

ನವದೆಹಲಿ: ಭಾರತ ಕರೊನಾದ ಹಾಟ್‌ಸ್ಪಾಟ್ ಆಗಿ ಪರಿಣಮಿಸಿದೆ. ಕರೊನಾ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಏರುತ್ತಲಿದ್ದರೂ, ಕ್ಷಣ ಕ್ಷಣಕ್ಕೂ ಕರೊನಾ ಆತಂಕ ಸೃಷ್ಟಿಸುತಲಿದ್ದು, ಜೀವ ಬಲಿ ಪಡೆಯುತ್ತಿದೆ.
ಇಂಥ ಕ್ಷಣದಲ್ಲಿ, ಭಾರತದ ಜತೆ ನಾವಿದ್ದೇವೆ ಎಂದು ಸಾರಲು ಹಲವು ದೇಶಗಳು ಧೈರ್ಯ ತುಂಬುವ ಕೆಲಸ ಮಾಡುತ್ತಿದೆ. ಭಾರತಕ್ಕೆ ಸ್ಥೈರ್ಯ ತುಂಬಲು ಇದಾಗಲೇ ಹಲವಾರು ದೇಶಗಳು ವಿಭಿನ್ನ ರೀತಿಯಲ್ಲಿ ಪ್ರಯತ್ನಿಸುತ್ತಿವೆ. ಇದಾಗಲೇ ಅಬುದಾಬಿಯ ಕಟ್ಟಡಗಳ ಮೇಲೆ ಭಾರತದ ತ್ರಿವರ್ಣ ಧ್ವಜ ಹಾರಿಸಿಯಾಗಿದೆ.
ಇದೀಗ ಜಗತ್ಪ್ರಸಿದ್ಧ ನಯಾಗಾರ್ ಸರದಿ. ಇಂದು ರಾತ್ರಿ 9.30ರಿಂದ 10 ಗಂಟೆಯವರೆಗೆ ನಯಾಗರ ಫಾಲ್ಸ್‌ನನಲ್ಲಿ ಸ್ಟೇ ಸ್ಟ್ರಾಂಗ್ ಇಂಡಿಯಾ ಎಂದು ಹೇಳಿ ಭಾರತಕ್ಕೆ ಸ್ಥೈರ್ಯ ತುಂಬುವ, ವಿಶೇಷ ಸಂದೇಶ ಸಾರುವ ಲೈಟಿಂಗ್ಸ್ ಪ್ರದರ್ಶನ ನಡೆಯಲಿದೆ.
ಕೆನಡಾದ ಒಂಟಾರಿಯೊದಲ್ಲಿನ ನಯಾಗರಾ ಫಾಲ್ಸ್‌ಗೆ ಇದಾಗಲೇ ತ್ರಿವರ್ಣ ಧ್ವಜದ ಬಣ್ಣದ ಲೈಟಿಂಗ್ಸ್ ಜೋಡಿಸಲಾಗಿದ್ದು, ಈ ಸಂದೇಶ ಸಾರುವ ಮೂಲಕ ಭಾರತಕ್ಕೆ ಬೆಂಬಲ ಸೂಚಿಸಲಿದೆ.