ಶಾಕಿಂಗ್‌! ಜಿಪಂ ಟಿಕೆಟ್‌ಗಾಗಿ ಮಂಗಗಳ ರುಂಡ-ಮುಂಡ ಬೇರೆ ಮಾಡಿ ನೇತು ಹಾಕಿದ ಪಾಪಿ...

monkey
Published on

ಹಾವೇರಿ: ಜಿಲ್ಲಾ ಪಂಚಾಯಿತಿಯ ಟಿಕೆಟ್‌ಗಾಗಿ ಎರಡು ಮಂಗಗಳ ತಲೆಗಳನ್ನು ಕಟ್‌ ಮಾಡಿ ಹೂತು ಹಾಕಿರುವ ಭಯಾನಕ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ತಿಪಲಾಪುರ ಗ್ರಾಮದಲ್ಲಿ ನಡೆದಿದೆ.

ಲಾಕಡೌನ್ ವೇಳೆ ಬ್ಯಾಡಗಿಯಲ್ಲಿ ಇಂಥದ್ದೊಂದು ಘಟನೆ ನಡೆದಿದ್ದು, ರುಂಡ ಮಂಡ ಮಾಡಿ ಆಂಜನೇಯ ದೇವಸ್ಥಾನದಲ್ಲಿ ನೇತು ಹಾಕಲಾಗಿದೆ. ಎರಡು ವಾರಗಳ ಹಿಂದೆ ಈ ಘಟನೆ ನಡೆದಿದ್ದು ಇದೀಗ ಬೆಳಕಿಗೆ ಬಂದಿದೆ.

2 ಮಂಗಗಳ ರುಂಡ ಕತ್ತರಿಸಿ, ಹುಗಿದು ಪೂಜೆ ಮಾಡಿದ್ದ ಗ್ರಾಮದ ರಾಜಕೀಯ ಧುರೀಣನೊಬ್ಬ, ರಾಜಕೀಯ ಉನ್ನತ ಭವಿಷ್ಯಕ್ಕಾಗಿ ಈ ರೀತಿ ಮಾಡಿದ್ದಾನೆ ಎನ್ನಲಾಗಿದೆ.

ಹೀಗೆ ಮಾಡಿದರೆ ಟಿಕೆಟ್‌ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಟಿಕೆಟ್‌ ಸಿಗುತ್ತದೆ ಎಂದು ವಾಮಾಚಾರಿಯೊಬ್ಬ ಈತನಿಗೆ ಹೇಳಿರುವ ಕಾರಣ, ಇಂಥ ಕೃತ್ಯ ಎಸಗಿದ್ದಾನೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆದರೆ ಈ ಘಟನೆಯ ಕುರಿತು ಸತ್ಯಾಂಶ ಹೇಳಲು ಗ್ರಾಮಸ್ಥರ ಭಯ ಪಡುತ್ತಿದ್ದಾರೆ. ಸದ್ಯ ವನ್ಯಜೀವಿ ಸಂರಕ್ಷಣಾ ಕಾಯ್ದೆ

1972 ಅಡಿ ಸ್ವಯಂ ಪ್ರೇರಿತವಾಗಿ ಕೇಸ್ ದಾಖಲಿಸಿಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

ಮಂಗಗಳನ್ನು ಕೊಂದವ ಮಾತ್ರವಲ್ಲದೇ ಅದರ ಹಿಂದೆ ಇರುವವರನ್ನು ಕೂಡ ಸುಮ್ಮನೇ ಬಿಡುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net