ಫುಟ್‌ಪಾಥ್‌ ಮೇಲೆ ಕಾರು ಹರಿಸಿದ 9ನೇ ಕ್ಲಾಸ್‌ ಬಾಲಕ! ಓರ್ವ ಬಾಲಕಿ, ಮೂವರು ಮಹಿಳೆಯರ ದಾರುಣ ಸಾವು

accident
Published on

ಹೈದರಾಬಾದ್‌: 9ನೇ ತರಗತಿ ಓದುತ್ತಿರುವ ಬಾಲಕನೊಬ್ಬ ಕಾರು ಚಾಲನೆ ಮಾಡಿ ನಾಲ್ವರ ಸಾವಿಗೆ ಕಾರಣವಾಗಿರುವ ಭೀಕರ ಘಟನೆ ತೆಲಂಗಾಣದ ಕರೀಮ್​​ನಗರ ಜಿಲ್ಲೆಯಲ್ಲಿ ನಡೆದಿದೆ. ಫುಟ್‌ಪಾಥ್‌ಗೆ ಕಾರು ನುಗ್ಗಿಸಿರುವ ಬಾಲಕ, ಅಲ್ಲಿ ಕುಳಿತಿದ್ದ ಓರ್ವ ಬಾಲಕಿ ಹಾಗೂ ಮೂವರು ಮಹಿಳೆಯರ ಪ್ರಾಣ ಕಿತ್ತುಕೊಂಡಿದ್ದಾನೆ!

ಕಾರಿನಲ್ಲಿ ಒಟ್ಟು ಮೂವರು ಅಪ್ರಾಪ್ತರು ಇದ್ದರು. ಅದರಲ್ಲಿ ಒಬ್ಬಾತ ಕಾರು ಡ್ರೈವ್​​ ಮಾಡುತ್ತಿದ್ದ. ಅತ್ಯಂತ ವೇಗವಾಗಿ ಕಾರು ಚಾಲನೆ ಮಾಡಿದ ಬಾಲಕ, ವಾಹನವನ್ನು ಫೂಟ್​ಪಾತ್​ ಮೇಲೆ ಹರಿಸಿದ್ದಾನೆ. ಅಲ್ಲಿದ್ದ ನಾಲ್ವರ ಪ್ರಾಣ ಹೋಗಿದೆ. ಇವರಲ್ಲಿ ಓರ್ವ 14 ವರ್ಷದ ಬಾಲಕಿ ಹಾಗೂ ಮೂವರು ಮಹಿಳೆಯರು ಸೇರಿದ್ದಾರೆ, ಇಬ್ಬರಿಗೆ ಗಂಭೀರ ಗಾಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮುಂಜಾನೆ 6.50ರ ಹೊತ್ತಿಗೆ ಘಟನೆ ನಡೆದಿದೆ. ಆ ಪ್ರದೇಶದಲ್ಲಿ ದಟ್ಟವಾದ ಮಂಜು ಇತ್ತು. ಕಾರನ್ನು ವೇಗವಾಗಿ ಚಲಾಯಿಸುತ್ತಿದ್ದ ಬಾಲಕ ಕಣ್ಣನ್ನು ಉಜ್ಜಿಕೊಳ್ಳಲು ಸ್ಟೀರಿಂಗ್​​ನಿಂದ ಕೈ ತೆಗೆದಿದ್ದಾನೆ. ಆ ವೇಳೆ ಆರು ನಿಯಂತ್ರಣ ತಪ್ಪಿದೆ. ಗಲಿಬಿಲಿಗೊಂಡ ಬಾಲಕ ಬ್ರೇಕ್​ ಬದಲಿಗೆ ಆಕ್ಸಿಲರೇಟರ್​ ಪ್ರೆಸ್​ ಮಾಡಿದ್ದಾನೆ. ಆಗ ಕಾರು ನೇರವಾಗಿ ಫುಟ್‌ಪಾಥ್‌ ಮೇಲೆ ಕುಳಿತಿದ್ದ ಮಹಿಳೆಯರ ಮೇಲೆ ಕಾರು ಹರಿದಿದ್ದು ಅವರೆಲ್ಲಾ ಮೃತಪಟ್ಟಿದ್ದಾರೆ.

9ನೇ ತರಗತಿಯವರಾಗಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಕಾರು ಅಲ್ಲೇ ಬಿಟ್ಟು, ಎಲ್ಲರೂ ಓಡಿಹೋಗಿದ್ದರು. ನಂತರ ಅವರನ್ನು ಬಂಧಿಸಲಾಗಿದೆ. ಮೂವರು ಅಪ್ರಾಪ್ತರ ವಿರುದ್ಧ ಐಪಿಎಸ್​ ಸೆಕ್ಷನ್​ 304ರಡಿಯಲ್ಲಿ ಪ್ರಕರಣ ದಾಖಲಾಗಿದೆ. ಕಾರು ಡ್ರೈವ್​ ಮಾಡುತ್ತಿದ್ದ ಬಾಲಕನ ತಂದೆ ವಿರುದ್ಧವೂ ಕೇಸ್​ ದಾಖಲಾಗಿದೆ ಎಂದು ತೆಲಂಗಾಣ ಪೊಲೀಸ್‌ ಕಮಿಷನರ್ ವಿ.ಸತ್ಯನಾರಾಯಣ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net