

ಗುಂಟೂರು (ಆಂಧ್ರಪ್ರದೇಶ): ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತಂದೆ-ಮಗ ಸೇರಿ ಮರುಬಳಕೆ ಮಾಡುವ ವಸ್ತುಗಳನ್ನು ಬಳಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರ 14 ಅಡಿ ಎತ್ತರದ ಪ್ರತಿಮೆ ನಿರ್ಮಿಸಿದ್ದಾರೆ. ಆಂಧ್ರದ ತೆನಾಲಿಯ ಕೆ.ವೆಂಕಟೇಶ್ವರ ರಾವ್ ಹಾಗೂ ಅವರ ಮಗ ರವಿಚಂದ್ರ ಈ ಪ್ರತಿಮೆ ನಿರ್ಮಿಸಿದ್ದಾರೆ. ಬಿಜೆಪಿ ಕಾರ್ಪೊರೇಟರ್ ಮೋಹನ್ ರಾಜು ಈ ಪ್ರತಿಮೆಯನ್ನು ನಿರ್ಮಾಣ ಮಾಡಿಸಿದ್ದಾರೆ. ಈ ವಿಗ್ರಹವನ್ನು ಇದೇ 17ರಂದು ಮೋಹನ್ ರಾಜು ಬೆಂಗಳೂರಿನ ಉದ್ಯಾನವೊಂದರಲ್ಲಿ ಪ್ರತಿಷ್ಠಾಪನೆ ಮಾಡಲಿದ್ದಾರೆ.
ಇದೇ 17ರ ಶುಕ್ರವಾರದಂದು ಪ್ರಧಾನಿ ಮೋದಿ ಹುಟ್ಟುಹಬ್ಬವಿರುವ ಹಿನ್ನೆಲೆಯಲ್ಲಿ ನಿಮಿತ್ತ ಅಂದೇ ನಗರದ ಬೊಮ್ಮನಹಳ್ಳಿ ವಾರ್ಡ್ ಉದ್ಯಾನವನ ಒಂದರಲ್ಲಿ ಪ್ರತಿಷ್ಠಾಪನೆ ಮಾಡಲು ಸಿದ್ಧತೆಯಾಗಿದೆ ಎಂದು ಅವರು ಹೇಳಿದ್ದಾರೆ. ಮರುಬಳಕೆ ವಸ್ತುಗಳನ್ನು ಬಳಸಿ ಎರಡು ತಿಂಗಳ ಕಾಲದಲ್ಲಿ ಈ ಪ್ರತಿಮೆ ನಿರ್ಮಾಣವಾಗಿದೆ.
ಪ್ರತಿಮೆಯು ಸುಮಾರು 2 ಟನ್ ಆಟೋಮೊಬೈಲ್ ಸ್ಕ್ಯ್ರಾಪ್ ಬಳಸಲಾಗಿದೆ. ಈ ಪ್ರತಿಮೆಗಾಗಿ, ಹೈದರಾಬಾದ್, ವಿಶಾಖಪಟ್ಟಣಂ, ಚೆನ್ನೈ, ಗುಂಟೂರಿನಿಂದ ಆಟೋಮೊಬೈಲ್ ತ್ಯಾಜ್ಯಗಳನ್ನು ಸಂಗ್ರಹಿಸಿ ತರಲಾಗಿತ್ತು. ಬೈಕ್ ಚೈನ್, ಗೇರ್ ವೀಲ್, ಕಬ್ಬಿಣದ ರಾಡ್‌ಗಳು, ಸ್ಕ್ರೂ, ನಟ್, ಬೋಲ್ಟ್‌ಗಳನ್ನು ಬಳಸಿ ಪ್ರತಿಮೆ ನಿರ್ಮಿಸಲಾಗಿದೆ ಎಂದು ತಂದೆ ಮಗ ಹೇಳಿದ್ದಾರೆ.
'ತೆನಾಲಿಯ ಸೂರ್ಯ ಶಿಲ್ಪಶಾಲಾದಲ್ಲಿ ಹತ್ತು ಸದಸ್ಯರ ಸಹಾಯದೊಂದಿಗೆ ಪ್ರತಿಮೆ ನಿರ್ಮಾಣ ಕಾರ್ಯವನ್ನು ಆರಂಭಿಸಿದ್ದೆವು. ಬೈಕ್ ಚೈನ್, ಗೇರ್ ವೀಲ್, ಕಬ್ಬಿಣದ ರಾಡ್‌ಗಳು, ನಟ್, ಬೋಲ್ಟ್ ಮತ್ತು ಇನ್ನಿತರ ಒಡೆದ ಅನುಪಯುಕ್ತ ಲೋಹದ ತುಂಡುಗಳನ್ನು ಇದಕ್ಕೆ ಉಪಯೋಗಿಸಲಾಗಿದೆ ಎಂದು ವೆಂಕಟೇಶ್ವರ ರಾವ್ ತಿಳಿಸಿದ್ದಾರೆ. ಮುಖದ ಭಾವನೆಗಳನ್ನು, ಕೇಶ ವಿನ್ಯಾಸ, ಗಡ್ಡ ಮತ್ತು ಕನ್ನಡಕದ ಭಾಗಗಳನ್ನು ತಯಾರಿಸಲು ಜಿಐ ವೈರ್‌ಗಳನ್ನು ತಯಾರಿಸಲಾಗಿದೆ. 600ಕ್ಕೂ ಹೆಚ್ಚು ಗಂಟೆ ತೆಗೆದುಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ವೆಂಕಟೇಶ್ವರ ರಾವ್ ಅವರು ತಮ್ಮ ಕುಟುಂಬದಲ್ಲಿ ಐದನೇ ಪೀಳಿಗೆಯ ಶಿಲ್ಪಿಯಾಗಿದ್ದಾರೆ. ಅವರ ಮಗ ರವಿ ಲಲಿತ ಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇದಕ್ಕೂ ಮುನ್ನ ತಂದೆ-ಮಗ ಸೇರಿ 75 ಸಾವಿರ ನಟ್ ಮತ್ತು ಬೋಲ್ಟ್‌ಗಳನ್ನು ಬಳಸಿ ಹತ್ತು ಅಡಿ ಎತ್ತರದ ಗಾಂಧಿ ಪ್ರತಿಮೆಯನ್ನು ನಿರ್ಮಿಸಿದ್ದರು.
ಇಲ್ಲಿದೆ ನೋಡಿ ವಿಡಿಯೋ