೂ ಕಾಣದ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಅವರ ಟ್ವೀಟ್‌ಗೆ ನೂರಾರು ಮಂದಿ ಪ್ರತಿಕ್ರಿಯಿಸಿದ್ದು, ಶುಭಾಶಯ ಕೋರಿದ್ದಾರೆ.

    ಮಗ ಸುಂದರ ಆಗಿರೋದೇ ತಪ್ಪಾಗಿಬಿಟ್ಟಿದೆ ಮೇಡಂ… ಅಹಂ ಮಿತಿಮೀರಿದೆ- ಸರಿ ದಾರಿಗೆ ತರೋದು ಹೇಗೆ?

    ಎರಡನೆಯ ಮದುವೆಯಾಗಿದ್ದೇ ತಪ್ಪಾಯ್ತಾ? ಗಂಡನ ಪ್ರೀತಿಗಾಗಿ ಹಂಬಲಿಸುತ್ತಿರುವ ನನಗೇಕೇ ಈ ಹಿಂಸೆ ಮೇಡಂ?

    ಬೇಸಿಗೆ ರಜೆ ಎಷ್ಟು ದಿನ? ಶಾಲೆ ಶುರು ಯಾವಾಗ? ಪರೀಕ್ಷೆ ಎಂದು…? ಇಲ್ಲಿದೆ ನೋಡಿ ಸಂಪೂರ್ಣ ಡಿಟೇಲ್ಸ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts