ಉ.ಪ್ರದೇಶದ ರೈಲು ನಿಲ್ದಾಣಗಳಲ್ಲಿ ಬೃಹತ್​ ಮಂಗಗಳ ಕಟೌಟ್​: ಕಾರಣ ಕೇಳಿದ್ರೆ ಅಚ್ಚರಿಯಾಗೋದು ಗ್ಯಾರೆಂಟಿ!

monkey
Published on

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರ ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಮಂಗಗಳ ಕಾಟ ಹೆಚ್ಚಾಗಿದ್ದು, ಅದಕ್ಕೆ ಹೊಸ ಉಪಾಯವನ್ನು ಕಂಡುಕೊಳ್ಳಲಾಗಿದೆ. ಅದೇನೆಂದರೆ ಮಂಗನಿಂದಲೇ ಮಂಗವನ್ನು ಓಡಿಸುವ ಉಪಾಯ!

ಇದೆಂಥ ಉಪಾಯ ಅಂತೀರಾ? ರೈಲ್ವೆ ನಿಲ್ದಾಣದ ಪ್ರಮುಖ ಸ್ಥಳಗಳಲ್ಲಿ ಕೋತಿಗಳ ಪೋಸ್ಟರ್‌ಗಳು ಹಾಗೂ ದೊಡ್ಡ ಕಟೌಟ್‌ಗಳನ್ನು ಹಾಕಲಾಗಿದೆ. ಅವುಗಳ ಬಳಿ ಸದ್ದು ಕೇಳುವಂತೆ ಸ್ಪೀಕರ್‌ಗಳನ್ನು ಅಳವಡಿಸಲಾಗಿದೆ.

ಮಂಗಗಳನ್ನು ಹೆದರಿಸಲು ಹೀಗೆ ಮಾಡಲಾಗಿದೆ. ಉತ್ತರ ಮಧ್ಯ ರೈಲ್ವೆ ವಿಭಾಗವೂ ಈ ಪ್ರಯೋಗವನ್ನು ಕಾನ್ಪುರ್‌ ಸೆಂಟ್ರಲ್ ನಿಲ್ದಾಣದಲ್ಲಿ ಪ್ರಾರಂಭಿಸಲಾಗಿದ್ದು, ಪ್ರಯೋಗ ಏಪ್ರಿಲ್ 30 ರವರೆಗೆ ನಡೆಯಲಿದೆ. ಇದು ಯಶಸ್ವಿಯಾದರೆ, ಪಂಕಿ ರೈಲ್ವೆ ನಿಲ್ದಾಣ ಹಾಗೂ ಇತರ ನಿಲ್ದಾಣಗಳಲ್ಲಿ ಅಳವಡಿಸಲಾಗುತ್ತದೆ ಎಂದಿದ್ದಾರೆ ಅಧಿಕಾರಿಗಳು.

ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಮೇಲೆ ಮಂಗಗಳ ದಾಳಿ ಹೆಚ್ಚುತ್ತಿದ್ದು, ಹಲವರ ಪ್ರಾಣಕ್ಕೂ ಕುತ್ತಾಗಿದೆ. ಈ ಹಿನ್ನೆಲೆಯಲ್ಲಿ ಈ ಹೊಸ ಪ್ರಯೋಗ ಮಾಡಿದ್ದೇವೆ. ಒಂದು ವೇಳೆ ಯಶಸ್ವಿಯಾದರೆ ಉತ್ತರ ಮಧ್ಯ ರೈಲ್ವೆ (ಎನ್‌ಸಿಆರ್) ವಿಭಾಗದ ಇತರ ರೈಲು ನಿಲ್ದಾಣಗಳಿಗೂ ಇದನ್ನು ವಿಸ್ತರಿಸುವುದಾಗಿ ಎನ್‌ಸಿಆರ್‌ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಮಿತ್ ಕುಮಾರ್ ಸಿಂಗ್ ಹೇಳಿದ್ದಾರೆ.

ಪ್ರಯಾಣಿಕರು ಉಳಿದ ಆಹಾರವನ್ನು ಕೋತಿಗಳಿಗೆ ತಿನ್ನಿಸುವುದರಿಂದ ಇಂತಹ ಸಮಸ್ಯೆ ಶುರುವಾಗಿದೆ. ಮಂಗಗಳು ಆಹಾರ ಸಿಗದಿದ್ದಾಗ ಆಕ್ರಮಣಕಾರಿಯಾಗಿ ತಿರುಗಿ ಪ್ರಯಾಣಿಕರ ಮೇಲೆ ದಾಳಿ ಮಾಡುತ್ತವೆ ಎನ್ನುವುದು ಅಧಿಕಾರಿಗಳ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net