407 ಸಿನಿಮಾದ ಹೆಸರುಗಳನ್ನು ಬಳಸಿ ನೆಚ್ಚಿನ ನಟನ ಫೋಟೋ ಸಿದ್ಧಪಡಿಸಿದ ಅಭಿಮಾನಿ!

fan
Published on

ಮುಂಬೈ: ತಮ್ಮ ನೆಚ್ಚಿನ ನಟ-ನಟಿಯರ ಗಮನ ಸೆಳೆಯಲು ಕೆಲವು ಅಭಿಮಾನಿಗಳು ಏನೆಲ್ಲಾ ಸರ್ಕಸ್​ ಮಾಡುವುದನ್ನು ಕಂಡಿದ್ದೇವೆ. ಕೆಲವರು ರಕ್ತದಿಂದ ನೆಚ್ಚಿನ ತಾರೆಯರ ಹೆಸರನ್ನು ಬರೆದು ಕಳುಹಿಸುವವರೂ ಇದ್ದಾರೆ.

ಆದರೆ ಇಲ್ಲೊಬ್ಬ ಅಭಿಮಾನಿ 407 ಸಿನಿಮಾಗಳ ಹೆಸರನ್ನು ಬರೆಯುವ ಮೂಲಕ ತಮ್ಮ ನೆಚ್ಚಿನ ನಟನ ಭಾವಚಿತ್ರವನ್ನು ಬಿಡಿಸಿದ್ದಾರೆ. ಕೇರಳದ ಈ ಅಭಿಮಾನಿ ಮಲಯಾಳಂ ಚಿತ್ರದ ಖ್ಯಾತ ನಟ ಮಮ್ಮುಟ್ಟಿ ಅವರ ಫೋಟೋವನ್ನು 407 ಚಿತ್ರದ ಹೆಸರುಗಳಿಂದ ರಚಿಸಿದ್ದಾರೆ. ಇದು ಕೂಡ ಅವರೇ ನಟಿಸಿರುವ ಚಿತ್ರಗಳ ಹೆಸರುಗಳು!



ಕೇರಳದ ಮಲಪ್ಪುರಂನ ಅರ್ಷದ್ ಎಂಬ ಅಭಿಮಾನಿ ಇವರು. 407 ಸಿನಿಮಾದ ಹೆಸರುಗಳನ್ನು ಬಳಸಿಕೊಂಡು, ಅಕ್ಷರಗಳ ಮೂಲಕ ಭಾವಚಿತ್ರವನ್ನು ಬಿಡಿಸಿದ್ದಾರೆ. ಈ ಚಿತ್ರಕಲೆ ಇದೀಗ ಏಷ್ಯಾ ಬುಕ್ ಆಫ್ ರೆಕಾಡ್ರ್ಸ್(ಎಬಿಆರ್) ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್​ನಲ್ಲಿ ಸ್ಥಾನ ಗಳಿಸಿದೆ. ಎಬಿಆರ್ ಕಡೆಯಿಂದ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿ ಕೂಡ ಇವರಿಗೆ ಲಭಿಸಿದೆ.

ಮಲಯಾಳಿ ಜತೆಗೆ ತಮಿಳು, ಕನ್ನಡ, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿಯೂ ಕೂಡ ಅಕ್ಷರವನ್ನು ಭಾವಚಿತ್ರದಲ್ಲಿ ಮುದ್ರಿಸಲಾಗಿದೆ. ನಾನು ಮುಮ್ಮಟ್ಟಿಯವರ ದೊಡ್ಡ ಅಭಿಮಾನಿ, ಅವರ ಚಲನಚಿತ್ರಗಳ 407 ಹೆಸರನ್ನು ಐದು ಭಾಷೆಯಲ್ಲಿ ಬರೆಯಲು ನಿರ್ಧರಿಸಿ ಭಾವಚಿತ್ರವನ್ನು ಬಿಡಿಸಿರುವುದಾಗಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net