

ರಾಮನಗರ: ರಾಮನಗದಲ್ಲಿ ಅಚ್ಚರಿಯ ಘಟನೆಯೊಂದು ನಡೆಯುತ್ತಿದೆ. ಅದೇನೆಂದರೆ ಇಲ್ಲಿಯ ಮನೆಗಳ ಮೇಲೆ ಪ್ರತಿನಿತ್ಯ ಕಲ್ಲುಗಳು ಬೀಳುತ್ತಿವೆ. ಹಗಲು ರಾತ್ರಿ ಎನ್ನದೆ ಮನೆಗಳ ಮೇಲೆ ಕಲ್ಲುಗಳು ಬೀಳುತ್ತಿರುವುದರಿಂದ ಜನರು ಕಂಗಾಲಾಗಿ ಹೋಗಿದ್ದಾರೆ.
ರಾಮನಗರದ ವಿಜಯನಗರ ರಾಜ್ ಕುಮಾರ್ ರಸ್ತೆಯಲ್ಲಿ ಈ ಘಟನೆ ನಡೆಯುತ್ತಿದೆ. ಕಳೆದ ಒಂದು ವಾರದಿಂದ 3-4 ಮನೆಗಳ ಮೇಲೆ ಕಲ್ಲುಗಳು ಬೀಳುತ್ತಿವೆ ಎನ್ನುತ್ತಿದ್ದಾರೆ ಊರಿನವರು. ಕಲ್ಲು ಎಸೆತದಿಂದ ಇದಾಗಲೇ ಇಬ್ಬರು ಮಹಿಳೆಯರ ತಲೆಗೆ ಗಾಯವಾಗಿದೆ.
ಎಲ್ಲಿಂದ ಯಾವ ಕಡೆ ಯಿಂದ ಕಲ್ಲುಗಳು ಬೀಳುತ್ತಿವೆ ಎಂಬುದೆ ನಿಗೂಢವಾಗಿದೆ. ಪೊಲೀಸ್ ಠಾಣೆಗೆ ದೂರು ನೀಡಿದ್ರು ಯಾವುದೇ ಪ್ರಯೋಜನ ಆಗಿಲ್ಲ ಎಂದು ಜನರು ಆರೋಪಿಸುತ್ತಿದ್ದಾರೆ. ಪ್ರತಿನಿತ್ಯ ಜೀವ ಭಯದಲ್ಲಿ ಓಡಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಸಮಸ್ಯೆ ಬಗೆಹರಿಸಿ ಎಂದು ಜನರು ಆಗ್ರಹಿಸುತ್ತಿದ್ದಾರೆ.