

ಮುಂಬೈ: ಮನುಷ್ಯನ ಕ್ರೌರ್ಯ, ಕಾಮುಕತನಕ್ಕೆ ಕೊನೆಯೇ ಇಲ್ಲವೇನೋ, ಸಂಬಂಧಗಳಿಗೆ ಬೆಲೆಯೇ ಇಲ್ಲವೇನೋ ಎನ್ನುವಂಥ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ.
ಅಂಥದ್ದೇ ಒಂದು ಘಟನೆ ಮುಂಬೈನಲ್ಲಿ ನಡೆದಿದೆ. ತಂದೆಯೇ ತನ್ನ 9 ವರ್ಷದ ಮಗಳ ಮೇಲೆ ನಿರಂತರ ಅತ್ಯಾಚಾರ ಎಸಗಿ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಬಾಲಕಿಯ ಚೀರಾಟ ಕೇಳುತ್ತಿದ್ದ ನೆರೆಯವರು ಈ ವಿಷಯವನ್ನು ಪೊಲೀಸರಿಗೆ ಮುಟ್ಟಿಸಿದ್ದಾರೆ. ಪೊಲೀಸರು ಮನೆಗೆ ಬಂದಾಗ ಕೂಡ ಕುಡಿದ ಅಮಲಿನಲ್ಲಿದ್ದ ತಂದೆ ವಿವಸ್ತ್ರನಾಗಿದ್ದು ಬಾಲಕಿಯ ಮೇಲೆ ಹಲ್ಲೆ ನಡೆಸುತ್ತಿದ್ದ.
ಬಾಲಕಿಯನ್ನು ಪೊಲೀಸರು ರಕ್ಷಿಸಿದ್ದಾರೆ. ಆಕೆಯನ್ನು ಪ್ರಶ್ನಿಸಿದಾಗ ತನ್ನ ಅಪ್ಪ ಕುಡಿದುಬಂದು ಹೊಡೆಯುತ್ತಾನೆ, ಅತ್ಯಾಚಾರ ಮಾಡುತ್ತಾನೆ ಎಂದು ಬಾಲಕಿ ತನಗಾಗುತ್ತಿರುವ ಅನ್ಯಾಯಗಳನ್ನು ಪೊಲೀಸರ ಎದುರು ಬಿಚ್ಚಿಟ್ಟಿದ್ದಾಳೆ.
ವಿಕೃತ ತಂದೆಯನ್ನು ಪೊಲೀಸರು ಬಂಧಿಸಿ ಕೇಸು ದಾಖಲು ಮಾಡಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈತ ತನ್ನ ಮಗಳ ಮೇಲೆ ಮಾತ್ರವೇ ಅಥವಾ ಇತರ ಹೆಣ್ಣು ಮಕ್ಕಳ ಮೇಲೆಯೂ ಇದೇ ರೀತಿ ಕೃತ್ಯ ಎಸಗಿದ್ದಾನೆಯೇ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ವಿವರಿಸಿದ್ದಾರೆ.