ನೀಟ್‌ ಪರೀಕ್ಷೆ ಮುಂದೂಡಿಲ್ಲ- ವದಂತಿಗೆ ಕಿವಿಗೊಡಬೇಡಿ ಎಂದ ಕೇಂದ್ರ ವಾರ್ತಾ ಇಲಾಖೆ

NEET
Published on

ನವದೆಹಲಿ: ಇದೇ 21ರಂದು ನಡೆಯಲಿರುವ ಸ್ನಾತಕೋತ್ತರ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ (ನೀಟ್‌) ಪರೀಕ್ಷೆ ಮುಂದೂಡಿಕೆ ಆಗಲಿಲ್ಲ ಎಂದು ಕೇಂದ್ರ ವಾರ್ತಾ ಇಲಾಖೆ ಸ್ಪಷ್ಟಪಡಿಸಿದೆ.

ಈ ಪರೀಕ್ಷೆಯು ಮುಂದೂಡಿಕೆ ಆಗಿದೆ ಎಂಬ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿಗೆ ಸ್ಪಷ್ಟನೆ ನೀಡಿರುವ ಇಲಾಖೆ, ಇದು ಸುಳ್ಳು ಸುದ್ದಿ. ಪರೀಕ್ಷೆಯನ್ನು ಮುಂದೂಡಿಲ್ಲ. ಪರೀಕ್ಷೆಯು ನಿಗದಿಯಾಗಿರುವಂತೆ ಮೇ 21ರಂದೇ ನಡೆಯಲಿದೆ ಎಂದು ತಿಳಿಸಿದೆ.

ಸದ್ಯ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ನೀಟ್‌ ಪರೀಕ್ಷೆಯನ್ನು ಮೇ 21ರ ಬದಲಾಗಿ ಜುಲೈ 9ರಂದು ನಡೆಸಲಾಗುವುದು ಎಂದು ಇದೆ. ರಾಷ್ಟ್ರೀಯ ಪರೀಕ್ಷಾ ಮಂಡಳಿ ಹೆಸರಿನಲ್ಲಿ ಈ ಸುದ್ದಿ ಹರಿದಾಡುತ್ತಿದೆ. ಆದರೆ ಇದು ಶುದ್ಧ ಸುಳ್ಳು. ಪರೀಕ್ಷೆಯು ಇದಾಗಲೇ ನಿಗದಿಯಾಗಿರುವಂತೆ ಮೇ 21ರಂದೇ ನಡೆಯಲಿದೆ. ಸುಳ್ಳು ಸುದ್ದಿಗೆ ಅಭ್ಯರ್ಥಿಗಳು ಕಿವಿಗೊಡಬಾರದು ಎಂದು ಇಲಾಖೆ ಹೇಳಿದೆ.

ಪರೀಕ್ಷೆ ಕುರಿತು ಹೆಚ್ಚಿನ ಮಾಹಿತಿ ಬೇಕಿದ್ದರೆ https://natboard.edu.in ಕ್ಲಿಕ್ಕಿಸಬಹುದು ಎಂದು ಇಲಾಖೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net