VIDEO: ಪತ್ನಿಯ ಜತೆ ‘ನಿನ್ನಲ್ಲೇ...’ ಹಾಡಿಗೆ ಹೆಜ್ಜೆ ಹಾಕಿದ ನಿಖಿಲ್‌ ಕುಮಾರಸ್ವಾಮಿ- ವಿಡಿಯೋ ವೈರಲ್‌

1203573
Published on

ಬೆಂಗಳೂರು: ನಟ ನಿಖಿಲ್ ಕುಮಾರಸ್ವಾಮಿ ಅವರು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಿಜಿಯಾಗಿದ್ದಾರೆ. ಈಚೆಗಷ್ಟೇ ಅಪ್ಪನಾಗಿರುವ ಸಂತೋಷ ಹಂಚಿಕೊಂಡಿದ್ದ ನಿಖಿಲ್‌, ಇದೀಗ ತಾವು ನೃತ್ಯವೊಂದಕ್ಕೆ ಸ್ಟೆಪ್‌ ಹಾಕುತ್ತಿರುವ ವಿಡಿಯೋ ಒಂದನ್ನು ಶೇರ್‌ ಮಾಡಿದ್ದಾರೆ. ಇದರಲ್ಲಿ ಇವರ ಪತ್ನಿ ರೇವತಿಯನ್ನೂ ಕಾಣಬಹುದಾಗಿದೆ.

ವೀಡಿಯೋದಲ್ಲಿ ನಿಖಿಲ್ ಹಾಗೂ ರೇವತಿ ಬ್ಲ್ಯಾಕ್ ಆ್ಯಂಡ್ ಬ್ಲ್ಯಾಕ್ ಮ್ಯಾಚಿಂಗ್‌ ಡ್ರೆಸ್ ತೊಟ್ಟು ರೈಡರ್ ಸಿನಿಮಾದ ‘ನಿನ್ನಲ್ಲೇ...’ ಹಾಡಿಗೆ ಸ್ಟೆಪ್‌ ಹಾಕಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಅದನ್ನು ಶೇರ್‌ ಮಾಡಿದ್ದಾರೆ.
ಜಾಗ್ವರ್ ಹಾಗೂ ಸೀತಾರಾಮ ಕಲ್ಯಾಣ ಸಿನಿಮಾದಲ್ಲಿ ಅಭಿನಯಿಸಿದ ನಂತರ ರೈಡರ್ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ ನಿಖಿಲ್‌. ಇದರ ಹಾಡುಗಳು ಕೂಡ ಇದಾಗಲೇ ಭಾರಿ ವೈರಲ್‌ ಆಗಿದ್ದು, ಇದೇ 24ರಂದು ಸಿನಿಮಾ ಬಿಡುಗಡೆಯಾಗುತ್ತಿದೆ.

ಜಾಗ್ವಾರ್ ಸಿನಿಮಾದ ಮೂಲಕ ಈಗಾಗಲೇ ಸಾಕಷ್ಟು ಅಭಿಮಾನಿಗಳನ್ನು ಗಳಿಸಿರುವ ನಿಖಿಲ್‌, ರಾಜಕೀಯದಲ್ಲಿಯೂ ಬಿಜಿಯಾಗಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಅವರ ನೃತ್ಯದ ವಿಡಿಯೋ ಇಲ್ಲಿದೆ ನೋಡಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net