ಅಂಗವಿಕಲರು, ಕರೊನಾ ಸೋಂಕಿತರು, 80 ವರ್ಷ ಮೀರಿದರಿಗೆ ಮನೆಯಿಂದಲೇ ವೋಟಿಂಗ್‌ ಸೌಲಭ್ಯ!

Voting
Published on

ಲಖನೌ: ಕೆಲವು ರಾಜ್ಯಗಳ 2022ರಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷಗಳೂ ಮತದಾರರನ್ನು ಓಲೈಸಿಕೊಳ್ಳಲು ಭಾರಿ ಕಸರತ್ತು ಮಾಡುತ್ತಿದೆ. ಈ ಹೊತ್ತಿನಲ್ಲಿ ಉತ್ತರ ಪ್ರದೇಶದ ಸರ್ಕಾರ ಮಹತ್ವದ ನಿರ್ಧಾರವೊಂದು ತೆಗೆದುಕೊಂಡಿದೆ.

ಅದೇನೆಂದರೆ, ಮತದಾರರ ಹಿತದೃಷ್ಟಿಯಿಂದ ಚುನಾವಣಾ ಆಯೋಗವು ಕೆಲವರಿಗೆ ಮನೆಯಿಂದಲೇ ಮತದಾನ ಮಾಡುವ ಅನುಮತಿಯನ್ನು ನೀಡಿದೆ.‌

ಅವರೆಂದರೆ,80 ವರ್ಷದ ಮೇಲ್ಪಟ್ಟ ವೃದ್ಧರು, ಅಂಗವಿಕಲರು ಹಾಗೂ ಕರೊನಾ ಸೋಂಕಿಗೆ ಒಳಗಾಗಿರುವವರು ಮತಗಟ್ಟೆಗೆ ಬಂದು ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮನೆಯಲ್ಲೇ ಇದ್ದು ಅಭ್ಯರ್ಥಿಗಳಿಗೆ ಮತ ಚಲಾಯಿಸುವ ವ್ಯವಸ್ಥೆಯನ್ನು ಅವರಿಗೆ ಮಾಡಿಕೊಡಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್‌ ಚಂದ್ರ ತಿಳಿಸಿದ್ದಾರೆ.

ಉತ್ತರ ಪ್ರದೇಶ ಹಾಲಿ ಸರ್ಕಾರದ ಅವಧಿ ಮೇ 14ಕ್ಕೆ ಮುಗಿಯಲಿದೆ. ಚುನಾವಣೆಯನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net